ETV Bharat / sports

IPL 2023: ಕೆಕೆಆರ್ ದಾಳಿಗೆ ಆರ್​ಸಿಬಿ ತತ್ತರ: 123 ರನ್​ಗೆ ಸರ್ವಪತನ, ಹೀನಾಯ ಸೋಲು - ಆರ್​ಸಿಬಿಗೆ 204 ರನ್​​ ಗುರಿ

ಕೋಲ್ಕತ್ತಾ ನೈಟ್ ​ರೈಡರ್ಸ್ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಸೋಲು ಕಂಡಿದೆ.

Etv Bharat
Etv Bharat
author img

By

Published : Apr 6, 2023, 10:27 PM IST

Updated : Apr 7, 2023, 11:38 AM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ತವರಿನಲ್ಲಿ ಮೊದಲ ಪಂದ್ಯ ಗೆದ್ದು ಐಪಿಎಲ್​ನಲ್ಲಿ ಶುಭಾರಂಭ ಮಾಡಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಮುಗ್ಗರಿಸಿದೆ. 205 ರನ್​ಗಳ ಬೃಹತ್​ ಗುರಿ ಬೆನ್ನಟ್ಟಿದ್ದ ಆರ್​ಸಿಬಿ ಕೆಕೆಆರ್​ ಬೌಲರ್​ಗಳ ದಾಳಿಗೆ ನಲುಗಿತು. ಪರಿಣಾಮ 123 ರನ್​ಗಳಿಗೆ ಆಲೌಟ್​ ಆಗಿ ಸೋಲು ಅನುಭವಿಸಿತು.

ಇಲ್ಲಿನ ಈಡನ್ ಗಾರ್ಡನ್ಸ್​ನಲ್ಲಿ ಟಾಸ್​ ಸೋತು ​ಮೊದಲು ಬ್ಯಾಟಿಂಗ್​ಗೆ ಇಳಿದ ನಿತೀಶ್ ರಾಣಾ ಪಡೆ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 204 ರನ್​ಗಳನ್ನು ಪೇರಿಸಿತ್ತು. ಈ ಸವಾಲಿನ ಟಾರ್ಗೆಟ್​ ಬೆನ್ನಟ್ಟಿದ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ನಾಯಕ ಡು ಪ್ಲೆಸಿಸ್ ಉತ್ತಮ ಆರಂಭ ಒದಗಿಸಿ ಭದ್ರ ಅಡಿಪಾಯ ಹಾಕುವ ಮುನ್ಸೂಚನೆ ನೀಡಿದರು.

ಆದರೆ, ತಂಡದ ಮೊತ್ತ 44 ರನ್​ ಆಗಿದ್ದಾಗ ಸುನಿಲ್​ ನರೈನ್​ ಬೌಲಿಂಗ್​ನಲ್ಲಿ ಕೊಹ್ಲಿ (21) ಬೌಲ್ಡ್​ ಆದರು. ಇದರ ಬೆನ್ನಲ್ಲೇ ​ನಾಯಕ ಡು ಪ್ಲೆಸಿಸ್​ (23) ಅವರನ್ನು ವರುಣ್ ಚಕ್ರವರ್ತಿ ಬೌಲ್ಡ್​ ಮಾಡಿ ಶಾಕ್​ ನೀಡಿದರು. ಇದಾದ ಬಳಿಕ ಚಕ್ರವರ್ತಿ ಅವರು ಒಂದೇ ಓವರ್​ನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್ (5)​ ಮತ್ತು ಹರ್ಷಲ್​ ಪಟೇಲ್​ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗೆ ಕಳುಹಿಸಿದರು.

ನಂತರ ಶಾರ್ದೂಲ್​ ಠಾಕೂರ್​ ಎಸೆತದಲ್ಲಿ ಮೈಕಲ್​ ಬ್ರೇಸ್​ವೆಲ್ (19) ಕ್ಯಾಚಿತ್ತು ನಿರ್ಗಮಿಸಿದರು. ಶಹಬಾಜ್ ಅಹ್ಮದ್​ ಅವರನ್ನು 1 ರನ್​ಗೆ ನರೈನ್​ ಔಟ್​ ಮಾಡಿದರು. ಇನ್ನು, ಸುಯಶ್ ಶರ್ಮಾ ಪಾದಾರ್ಪಣೆ ಪಂದ್ಯದಲ್ಲೇ ಆರ್​ಸಿಬಿ ಆಟಗಾರರನ್ನು ಕಾಡಿದರು. ದಿನೇಶ್​ ಕಾರ್ತಿಕ್ (9), ಅನುಜ್​ ರಾವತ್​ (1) ಮತ್ತು ಕರ್ಣ್​ ಶರ್ಮಾ (1) ವಿಕೆಟ್​ ಕಿತ್ತು ಸುಯಶ್​ ಶರ್ಮಾ ಮಿಂಚಿದರು. ಆಕಾಶ್​ ದೀಪ್​ 17 ರನ್​ಗೆ ಔಟಾದರು. ಡೇವಿಡ್​ ವಿಲ್ಲಿ​ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆರ್​ಸಿಬಿ 17.4 ಓವರ್​ಗಳಲ್ಲಿ 123 ರನ್​ಗಳಿಗೆ ಸರ್ವಪತನ ಕಂಡಿತು. ಕೆಕೆಆರ್​ ತಂಡ 81 ರನ್​ನಿಂದ ಗೆಲುವು ಸಾಧಿಸಿತು. ಇದರೊಂದಿಗೆ ಕೋಲ್ಕತ್ತಾ ಐಪಿಎಲ್​ನಲ್ಲಿ ಮೊದಲ ಜಯ ದಾಖಲಿಸಿದರೆ, ಬೆಂಗಳೂರು ಮೊದಲ ಸೋಲು ಕಂಡಿತು.

ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ​ರೈಡರ್ಸ್ ತನ್ನ ಎರಡನೇ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ ಬೃಹತ್​ ಮೊತ್ತ ಕಲೆ ಹಾಕಿತ್ತು. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್​ ಮತ್ತು ಶಾರ್ದೂಲ್​ ಠಾಕೂರ್​ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಕೋಲ್ಕತ್ತಾ ಏಳು ವಿಕೆಟ್​ ನಷ್ಟಕ್ಕೆ 204 ರನ್​ ಪೇರಿಸಿತ್ತು.

ಆರಂಭಿಕ ಆಟಗಾರ ರಹಮಾನುಲ್ಲಾ ಅವರು 3 ಸಿಕ್ಸರ್​ ಮತ್ತು 4 ಬೌಂಡರಿಗಳ ಮೂಲಕ 57 ರನ್​ ಗಳಿಸಿದರು. ಬಳಿಕ ಆಗಮಿಸಿದ ವೆಂಕಟೇಶ್​ ಅಯ್ಯರ್​ (3), ಮಂದೀಪ್​ ಸಿಂಗ್​(0), ನಿತೀಶ್​ ರಾಣಾ (1) ರನ್​ ಗಳಿಸಿ ಪೆವಿಲಿಯನ್​ ಪರೇಡ್​ ನಡೆಸಿದರು. 47 ರನ್​ಗೆ 3 ವಿಕೆಟ್​​ ಕಳೆದುಕೊಂಡು ಸಂಕಷ್ಟದಲ್ಲಿ ಕೋಲ್ಕತ್ತಾ ತಂಡಕ್ಕೆ ರಿಂಕು ಸಿಂಗ್​ ಚೇತರಿಕೆ ನೀಡಿದರು. ರಿಂಕು ಸಿಂಗ್​ 3 ಸಿಕ್ಸರ್​ ಮತ್ತು 2 ಬೌಂಡರಿ ಸಹಾಯದಿಂದ 46 ರನ್​ ಗಳಿಸಿ ತಂಡಕ್ಕೆ ಆಸರೆಯಾದರು.

ಬಳಿಕ ಆಗಮಿಸಿದ ಸ್ಫೋಟಕ ಬ್ಯಾಟರ್ ಆ್ಯಂಡ್ರೆ ರಸೆಲ್​ ಖಾತೆ ತೆರೆಯದೇ ನಿರಾಸೆ ಮೂಡಿಸಿದರು.​ ಈ ವೇಳೆ ಆಗಮಿಸಿದ ಶಾರ್ದೂಲ್​ ಠಾಕೂರ್​ ತಮ್ಮ ಅಬ್ಬರದ ಬ್ಯಾಟಿಂಗ್​ ಮೂಲಕ ಕೇವಲ 29 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಗಳಿಸುವ ಮೂಲಕ 68 ರನ್​ ಗಳಿಸಿ ತಂಡ ಬೃಹತ್​ ರನ್​ ಗಳಿಸುವಲ್ಲಿ ಸಹಕರಿಸಿದರು. ಬೆಂಗಳೂರು ಪರ ಡೇವಿಡ್​ ವಿಲ್ಲೆ, ಕರಣ್​ ಶರ್ಮ ತಲಾ 2 ವಿಕೆಟ್ ಪಡೆದರೆ​, ಮೊಹಮ್ಮದ್​ ಸಿರಾಜ್, ಮೈಕಲ್​ ಬ್ರೇಸ್​ವೆಲ್ , ಹರ್ಷಲ್​ ಪಟೇಲ್​ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ : ಇಂದು ಈಡನ್​ ಗಾರ್ಡನ್​ ಮೈದಾನದಲ್ಲಿ ಹೈವೊಲ್ಟೇಜ್​​ ಪಂದ್ಯ.. ಆರ್​ಸಿಬಿ-ಕೆಕೆಆರ್​ ಮಧ್ಯೆ ಬಿಗ್​ ಫೈಟ್​!

Last Updated : Apr 7, 2023, 11:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.