ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಯಿಂದ ಹೊರಗುಳಿದಿದ್ದ ಭಾರತ ತಂಡ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ.ನಟರಾಜನ್ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರು. ಈಗ ಅವರು ಚೇತರಿಕೆ ಹಾದಿಯಲ್ಲಿದ್ದಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್ ಟ್ವೀಟ್ ಮಾಡಿದೆ .
-
Recovery mode 🔛 for @Natarajan_91
— SunRisers Hyderabad (@SunRisers) May 24, 2021 " class="align-text-top noRightClick twitterSection" data="
Comment with a 💪 to wish him well.#OrangeArmy #OrangeOrNothing pic.twitter.com/xZFAq44nz9
">Recovery mode 🔛 for @Natarajan_91
— SunRisers Hyderabad (@SunRisers) May 24, 2021
Comment with a 💪 to wish him well.#OrangeArmy #OrangeOrNothing pic.twitter.com/xZFAq44nz9Recovery mode 🔛 for @Natarajan_91
— SunRisers Hyderabad (@SunRisers) May 24, 2021
Comment with a 💪 to wish him well.#OrangeArmy #OrangeOrNothing pic.twitter.com/xZFAq44nz9
ಸನ್‌ರೈಸರ್ಸ್ ಹೈದರಾಬಾದ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಟರಾಜನ್ ಅವರ ಫೋಟೋವನ್ನು ಹಂಚಿಕೊಂಡಿದೆ. ನಟರಾಜನ್ ಚೇತರಿಕೆ ಹಾದಿಯಲ್ಲಿದ್ದಾರೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದೆ.
ಬಿಸಿಸಿಐ ನಟರಾಜನ್ ಶೀಘ್ರವಾಗಿ ಚೇತರಿಸಿಕೊಂಡು ಆದಷ್ಟು ಬೇಗ ಮರಳಿ ಟೀಂ ಇಂಡಿಯಾದಲ್ಲಿ ಅವರನ್ನ ನೋಡಲು ಬಯಸುತ್ತೇವೆ ಎಂದು ಹಾರೈಸಿದೆ. ಎಸ್‌ಆರ್‌ಹೆಚ್ ಕೂಡ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.
ಕಳೆದ ವರ್ಷ ತನ್ನ ಯಾರ್ಕರ್ಗಳ ಮೂಲಕ ವಿಶ್ವ ಕ್ರಿಕೆಟ್ನ ಗಮನ ಸೆಳೆದಿದ್ದ 30 ವರ್ಷದ ವೇಗಿ ಯುಎಇನಲ್ಲಿ ನಡೆದಿದ್ದ ಟೂರ್ನಿಯಲ್ಲಿ 16 ವಿಕೆಟ್ ಪಡೆದಿದ್ದರು.
ಈ ಅದ್ಭುತ ಪ್ರದರ್ಶನದ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಸ್ವರೂಪದ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಕೇವಲ ಎರಡು ಪಂದ್ಯಗಳನ್ನಾಡಿದ್ದು, 2 ವಿಕೆಟ್ ಪಡೆದಿದ್ದರು.