ETV Bharat / sports

ಮಯಾಂಕ್​ ಮುಂದೆ ಮಂಕಾದ ಮುಂಬೈ​.. ‘ಶಿಖರ’ದೆತ್ತರ ಗುರಿ ಮುಟ್ಟದೇ ಸತತ 5ನೇ ಸೋಲು ಕಂಡ ರೋಹಿತ್​ ಬಳಗ - ಪಂಜಾಬ್ ಕಿಂಗ್ಸ್​ಗೆ ಜಯ

ನಾಯಕ ಮಯಾಂಕ್ ಅಗರ್ವಾಲ್ ಮತ್ತು ಶಿಖರ್​ ಧವನ್​ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 198 ರನ್​ಗಳಿಸಿತ್ತು. ಎದುರಾಳಿ ನೀಡಿದ ಗುರಿಯನ್ನು ಇನ್ನೇನು ತಲುಪಬೇಕೆನ್ನುವಷ್ಟರಲ್ಲಿ ಮುಂಬೈ ಇಂಡಿಯನ್ಸ್​ ತಂಡ ಎಡವಿ ಸೋಲೊಪ್ಪಿಕೊಂಡಿತು.

Punjab Kings won against Mumbai Indians, Mumbai Indians vs Punjab Kings IPL match, IPL 2022, Punjab Kings won the match, Continue lost match by Mumbai Indians, ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್​ಗೆ ಗೆಲುವು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಮಧ್ಯೆ ಐಪಿಎಲ್ ಪಂದ್ಯ, ಐಪಿಎಲ್ 2022, ಪಂಜಾಬ್ ಕಿಂಗ್ಸ್​ಗೆ ಜಯ, ಮುಂಬೈ ಇಂಡಿಯನ್ಸ್‌ಗೆ ಸತತ ಸೋಲು,
ಕೃಪೆ: Twitter
author img

By

Published : Apr 14, 2022, 7:12 AM IST

ಪುಣೆ: ಪಂಜಾಬ್ ಕಿಂಗ್ಸ್ ತಂಡದ ಸ್ಟೈಲೀಶ್​ ಎಡಗೈ ಆಟಗಾರ ಶಿಖರ್​ ಧವನ್ 70 ರನ್​ ಮತ್ತು ಮಯಾಂಕ್ ಅಗರ್ವಾಲ್ 52 ರನ್​ ಹಾಗೂ ಜಿತೇಶ್ ಶರ್ಮಾರ 30 ರನ್​ಗಳ ನೆರವಿನಿಂದ ಎದುರಾಳಿ ತಂಡಕ್ಕೆ 199ರನ್​ಗಳ ಸವಾಲಿನ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್​ ಕೊನೆಯ ಓವರ್​ನಲ್ಲಿ ಎಡವಿ ಸೋಲು ಕಂಡಿತು. ಮುಂಬೈ ಇಂಡಿಯನ್ಸ್​​ಗೆ ಇದು ಸತತ ಐದನೇ ಸೋಲಾಗಿದೆ.

ಪಂಜಾಬ್​ ಇನ್ನಿಂಗ್ಸ್​: ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಅರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ ಅಗರ್ವಾಲ್​ ಮೊದಲ ವಿಕೆಟ್​ಗೆ ಅನುಭವಿ ಶಿಖರ್ ಧವನ್​ ಜೊತೆಯಾಗಿ 97 ರನ್​ಗಳನ್ನು ಕಲೆ ಹಾಕಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಮಯಾಂಕ್ ಈ ಪಂದ್ಯದಲ್ಲಿ ಆರಂಭದಿಂದಲೇ ಅಬ್ಬರಿಸಿದ್ದರು. ಅವರು 32 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 52 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಟಿ20 ಸ್ಪೆಷಲಿಸ್ಟ್​ಗಳಾದ ಜಾನಿ ಬೈರ್​ಸ್ಟೋವ್​ 12 ರನ್​ ಮತ್ತು ಲಿಯಾಮ್ ಲಿವಿಂಗ್​ಸ್ಟೋನ್ 2 ರನ್​ ಕಲೆ ಹಾಕುವ ಮೂಲಕ ಬ್ಯಾಟಿಂಗ್​ನಲ್ಲಿ ವಿಫಲರಾದರು.

ಓದಿ: 4,6,6,6,6...! 'ಬೇಬಿ ಎಬಿಡಿ' ಸಿಡಿಲಬ್ಬರದ ಬ್ಯಾಟಿಂಗ್‌

ಆದರೆ ದಿಢೀರ್ 3 ವಿಕೆಟ್ ಕಳೆದುಕೊಂಡರು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಶಿಖರ್​ ಧವನ್​ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 70 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿ ಥಂಪಿ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 15 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ಗಳ ಸಹಿತ ಅಜೇಯ 30 ರನ್​ಗಳಿಸಿದರು. ಇವರಿಗೆ ಸಾಥ್ ನೀಡಿದ ಶಾರುಕ್ 6 ಎಸೆತಗಳಲ್ಲಿ 2 ಸಿಕ್ಸರ್​ಗಳ ಸಹಿತ 15 ರನ್​ ಗಳಿಸಿ ತಂಡದ ಮೊತ್ತವನ್ನು 200ರ ಸನಿಹಕ್ಕೆ ತಂದರು.

