ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಮತ್ತು ಐಪಿಎಲ್‌ನಲ್ಲಿ ಸಿಎಸ್‌ಕೆ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ಪತ್ನಿ ರಿವಾಬಾ ಜಡೇಜಾ ಜೊತೆ ಪ್ರಧಾನಿ ನಿವಾಸಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ರಿವಾಬಾ ಜಡೇಜಾ ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಿಜೆಪಿ ಶಾಸಕಿಯಾಗಿದ್ದಾರೆ. ಗುಜರಾತ್‌ನ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಶಾಸಕಿಯಾಗಿದ್ದಾರೆ. ರವೀಂದ್ರ ಜಡೇಜಾ ಮತ್ತು ರಿವಾಬಾ ತಮ್ಮ ಇನ್‌ಸ್ಟಾಗ್ರಾಮ್, ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಸರ್ ಅವರನ್ನು ಭೇಟಿ ಮಾಡಿದ್ದು ತುಂಬಾ ಖುಷಿ ತಂದಿದೆ. ನಮ್ಮ ತಾಯ್ನಾಡಿಗಾಗಿ ನೀವು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದೀರಿ. ನೀವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಎಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ' ಎಂದು ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ರಿವಾಬಾ ಜಡೇಜಾ,'ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದು ಎಂದರೆ ಅನಂತ ಸಾಮರ್ಥ್ಯವನ್ನು ಭೇಟಿಯಾದಂತೆ ಮತ್ತು ಅನಂತ ಸಾಧ್ಯತೆಗಳನ್ನು ಸಾಧ್ಯವಾಗಿಸಲು ನಿರ್ದೇಶನ ಮತ್ತು ಶಕ್ತಿಯನ್ನು ಪಡೆಯುವುದು. ನಿಮ್ಮ ಮಾರ್ಗದರ್ಶನ ಯಾವಾಗಲೂ ಸ್ಫೂರ್ತಿ ನೀಡುತ್ತದೆ. ಭೇಟಿಗೆ ಸಮಯ ನೀಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
-
It was great meeting you @narendramodi saheb🙏
— Ravindrasinh jadeja (@imjadeja) May 16, 2023 " class="align-text-top noRightClick twitterSection" data="
You are a prime example of hardwork & dedication for our motherland!
I'm sure you will continue to inspire everyone in the best way possible 💪 pic.twitter.com/BGUOpUiXa0
">It was great meeting you @narendramodi saheb🙏
— Ravindrasinh jadeja (@imjadeja) May 16, 2023
You are a prime example of hardwork & dedication for our motherland!
I'm sure you will continue to inspire everyone in the best way possible 💪 pic.twitter.com/BGUOpUiXa0It was great meeting you @narendramodi saheb🙏
— Ravindrasinh jadeja (@imjadeja) May 16, 2023
You are a prime example of hardwork & dedication for our motherland!
I'm sure you will continue to inspire everyone in the best way possible 💪 pic.twitter.com/BGUOpUiXa0
ಇದನ್ನೂ ಓದಿ: ಶರ್ಟ್ ಮೇಲೆ ಧೋನಿಯ ಹಸ್ತಾಕ್ಷರ ಪಡೆದದ್ದು ನನಗೆ ಭಾವನಾತ್ಮಕ ಕ್ಷಣ: ಸುನಿಲ್ ಗವಾಸ್ಕರ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಲ್ರೌಂಡರ ಆಗಿರುವ ಜಡೇಜಾ, 13.83ರ ಸರಾಸರಿ ಮತ್ತು 6.38ರ ಎಕಾನಮಿ ರೇಟ್‌ನೊಂದಿಗೆ ಈ ಆವೃತ್ತಿಯ ಐಪಿಎಲ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. 305 ಟಿ20ಗಳಲ್ಲಿ ಜಡೇಜಾ 29.96 ಸರಾಸರಿಯಲ್ಲಿ 210 ವಿಕೆಟ್‌ಗಳನ್ನು 7.54 ಎಕಾನಮಿ ದರದಲ್ಲಿ ಪಡೆದಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಜಡೇಜ ಭಾರತಕ್ಕಾಗಿ 64 ಟಿ20 ಪಂದ್ಯಗಳನ್ನು ಆಡಿದ್ದು, 28.49 ಸರಾಸರಿಯಲ್ಲಿ 7.04 ಎಕಾನಮಿ ದರದಲ್ಲಿ 51 ವಿಕೆಟ್‌ಗಳನ್ನು ಪಡೆದಿದ್ದಾರೆ. ಜಡೇಜಾ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಲಿದ್ದಾರೆ.
![Ravindra Jadeja and his wife Rivaba Jadeja met Prime Minister Narendra Modi](https://etvbharatimages.akamaized.net/etvbharat/prod-images/18519169_thumb.jpg)
ಯೋಗಿ ಆದಿತ್ಯನಾಥ್ ಭೇಟಿಯಾದ ಚಾವ್ಲಾ: ಇಂದು (ಮೇ 16) ಐಪಿಎಲ್‌ನ 63 ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮುಂಬೈ ಇಂಡಿಯನ್ಸ್ ಸ್ಪಿನ್ ಬೌಲರ್ ಪಿಯೂಷ್ ಚಾವ್ಲಾ ಪಂದ್ಯಕ್ಕೂ ಮುನ್ನ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಒಂದು ಜಿಲ್ಲೆಗೆ ಒಂದು ಉತ್ಪನ್ನ ಎಂಬ ಬ್ಯಾಗ್ ಅನ್ನು ಪಿಯೂಷ್ ಅವರಿಗೆ ಉಡುಗೊರೆಯಾಗಿ ನೀಡಿದ ಸಿಎಂ ಯೋಗಿ, ಮಂಗಳವಾರ ಸಂಜೆ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಶರ್ಟ್ ಮೇಲೆ ಧೋನಿಯ ಹಸ್ತಾಕ್ಷರ ಪಡೆದದ್ದು ನನಗೆ ಭಾವನಾತ್ಮಕ ಕ್ಷಣ: ಸುನಿಲ್ ಗವಾಸ್ಕರ್