ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ತಮ್ಮ ಹೆಸರಿಗೆ ಅನಗತ್ಯ ದಾಖಲೆ ನಿರ್ಮಾಣವಾಗಿದೆ. ಅವರು ಡಕ್‌ನಲ್ಲಿ ಔಟಾದರು, ಹೀಗಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಡಕ್‌ಗಳೊಂದಿಗೆ ಬ್ಯಾಟ್ಸ್‌ಮನ್ ಆದರು. ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 17 ಡಕ್ ಔಟ್ ಆಗಿದ್ದಾರೆ.
-
.@CameronGreen_ & @ShubmanGill batted well for @mipaltan. 😜
— Sachin Tendulkar (@sachin_rt) May 21, 2023 " class="align-text-top noRightClick twitterSection" data="
Amazing innings by @imVkohli too to score back-to-back 100’s. They all had their methods & were in the class of their own.
So happy to see MI in the playoffs. Go Mumbai. 💙 #AalaRe #MumbaiMeriJaan #IPL2023 pic.twitter.com/D5iYacNEqc
">.@CameronGreen_ & @ShubmanGill batted well for @mipaltan. 😜
— Sachin Tendulkar (@sachin_rt) May 21, 2023
Amazing innings by @imVkohli too to score back-to-back 100’s. They all had their methods & were in the class of their own.
So happy to see MI in the playoffs. Go Mumbai. 💙 #AalaRe #MumbaiMeriJaan #IPL2023 pic.twitter.com/D5iYacNEqc.@CameronGreen_ & @ShubmanGill batted well for @mipaltan. 😜
— Sachin Tendulkar (@sachin_rt) May 21, 2023
Amazing innings by @imVkohli too to score back-to-back 100’s. They all had their methods & were in the class of their own.
So happy to see MI in the playoffs. Go Mumbai. 💙 #AalaRe #MumbaiMeriJaan #IPL2023 pic.twitter.com/D5iYacNEqc
ಈ ಪಟ್ಟಿಯಲ್ಲಿರುವವರು: ರೋಹಿತ್ ಶರ್ಮಾ 16 ಬಾರಿ ಶೂನ್ಯಕ್ಕೆ ಔಟಾದ ಕಾರಣ ಎರಡನೇ ಸ್ಥಾನದಲ್ಲಿದ್ದಾರೆ. ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸಿದ್ದಾರೆ. ಮಂದೀಪ್ ಸಿಂಗ್ 15 ಡಕ್‌ಗಳೊಂದಿಗೆ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ. ಸುನಿಲ್ ನರೈನ್, ಆಲ್ ರೌಂಡರ್ ಐಪಿಎಲ್‌ನಲ್ಲಿ 15 ಡಕ್ ಔಟ್ಗಳನ್ನು ಹೊಂದಿದ್ದಾರೆ. ಸುನಿಲ್ ನರೈನ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮಾತ್ರ ಆಡಿದ್ದಾರೆ.
ಈ ವರ್ಷ ಡಿಕೆ ಕಳಪೆ ಪ್ರದರ್ಶನ: ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ಬ್ಯಾಟರ್. ಅಂತಾರಾಷ್ಟ್ರೀಯ ತಂಡವನ್ನು ಬಹಳ ವರ್ಷ ಆಡಿ ಅನುಭವ ಹೊಂದಿದ್ದಾರೆ. ಆದರೆ, ಈ ವರ್ಷ ಬೆಂಗಳೂರು ತಂಡದಲ್ಲಿ ಅವರ ಆಟವೇ ನಡೆಯಲಿಲ್ಲ. ಈ ಬಾರಿ ಐಪಿಎಲ್ನಿಂದ ಆರ್ಸಿಬಿ ಹೊರಗುಳಿಯುವಲ್ಲಿ ದಿನೇಶ್ ಕಾರ್ತಿಕ್ ಅವರ ಪಾತ್ರವೂ ಇದೆ ಎಂದರೆ ತಪ್ಪಾಗದು.