ಒಟ್ನಲ್ಲಿ ಪಂಜಾಬ್​ ತಂಡ ನಿಗದಿತ 20 ಓವರ್​ಗಳಿಗೆ 5 ವಿಕೆಟ್ ಕಳೆದುಕೊಂಡು 198ರನ್​ಗಳಿಸಿತ್ತು. ಮುಂಬೈ ಇಂಡಿಯನ್ಸ್ ಪರ ಬೇಸಿಲ್ ಥಂಪಿ 47ಕ್ಕೆ 2 ವಿಕೆಟ್​, ಜಸ್ಪ್ರೀತ್ ಬುಮ್ರಾ 28ಕ್ಕೆ 1 ವಿಕೆಟ್​, ಮುರುಗನ್ ಅಶ್ವಿನ್ 34ಕ್ಕೆ 1 ವಿಕೆಟ್​, ಜಯದೇವ್ ಉನಾದ್ಕಟ್ 44ಕ್ಕೆ 1 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್​: ಬೃಹತ್​ ಮೊತ್ತದ ಗುರಿಯನ್ನು ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್​ ತಂಡ ಪವರ್​ಪ್ಲೇ ಒಳಗೆ ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ರೋಹಿತ್ ಶರ್ಮಾ 17 ಎಸೆತಕ್ಕೆ 22 ರನ್​ ಗಳಿಸಿದ್ರೆ, ಇಶಾನ್ ಕಿಶನ್ 6 ಎಸೆತಗಳಲ್ಲಿ ಕೇವಲ 3 ರನ್​ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು.

ಇಬ್ಬರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ತಂಡಕ್ಕೆ ಡೆವಾಲ್ಡ್ ಬ್ರೆವಿಸ್ ಮತ್ತು ತಿಲಕ್ ವರ್ಮಾ ಆಸರೆಯಾದರು. ಇಬ್ಬರು ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ಸಾದರು. ಒಡಿಯಾನ್​ ಸ್ಮಿತ್​ ಎಸೆತದಲ್ಲಿ 25 ಬಾಲ್​ಗಳನ್ನು ಎದುರಿಸಿ 49 ರನ್​ಗಳನ್ನು ಕಲೆ ಹಾಕಿದ್ದ ಡೆವಾಲ್ಡ್ ಬ್ರೆವಿಸ್ ಔಟಾಗುವ ಮೂಲಕ ಅರ್ಧಶತಕದಿಂದ ವಂಚಿತರಾದರು. 20 ಎಸೆತಗಳಿಗೆ 30 ರನ್​ ಕಲೆಹಾಕಿ ಭರ್ಜರಿ ಬ್ಯಾಟಿಂಗ್​ ಬೀಸುತ್ತಿದ್ದ ತಿಲಕ್​ ವರ್ಮಾ ಸಹ ಹೆಚ್ಚು ಕ್ರೀಸ್​ನಲ್ಲಿ ನಿಲ್ಲದೇ ಪೆವಿಲಿಯನ್​ ಹಾದಿ ತುಳಿದರು.

ಓದಿ: ಡೆಲ್ಲಿ ಕ್ಯಾಪಿಟಲ್ಸ್​ಗೆ ಹಿನ್ನಡೆ: ಸ್ಟಾರ್​ ಆಲ್​ರೌಂಡರ್​ 3-4 ಪಂದ್ಯಗಳಿಂದ ಹೊರಕ್ಕೆ

ಸೂರ್ಯಕುಮಾರ್​ ಯಾದವ್​ ಜೊತೆಗೂಡಿದ ಕೀರನ್ ಪೊಲಾರ್ಡ್ ಸಹಿತ 10 ರನ್​ಗಳಿಸಿ ಔಟಾದರು. ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದ ಸೂರ್ಯಕುಮಾರ್​ ಯಾದವ್​ 43 ರನ್​ಗಳನ್ನು ಕಲೆ ಹಾಕಿ ರಬಾಡಗೆ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ಆಟಗಾರರು ರನ್​ ಕಲೆಹಾಕಲು ಸಾಧ್ಯವಾಗಲಿಲ್ಲ.

ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗಳ ನಷ್ಟಕ್ಕೆ 186 ರನ್​ಗಳನ್ನ ಕಲೆ ಹಾಕುವ ಮೂಲಕ ಗುರಿ ಮುಟ್ಟದೇ ಮುಂಬೈ ಇಂಡಿಯನ್ಸ್​ ತಂಡ ಸೋಲು ಕಂಡಿತು. ಇದರಿಂದಾಗಿ ರೋಹಿತ್​ ಬಳಗಕ್ಕೆ ಸತತ ಐದನೇ ಸೋಲು ಇದಾಗಿದೆ. ಪಂಜಾಬ್ ಕಿಂಗ್ಸ್ ಪರ ಒಡಿಯಾನ್ ಸ್ಮಿತ್ 4 ವಿಕೆಟ್​ ಪಡೆದು ಮಿಂಚಿದ್ರೆ, ಕಗಿಸೊ ರಬಾಡ 2 ವಿಕೆಟ್​ ಮತ್ತು ವೈಭವ್​ ಆರೋರಾ 1 ವಿಕೆಟ್​ ಪಡೆದು ತಂಡದ ಗೆಲುವಿಗೆ ಕಾರಣರಾದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.