ETV Bharat / sports

ಮುಂಬೈ ತಂಡಕ್ಕೆ ನಮ್ಮ ಸಪೋರ್ಟ್​​.. 'ಪ್ರೊಫೈಲ್ ಲೋಗೋ' ಕಲರ್​ ಕೂಡ ಬದಲಿಸಿದ ಆರ್​ಸಿಬಿ

author img

By

Published : May 21, 2022, 4:40 PM IST

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಂಪೂರ್ಣ ಬೆಂಬಲ ಸೂಚಿಸಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ., ಇದೀಗ ಸಾಮಾಜಿಕ ಜಾಲತಾಣದ ತನ್ನ ಲೋಗೋದ ಕಲರ್ ಸಹ ಚೇಂಜ್ ಮಾಡಿದೆ.

RCB Change Profile Pic On Social Media
RCB Change Profile Pic On Social Media

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಇಂದಿನ ಪಂದ್ಯ ಬಹಳ ಮಹತ್ವ ಪಡೆದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಸೆಣಸಲಿದ್ದು, ಈ ಪಂದ್ಯದಲ್ಲಿ ರೋಹಿತ್​ ಬಳಗದ ಗೆಲುವು ಆರ್​ಸಿಬಿ ತಂಡದ ಪ್ಲೇ-ಆಫ್ ಆಸೆಗೆ ಹಾದಿ ಮಾಡಿಕೊಡಲಿದೆ. ಹೀಗಾಗಿ, ಇಂದಿನ ಪಂದ್ಯಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಸಂಪೂರ್ಣವಾದ ಬೆಂಬಲ ಮುಂಬೈ ಇಂಡಿಯನ್ಸ್​​ಗೆ ಘೋಷಣೆ ಮಾಡಿದೆ.

ಗುಜರಾತ್​ ಟೈಟನ್ಸ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಆರ್​ಸಿಬಿ, ಈಗಾಗಲೇ ತಮ್ಮ ಬೆಂಬಲ ಮುಂಬೈ ಇಂಡಿಯನ್ಸ್​​ ತಂಡಕ್ಕೆ ಎಂದು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಾಮಾಜಿಕ ಜಾಲತಾಣದ ಟ್ವಿಟರ್​​​ ಅಕೌಂಟ್​​ನಲ್ಲಿ ಲೋಗೋ ಕಲರ್ ಕೂಡ ಬದಲಾವಣೆ ಮಾಡಿದೆ. ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಲೋಗೋ ಕಲರ್​ ರೆಡ್​ ಆಗಿದ್ದು, ಇದೀಗ ಮುಂಬೈ ಇಂಡಿಯನ್ಸ್​​ ತಂಡಕ್ಕೆ ಸಪೋರ್ಟ್ ಮಾಡುವ ಸಲುವಾಗಿ ಬ್ಲೂ ಕಲರ್​​ ಲೋಗೋ ಹಾಕಿಕೊಂಡಿದೆ. ಈ ಮೂಲಕ ರೋಹಿತ್​ ಬಳಗಕ್ಕೆ ಸಪೋರ್ಟ್ ಮಾಡಿದೆ.

#NewProfilePic pic.twitter.com/IqRXDRDQ0E

— Royal Challengers Bangalore (@RCBTweets) May 21, 2022

ಇಂಡಿಯನ್​​ ಪ್ರಿಮೀಯರ್ ಲೀಗ್​ನಲ್ಲಿ ಆರ್​ಸಿಬಿ ಆಡಿರುವ 14 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ದಾಖಲು ಮಾಡಿ 16 ಪಾಯಿಂಟ್​ಗಳಿಕೆ ಮಾಡಿದ್ದು, ಸದ್ಯ 4ನೇ ಸ್ಥಾನದಲ್ಲಿದೆ. ಇಂದು ಕೊನೆಯ ಲೀಗ್​ ಪಂದ್ಯದಲ್ಲಿ ಮುಂಬೈ ಹಾಗೂ ಡೆಲ್ಲಿ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿದರೆ, ಆರ್​ಸಿಬಿ ಪ್ಲೇ- ಆಫ್​​ ಪ್ರವೇಶ ಪಡೆದುಕೊಳ್ಳಲಿದೆ.

ಇದನ್ನೂ ಓದಿ: ಮುಂಬೈ.. ಮುಂಬೈ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಬಳಗಕ್ಕೆ ಕೊಹ್ಲಿ, ಡುಪ್ಲೆಸಿಸ್​​ ಬೆಂಬಲ

ಗುಜರಾತ್​ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ್ದ ಡುಪ್ಲೆಸಿಸ್​ ​ - ವಿರಾಟ್​, ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ಮುಂಬೈ ತಂಡಕ್ಕೆ ಬೆಂಬಲ ಸೂಚಿಸಲಿದ್ದೇವೆ. ಮುಂಬೈ ತಂಡಕ್ಕೆ ಮತ್ತಿಬ್ಬರು ಬೆಂಬಲಿಗರು ಸೇರಿಕೊಂಡಿದ್ದು, ನಾವು 25 ಸದಸ್ಯರನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಕ್ಯಾಪ್ಟನ್ ಡುಪ್ಲೆಸಿಸ್​, ಮುಂಬೈ.. ಮುಂಬೈ ಎಂದು ಜೈಕಾರ ಹಾಕಿದ್ದು, ಕ್ರೀಡಾಂಗಣದಲ್ಲಿ ನಾವು ಮುಂಬೈ ತಂಡಕ್ಕೆ ಬೆಂಬಲ ನೀಡಲಿದ್ದೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.