ಅಹಮದಾಬಾದ್ : ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯಲ್ಲಿಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಗೆಲುವು ದಾಖಲು ಮಾಡುವ ತಂಡ ಫೈನಲ್ಗೆ ಪ್ರವೇಶ ಪಡೆದುಕೊಳ್ಳುವುದರ ಜೊತೆಗೆ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಮೊದಲ ಕ್ವಾಲಿಫೈಯರ್ನಲ್ಲಿ ಸೋತ ರಾಜಸ್ಥಾನ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡಿರುವ ಆರ್ಸಿಬಿ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮೊಟೇರಾದ ನರೇಂದ್ರ ಮೋದಿ ಮೈದಾನದಲ್ಲಿ ರಾತ್ರಿ 7:30ಕ್ಕೆ ಪಂದ್ಯ ಆಯೋಜನೆಗೊಂಡಿದೆ.
ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ, ಫೈನಲ್ಗೆ ಲಗ್ಗೆ ಹಾಕುವ ಕನಸು ಕಾಣುತ್ತಿರುವ ಬೆಂಗಳೂರು ಚೊಚ್ಚಲ ಪ್ರಶಸ್ತಿಗೆ ಕೇವಲ ಇನ್ನೆರಡು ಹೆಜ್ಜೆ ಬಾಕಿ ಇದೆ. ಸಂಜು ಸ್ಯಾಮ್ಸನ್ ಬಳಗಕ್ಕೂ ಈ ಪಂದ್ಯ ಪ್ರತಿಷ್ಠೆಯಿಂದ ಕೂಡಿದ್ದು, ತೀವ್ರ ಪೈಪೋಟಿ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ.
ನಾಟಕೀಯ ಬೆಳವಣಿಗೆಯಲ್ಲಿ ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಸ್ಫೋಟಕ ಶತಕ ಹಾಗೂ ಬೌಲರ್ಗಳ ಸಾಂಘಿಕ ಹೋರಾಟದ ಬಲದಿಂದ ಕ್ವಾಲಿಫೈಯರ್ಗೆ ಪ್ರವೇಶ ಪಡೆದಿದೆ. ಆದರೆ, ತಂಡದಲ್ಲಿರುವ ಡುಪ್ಲೆಸಿಸ್, ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್ ಇಂದಿನ ಪಂದ್ಯದಲ್ಲಿ ಆರ್ಭಟಿಸಬೇಕಾಗಿದೆ. ಉಳಿದಂತೆ ತಂಡಕ್ಕೆ ಕಾರ್ತಿಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಆರ್ಸಿಬಿ ಬೌಲಿಂಗ್ ಕೂಡ ಉತ್ತಮವಾಗಿದೆ. ಹ್ಯಾಜಲ್ವುಡ್, ಹರ್ಷಲ್ ಪಟೇಲ್, ಹಸರಂಗ, ಸಿರಾಜ್ ಜೊತೆಗೆ ಕೆಲವೊಮ್ಮೆ ಮ್ಯಾಕ್ಸ್ವೆಲ್ ಕೂಡ ವಿಕೆಟ್ ಪಡೆದುಕೊಳ್ಳುತ್ತಿರುವುದು ತಂಡಕ್ಕೆ ಸಹಕಾರಿಯಾಗಿದೆ. ರಾಜಸ್ಥಾನ ಕೂಡ ಉತ್ತಮ ಬ್ಯಾಟಿಂಗ್ ಪಡೆ ಹೊಂದಿದೆ. ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಲಯದಲ್ಲಿದ್ದಾರೆ. ಆದರೆ, ಗುಜರಾತ್ ವಿರುದ್ಧ ಮೊದಲ ಕ್ವಾಲಿಫೈಯರ್ನಲ್ಲಿ ಸೋಲು ಕಂಡಿದ್ದು, ತಂಡ ಇಂದು ಪುಟಿದೇಳುವ ತವಕದಲ್ಲಿದೆ.
-
WINNER TAKES ALL. 👊🏻
— Royal Challengers Bangalore (@RCBTweets) May 27, 2022 " class="align-text-top noRightClick twitterSection" data="
Stage is set. ✅
It’s GAME ON. ⚔️ #PlayBold #WeAreChallengers #IPL2022 #Mission2022 #RCB #ನಮ್ಮRCB #PlayOffs #RRvRCB pic.twitter.com/7Sm3mA9RAz
">WINNER TAKES ALL. 👊🏻
— Royal Challengers Bangalore (@RCBTweets) May 27, 2022
Stage is set. ✅
It’s GAME ON. ⚔️ #PlayBold #WeAreChallengers #IPL2022 #Mission2022 #RCB #ನಮ್ಮRCB #PlayOffs #RRvRCB pic.twitter.com/7Sm3mA9RAzWINNER TAKES ALL. 👊🏻
— Royal Challengers Bangalore (@RCBTweets) May 27, 2022
Stage is set. ✅
It’s GAME ON. ⚔️ #PlayBold #WeAreChallengers #IPL2022 #Mission2022 #RCB #ನಮ್ಮRCB #PlayOffs #RRvRCB pic.twitter.com/7Sm3mA9RAz
ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧಕೃಷ್ಣ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಆರ್ ಅಶ್ವಿನ್ ಹಾಗೂ ಬೌಲ್ಟ್ ಇದ್ದು ಎದುರಾಳಿ ತಂಡಕ್ಕೆ ಮಾರಕವಾಗಬಲ್ಲರು. ಐಪಿಎಲ್ನಲ್ಲಿ ಉಭಯ ತಂಡಗಳು ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ರಾಜಸ್ಥಾನ 11 ಹಾಗೂ ಆರ್ಸಿಬಿ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಬೆಂಗಳೂರು(ಸಂಭವನೀಯ ಪ್ಲೇಯಿಂಗ್ XI) : ಡುಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್, ರಜತ್ ಪಾಟಿದಾರ್, ಮಹಿಪಾಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್(ವಿ.ಕೀ), ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್ವುಡ್, ಮೊಹಮ್ಮದ್ ಸಿರಾಜ್
ರಾಜಸ್ಥಾನ ರಾಯಲ್ಸ್ : ಸಂಜು ಸ್ಯಾಮ್ಸನ್(ಕ್ಯಾಪ್ಟನ್), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮಾಯರ್, ಆರ್. ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧಕೃಷ್ಣ, ಯಜುವೇಂದ್ರ ಚಹಲ್, ಮೆಕಾಯ್