ಧರ್ಮಶಾಲಾ (ಹಿಮಾಚಲ ಪ್ರದೇಶ): ನಡೆಯುತ್ತಿರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಇಂದು ರಾಜಸ್ಥಾನ ರಾಯಲ್ಸ್ (ಆರ್ಆರ್) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮುಖಾಮುಖಿಯಾಗುತ್ತಿವೆ. ಪಂಜಾಬ್ ಕಿಂಗ್ಸ್ನ ಎರಡನೇ ತವರು ಮೈದಾನವಾಗಿ ಧರ್ಮಶಾಲಾವನ್ನು ಆಯ್ಕೆ ಮಾಡಿಕೊಂಡಿದೆ. ಇಲ್ಲಿ ಈ ಆವೃತ್ತಿಯಲ್ಲಿ ನಡೆಯುತ್ತಿರುವ ಎರಡನೇ ಪಂದ್ಯ ಇದಾಗಿದ್ದು, ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಎರಡೂ ತಂಡಗಳಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.
-
🚨 Toss Update 🚨@rajasthanroyals win the toss and elect to field first against @PunjabKingsIPL.
— IndianPremierLeague (@IPL) May 19, 2023 " class="align-text-top noRightClick twitterSection" data="
Follow the match ▶️ https://t.co/3cqivbD81R #TATAIPL | #PBKSvRR pic.twitter.com/7j2KjpH0yr
">🚨 Toss Update 🚨@rajasthanroyals win the toss and elect to field first against @PunjabKingsIPL.
— IndianPremierLeague (@IPL) May 19, 2023
Follow the match ▶️ https://t.co/3cqivbD81R #TATAIPL | #PBKSvRR pic.twitter.com/7j2KjpH0yr🚨 Toss Update 🚨@rajasthanroyals win the toss and elect to field first against @PunjabKingsIPL.
— IndianPremierLeague (@IPL) May 19, 2023
Follow the match ▶️ https://t.co/3cqivbD81R #TATAIPL | #PBKSvRR pic.twitter.com/7j2KjpH0yr
ಇದನ್ನು ಓದಿ: 2000 ರೂ ನೋಟ್ ಹಿಂಪಡೆದುಕೊಂಡ ಆರ್ಬಿಐ...ನೋಟು ಬದಲಾವಣೆಗೆ ಕಾಲಾವಕಾಶ
ಡೆಲ್ಲಿ ವಿರುದ್ಧ ಇದೇ ಪಿಚ್ನಲ್ಲಿ ಪಂಜಾಬ್ ಕಿಂಗ್ಸ್ 15 ರನ್ ಸೋಲನುಭವಿಸಿ ಪ್ಲೇ ಆಫ್ ಪ್ರವೇಶಕ್ಕೆ ಸಂಕಷ್ಟ ತಂದುಕೊಂಡಿತು. ಪಂಜಾಬ್ ಅಂದು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಾರ್ನರ್, ರಿಲೇ ರುಸ್ಸೋವ್ ಮತ್ತು ಪೃಥ್ವಿ ಶಾ ಅವರ ಬ್ಯಾಟಿಂಗ್ನ ನೆರವಿನಿಂದ 214 ರನ್ ಬೃಹತ್ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ಪಂಜಾಬ್ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿತು. ಲಿಯಾಮ್ ಲಿವಿಂಗ್ಸ್ಟೋನ್ ಏಕಾಂಗಿ 94 ರನ್ ಹೋರಾಟ ಗೆಲುವಿಗೆ ಸಹಕರಿಸಲಿಲ್ಲ. 15 ರನ್ನಿಂದ ಪಂಜಾಬ್ ಮಣಿಯ ಬೇಕಾಯಿತು.
ಇದನ್ನು ಓದಿ: ಟಿ-20 ಅತಿ ಹೆಚ್ಚು ಶತಕಗಳ ಸರದಾರ ಕೊಹ್ಲಿ: ಆರ್ಸಿಬಿ - ಎಸ್ಆರ್ಹೆಚ್ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳಿವು..
ಈ ಆವೃತ್ತಿಯಲ್ಲಿ ಎಪ್ರಿಲ್ 5 ರಂದು ಪಂಜಾಬ್ ಮತ್ತು ರಾಜಸ್ಥಾನ ಮುಖಾಮುಖಿಯಾಗಿದ್ದವು. ಅಂದಿನ ಪಂದ್ಯದಲ್ಲಿ ಪಂಜಾಬ್ ನೀಡಿದ್ದ 198 ರನ್ನ ಗುರಿಯನ್ನು ಬೆನ್ನು ಹತ್ತುವಲ್ಲಿ ರಾಜಸ್ಥಾನ ಎಡವಿತ್ತು. ಕೇವಲ 5 ರನ್ನಿಂದ ಸೋಲು ಕಂಡಿತ್ತು. ನಾಯಕ ಸಂಜು 42 ರನ್ ಗಳಿಸಿದ್ದೇ ರಾಜಸ್ಥಾನದ ಪರ ದೊಡ್ಡ ಮೊತ್ತವಾಗಿತ್ತು.
ಇದನ್ನು ಓದಿ:ಹೈದರಾಬಾದ್ ವಿರುದ್ಧ 'ವಿರಾಟ್' ಪ್ರದರ್ಶನ: ಪತಿಯ ಸಾಧನೆ ಕೊಂಡಾಡಿದ ಅನುಷ್ಕಾ ಶರ್ಮಾ
ತಂಡಗಳು ಇಂತಿವೆ ..: ಪಂಜಾಬ್ ಕಿಂಗ್ಸ್: ಶಿಖರ್ ಧವನ್(ನಾಯಕ), ಪ್ರಭಾಸಿಮ್ರಾನ್ ಸಿಂಗ್, ಅಥರ್ವ ಟೈಡೆ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ/ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆಡಮ್ ಜಂಪಾ, ಟ್ರೆಂಟ್ ಬೌಲ್ಟ್, ನವದೀಪ್ ಸೈನಿ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
ಇದನ್ನೂ ಓದಿ: IPLನಲ್ಲಿ ಇಂದು: ಧರ್ಮಶಾಲಾದಲ್ಲಿ ಪಂಜಾಬ್ - ರಾಜಸ್ಥಾನ ಫೈಟ್, ಗೆದ್ದು ಪ್ಲೇ ಆಫ್ ಕನಸು ಕಾಣುವವರಾರು?
ಇದನ್ನು ಓದಿ:PBKS vs DC: ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಡೆಲ್ಲಿ ಭರ್ಜರಿ ಬ್ಯಾಟಿಂಗ್.. ಪಂಜಾಬ್ಗೆ 213 ರನ್ ಗುರಿ