ETV Bharat / sports

ತವರು ದೇಶಕ್ಕೆ ಮರಳಿದ್ದು ಸಮಾಧಾನ ತಂದಿದೆ; ಐಪಿಎಲ್​ ಆಟಗಾರ ಕ್ರಿಸ್ ಮಾರಿಸ್​ - ಬಯೋ ಬಬಲ್

ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್​ನಲ್ಲಿ ಭಾಗಿಯಾಗಿದ್ದ ನಾಲ್ವರು ಆಟಗಾರರು ಹಾಗೂ ಇಬ್ಬರು ಕೋಚ್​ಗಳಿಗೆ ಕೊರೊನಾ ಸೋಂಕು ತಗುಲಿದ ನಂತರ ಐಪಿಎಲ್​ ಪಂದ್ಯಾವಳಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಮುಂದೂಡಲಾಗಿತ್ತು. ಹೀಗಾಗಿ ಮಾರಿಸ್​ ತಮ್ಮ ದೇಶದ ಇತರ 10 ಆಟಗಾರರೊಂದಿಗೆ ದಕ್ಷಿಣ ಆಫ್ರಿಕಾಗೆ ಮರಳಿದ್ದಾರೆ.

relieved after returning to home town says chris morris
ತವರು ದೇಶಕ್ಕೆ ಮರಳಿದ್ದು ಸಮಾಧಾನ ತಂದಿದೆ; ಐಪಿಎಲ್​ ಆಟಗಾರ ಕ್ರಿಸ್ ಮಾರಿಸ್​
author img

By

Published : May 7, 2021, 11:22 PM IST

ಜೋಹಾನ್ಸಬರ್ಗ್: ಐಪಿಎಲ್​ನಲ್ಲಿ ಆಡುತ್ತಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟರ್​ ಮತ್ತು ರಾಜಸ್ಥಾನ ರಾಯಲ್ಸ್​ ತಂಡದ ಆಲ್ ರೌಂಡರ್ ಕ್ರಿಸ್ ಮಾರಿಸ್​ ತಾವು ತವರಿಗೆ ಮರಳಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಐಪಿಎಲ್​ ಬಯೋ ಬಬಲ್​ನಲ್ಲಿದ್ದ ಆಟಗಾರರಿಗೂ ಕೊರೊನಾ ಸೋಂಕು ತಗುಲಿದ ನಂತರ ಉಂಟಾದ ಗೊಂದಲದಿಂದ ಪಾರಾದ ಬಗ್ಗೆ ಅವರು ಈಗ ನಿರಾಳರಾಗಿದ್ದಾರೆ.

ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್​ನಲ್ಲಿ ಭಾಗಿಯಾಗಿದ್ದ ನಾಲ್ವರು ಆಟಗಾರರು ಹಾಗೂ ಇಬ್ಬರು ಕೋಚ್​ಗಳಿಗೆ ಕೊರೊನಾ ಸೋಂಕು ತಗುಲಿದ ನಂತರ ಐಪಿಎಲ್​ ಪಂದ್ಯಾವಳಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಮುಂದೂಡಲಾಗಿತ್ತು. ಹೀಗಾಗಿ ಮಾರಿಸ್​ ತಮ್ಮ ದೇಶದ ಇತರ 10 ಆಟಗಾರರೊಂದಿಗೆ ದಕ್ಷಿಣ ಆಫ್ರಿಕಾಗೆ ಮರಳಿದ್ದಾರೆ.

"ನಿಜ, ನಾನೀಗ ಸಾಕಷ್ಟು ನಿರಾಳನಾಗಿದ್ದೇನೆ. ಬಯೋಬಬಲ್​ ನಲ್ಲಿದ್ದ ಆಟಗಾರರಿಗೂ ಸೋಂಕು ಕಾಣಿಸಿಕೊಳ್ಳಲಾರಂಭಿಸಿದಾಗ ಸಹಜವಾಗಿಯೇ ಬಯೋಬಬಲ್ ಬಗ್ಗೆ ಎಲ್ಲರೂ ಪ್ರಶ್ನೆ ಕೇಳಲಾರಂಭಿಸಿದರು. ಎಲ್ಲರೂ ಇದರಿಂದ ಖಂಡಿತವಾಗಿಯೂ ಆತಂಕಕ್ಕೊಳಗಾದರು. ಕೋಲ್ಕತ್ತಾ ಮತ್ತು ರಾಯಲ್ ಚಾಲೆಂಜರ್ಸ್​ ಮಧ್ಯೆ ನಡೆಯಬೇಕಿದ್ದ ಪಂದ್ಯವನ್ನು ಅವರು ಮುಂದೂಡಿದಾಗ ಇಡೀ ಪಂದ್ಯಾವಳಿಯೇ ಮುಂದೂಡಲ್ಪಡುವ ಒತ್ತಡದಲ್ಲಿದೆ ಎಂಬುದು ನಮಗೆ ತಿಳಿದಿತ್ತು." ಎಂದು ಕ್ರಿಸ್​ ಮಾರಿಸ್​ ಮಾಧ್ಯಮಗಳಿಗೆ ಹೇಳಿದ್ದಾರೆ. ಸದ್ಯ ಮಾರಿಸ್​ ತಮ್ಮ ಮನೆಯಲ್ಲಿ 10 ದಿನಗಳ ಕ್ವಾರಂಟೈನ್​ನಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.