ಈ ಆವೃತ್ತಿಯುದ್ದಕ್ಕೂ ಫ್ಲಾಫ್ ಪ್ರದರ್ಶನ ನೀಡಿದ್ದಾರೆ. 13 ಪಂದ್ಯಗಳನ್ನು ಆಡಿರುವ ಅವರು 140 ರನ್ ಕಲೆಹಾಕಿದ್ದಾರೆ. ಪಂದ್ಯವೊಂದಕ್ಕೆ ಸರಾಸರಿ 11.67 ರನ್ ಕಲೆಹಾಕಿದಂತಾಗಿದೆ. ಇಡೀ ಲೀಗ್ನಲ್ಲಿ ಅವರು ಕೇವಲ 104 ಬಾಲ್ಗಳನ್ನು ಎದುರಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರ ಬ್ಯಾಟ್ನಿಂದ ಒಂದೇ ಒಂದು ಅರ್ಧಶತವೂ ಬರಲಿಲ್ಲ. 13 ಬೌಂಡರಿ ಮತ್ತು 5 ಸಿಕ್ಸ್ ಗಳಿಸಿದ್ದೇ ಅವರ ಈ ವರ್ಷದ ಸಾಧನೆ ಎನ್ನಬೇಕಷ್ಟೇ. ಅವರ ಈ ವರ್ಷದ ಉತ್ತಮ ರನ್ 30 ಆಗಿದೆ. 134 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ.
ಕಳೆದ ವರ್ಷ ಆರ್ಸಿಬಿಗೆ ಫಿನಿಶರ್ ರೋಲ್ ಪ್ಲೇ ಮಾಡಿದ್ದ ಡಿಕೆ ಕೊನೆಯ ಓವರ್ಗಳಲ್ಲಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಅವರ ಈ ಬ್ಯಾಟಿಂಗ್ ಕಾರಣ ಬಹಳಾ ವರ್ಷ ಅಂತಾರಾಷ್ಟ್ರೀಯ ತಂಡದಿಂದ ಹೊರಗಿದ್ದ ಅವರು ಟಿ20 ವಿಶ್ವ ಕಪ್ ಟೀಮ್ಗೆ ಆಯ್ಕೆಯಾಗಿದ್ದರು. ಆದರೆ ವಿಶ್ವಕಪ್ನಲ್ಲಿ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು.
ಕೀಪರ್ ಆಗಿಯೂ ಈ ವರ್ಷ ಫೇಲ್: ದಿನೇಶ್ ಕಾರ್ತಿಕ್ ಈ ವರ್ಷ ಆರ್ಸಿಬಿಯಲ್ಲಿ ಕೀಪರ್ ಆಗಿಯೂ ತಮ್ಮ ರೋಲ್ ನಿರ್ವಹಿಸಲಿಲ್ಲ. ಒಂದು ಪಂದ್ಯದಲ್ಲಿ ಉತ್ತಮ ಕ್ಯಾಚ್ ಹಿಡಿದು ಒಂದು ಸ್ಟಂಪ್ ಮಾ ಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. ಕೊನೆಯ ಕೆಲ ಪಂದ್ಯಗಳಲ್ಲಿ ಅನುಜ್ ರಾವುತ್ಗೆ ಕೀಪಿಂಗ್ನ ಅವಕಾಶ ಮಾಡಿಕೊಡಲಾಯಿತು. ನಿನ್ನೆಯ ಕೊನೆಯ ಪಂದ್ಯದಲ್ಲಿ ಅವರು ಇಂಪ್ಯಾಕ್ಟ್ ಆಟಗಾರನ ಬದಲಿಯಾದರು. ಹೀಗಾಗಿ ಕ್ಷೇತ್ರರಕ್ಷಣೆ ವಿಭಾಗದಲ್ಲೂ ಅವರು ಕಾಣಿಸಿಕೊಳ್ಳಲಿಲ್ಲ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಕೋಚ್ ಜೊತೆಗೆ ವಿರಾಟ್ ಕೂಡಾ ನಾಳೆ ಇಂಗ್ಲೆಂಡ್ಗೆ ಪ್ರಯಾಣ