ಗುವಾಹಟಿ (ಅಸ್ಸೋಂ): ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಇಂದು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿದೆ. ತವರು ಪಿಚ್ನಲ್ಲಿ ಕಳೆದ ಪಂದ್ಯದಲ್ಲಿ ಸೋಲು ಕಂಡಿದ್ದ ರಾಜಸ್ಥಾನಕ್ಕೆ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ವಿವಾಹದ ಕಾರಣ ಮಿಚೆಲ್ ಮಾರ್ಷ್ ತವರಿಗೆ ಮರಳಿದ್ದಾರೆ.
ರಾಜಸ್ಥಾನದ ಎರಡನೇ ತವರು ಮೈದಾನವಾದ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯ ನಡೆಯುತ್ತಿದೆ. ಕಳೆದೆರಡು ಪಂದ್ಯದಲ್ಲಿ ರಾಜಸ್ಥಾನ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಸೋಲನುಭವಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಇದೇ ಪಿಚ್ನಲ್ಲಿ ಸಂಜು ಸ್ಯಾಮ್ಸನ್ ಪಡೆ ಆಡಿದ್ದು, 5 ರನ್ಗಳಿಂದ ಸೋಲನುಭವಿಸಿತ್ತು.
-
🚨 Toss Update 🚨@DelhiCapitals win the toss and choose to bowl first against @rajasthanroyals
— IndianPremierLeague (@IPL) April 8, 2023 " class="align-text-top noRightClick twitterSection" data="
Follow the match ▶️ https://t.co/FLjLINwjU4#TATAIPL | #RRvDC pic.twitter.com/MroMUzMZrX
">🚨 Toss Update 🚨@DelhiCapitals win the toss and choose to bowl first against @rajasthanroyals
— IndianPremierLeague (@IPL) April 8, 2023
Follow the match ▶️ https://t.co/FLjLINwjU4#TATAIPL | #RRvDC pic.twitter.com/MroMUzMZrX🚨 Toss Update 🚨@DelhiCapitals win the toss and choose to bowl first against @rajasthanroyals
— IndianPremierLeague (@IPL) April 8, 2023
Follow the match ▶️ https://t.co/FLjLINwjU4#TATAIPL | #RRvDC pic.twitter.com/MroMUzMZrX
ಈ ಸೋಲಿಗೆ ಸಂಜು ತೆಗೆದು ಕೊಂಡ ಕೆಲ ಪ್ರಯೋಗಾತ್ಮಕ ನಿರ್ಧಾರಗಳೂ ಕಾರಣ ಎಂದು ಹೇಳಲಾಗುತ್ತಿದೆ. ಆರಂಭಿಕರಾಗಿ ಸ್ಪಿನ್ನರ್ ಕಂ ಆಲ್ರೌಂಡರ್ ಆದ ಆರ್ ಅಶ್ವಿನ್ ಅವರನ್ನು ಪ್ರಯೋಗವಾಗಿ ಇಳಿಸಲಾಗಿತ್ತು. ಅವರು ಬೇಗ ಔಟ್ ಆಗಿದ್ದು, ತಂಡಕ್ಕೆ ಬೃಹತ್ ರನ್ ಬೆನ್ನಟ್ಟಲು ಆರಂಭಿಕ ಜೊತೆಯಾಟ ಸಿಗದೆ ಕೊರತೆ ಅನುಭವಿಸಿತು.
ದೇವದತ್ಗೆ ಕೋಕ್: ರಾಜಸ್ಥಾನ ತಂಡದಲ್ಲಿ ದೇವದತ್ ಪಡಿಕ್ಕಲ್ ಸತತ ಎರಡು ಪಂದ್ಯದಲ್ಲಿ ವಿಫಲವಾಗಿದ್ದು, ಮೂರನೇ ಪಂದ್ಯಕ್ಕೆ ಕೋಕ್ ಕೊಡಲಾಗಿದೆ. ಪ್ರಭಾವಿ ಆಟಗಾರರ ಪಟ್ಟಿಯಲ್ಲೂ ಸ್ಥಾನ ಕಳೆದಿಕೊಂಡಿದ್ದಾರೆ. ಪಡಿಕ್ಕಲ್ ಬದಲಿಯಾಗಿ ಧ್ರುವ್ ಜುರೆಲ್ಗೆ ಅವಕಾಶ ಮಾಡಿಕೊಡಲಾಗಿದೆ. ಕೆಎಂ ಆಸಿಫ್ ಅವರನ್ನು ಸಹ ರಾಜಸ್ಥಾನ ಹೊರಗಿಟ್ಟಿದೆ.
ಮಾರ್ಷ್ ಬದಲು ಪೊವೆಲ್: ಡೆಲ್ಲಿ ಪ್ರಥಮ ಗೆಲುವಿಗಾಗಿ ತಂಡದಲ್ಲಿ ಭರ್ಜರಿ ಸರ್ಜರಿ ಮಾಡಿದೆ. ಪೃಥ್ವಿ ಶಾ, ಸರ್ಫರಾಜ್ ಖಾನ್, ಅಮನ್ ಹಕೀಮ್ ಖಾನ್ರನ್ನು ಹೊರಗಿಟ್ಟಿದೆ. ಮಿಚೆಲ್ ಮಾರ್ಷ್ ವಿವಾಹದ ಕಾರಣ ತಂಡದಿಂದ ಕೆಲ ಸಮಯ ಹೊರಗುಳಿಯಲಿದ್ದು ಸಧ್ಯ ತವರಿಗೆ ಪ್ರಯಾಣ ಬೆಳೆಸಿದ್ದಾರೆ. ತಂಡದಿಂದ ಹೊರಗಿಟ್ಟ ಅಮನ್ ಹಕೀಮ್ ಖಾನ್, ಪೃಥ್ವಿ ಶಾ, ಸರ್ಫರಾಜ್ ಖಾನ್ ಅವರನ್ನು ಪ್ರಭಾವಿ ಆಟಗಾರರ ಪಟ್ಟಿಗೆ ಸೇರಿಸಲಾಗಿದೆ.
ತಂಡಗಳು ಇಂತಿವೆ..: ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ನಾಯಕ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
ಪ್ರಭಾವಿ ಆಟಗಾರ: ನವದೀಪ್ ಸೈನಿ, ಆಕಾಶ್ ವಸಿಷ್ಟ್, ಮುರುಗನ್ ಅಶ್ವಿನ್, ಕೆಎಂ ಆಸಿಫ್, ಡೊನಾವನ್ ಫೆರೇರಾ
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಮನೀಷ್ ಪಾಂಡೆ, ರಿಲೀ ರೋಸ್ಸೌ, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಮುಖೇಶ್ ಕುಮಾರ್
ಪ್ರಭಾವಿ ಆಟಗಾರ: ಅಮನ್ ಹಕೀಮ್ ಖಾನ್, ಪೃಥ್ವಿ ಶಾ, ಸರ್ಫರಾಜ್ ಖಾನ್, ಇಶಾಂತ್ ಶರ್ಮಾ, ಪ್ರವೀಣ್ ದುಬೆ
ಇದನ್ನೂ ಓದಿ: ಧೋನಿ ಬಳಿಕ ಚೆನ್ನೈ ತಂಡಕ್ಕೆ ನಾಯಕನಾರು? ರೇಸ್ನಲ್ಲಿ ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಗಾಯಕ್ವಾಡ್