ETV Bharat / sports

IPLನಲ್ಲಿ ಇಂದು: ಧರ್ಮಶಾಲಾದಲ್ಲಿ ಪಂಜಾಬ್​ - ರಾಜಸ್ಥಾನ ಫೈಟ್​, ಗೆದ್ದು ಪ್ಲೇ ಆಫ್​ ಕನಸು ಕಾಣುವವರಾರು? - ETV Bharath Karnataka

ಧರ್ಮಶಾಲಾ ಮೈದಾನದಲ್ಲಿ ನಡೆಯಲಿರುವ ಇಂದಿನ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಮತ್ತು ರಾಜಸ್ಥಾನ ಮುಖಾಮುಖಿಯಾಗುತ್ತಿದ್ದು, ಸೋತವರು ಲೀಗ್​ನಿಂದ ಮೂರನೇ ತಂಡವಾಗಿ ಎಲಿಮಿನೇಟ್​ ಆಗಲಿದ್ದಾರೆ. ಗೆದ್ದವರು ಮುಂಬೈ ಮತ್ತು ಬೆಂಗಳೂರು ತಂಡದ ಸೋಲಿಗೆ ಪ್ರಾರ್ಥಿಸಬೇಕಾಗುತ್ತದೆ.

Etv Bharat
Etv Bharat
author img

By

Published : May 19, 2023, 3:42 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ) : 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಪ್ಲೇ ಆಫ್​ ಪ್ರವೇಶಕ್ಕೆ ಕೊನೆಯ ಪಂದ್ಯದ ವರೆಗೂ ಹಣಾಹಣಿ ಮುಂದುವರೆದಿದೆ. ಇಂದು ಭಾರತದ ಅತ್ಯಂತ ಸುಂದರ ಕ್ರೀಡಾಂಗಣಗಳಲ್ಲಿ ಒಂದು ಎನಿಸಿದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಪಂಜಾಬ್​ ಕಿಂಗ್ಸ್ (ಪಿಬಿಕೆಎಸ್​)​ ಮತ್ತು ರಾಜಸ್ಥಾನ ರಾಯಲ್ಸ್ (ಆರ್​ಆರ್​)​ ಮುಖಾಮುಖಿಯಾಗುತ್ತಿವೆ. ಸೋತವರು ಲೀಗ್​ನಿಂದ ​ಹೊರಗುಳಿಯಲಿದ್ದಾರೆ. ಎಲ್ಲಾ ತಂಡಗಳಿಗೂ ಒಂದು ಪಂದ್ಯ ಬಾಕಿ ಇದೆ. ಆದರೆ, ಪ್ಲೇ ಆಫ್​ಗೆ ಅರ್ಹತೆ ಗಿಟ್ಟಿಸಿಕೊಂಡಿರುವುದು ಹಾಲಿ ಚಾಂಪಿಯನ್​ ಆದ ಗುಜರಾತ್​ ಟೈಟಾನ್ಸ್​ ಮಾತ್ರ.

ಪಂಜಾಬ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​​ ತಲಾ 13 ಪಂದ್ಯಗಳನ್ನು ಆಡಿದ್ದು, ಎರಡೂ ಸಹ 12 ಅಂಕ ಹೊಂದಿದೆ. ಆರ್​ಆರ್​ ರನ್​ ರೇಟ್​ ಕಾರಣದಿಂದ 6 ನೇ ಸ್ಥಾನದಲ್ಲಿದ್ದರೆ, ಪಂಜಾಬ್​ 8 ರಲ್ಲಿದೆ. ಉಭಯ ತಂಡಗಳಿಗೂ ಪ್ಲೇ ಆಫ್​ನ ಹಾದಿ ಇನ್ನೂ ಇದೆ. ಆದರೆ, ಬೇರೆ ತಂಡಗಳ ಸೋಲು ಇತ್ತಂಡಕ್ಕೆ ಅವಕಾಶ ಮಾಡಿಕೊಡಲಿದೆ. ನಾಲ್ಕನೇ ಸ್ಥಾನದಲ್ಲಿರುವ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮತ್ತು 5ರಲ್ಲಿರುವ ಮುಂಬೈ ಇಂಡಿಯನ್ಸ್​ ಕೊನೆಯ ಪಂದ್ಯದಲ್ಲಿ ಸೋತು ಕಳಪೆ ರನ್​​ರೇಟ್​ ಪಡೆದಲ್ಲಿ ಇಂದು ಗೆದ್ದ ತಂಡಕ್ಕೆ ಪ್ಲೇ ಆಫ್​ ಬಾಗಿಲು ತೆರೆಯಲಿದೆ. ಅದರಲ್ಲೂ ಅವಕಾಶ ಹೆಚ್ಚಿರುವುದು ರಾಜಸ್ಥಾನಕ್ಕೆ. ಏಕೆಂದರೆ ಈಗಾಗಲೇ ಆರ್​ಆರ್​ +.0140 ರನ್​ರೇಟ್​ ಹೊಂದಿದೆ.

ಬೆಂಗಳೂರಿನ ಎದುರು ರಾಜಸ್ಥಾನಕ್ಕೆ ಹೀನಾಯ ಸೋಲು: ರಾಜಸ್ಥಾನ ರಾಯಲ್ಸ್​ ತವರು ನೆಲವಾದ ಜೈಪುರ್​ನಲ್ಲಿ ಆರ್​ಸಿಬಿ ವಿರುದ್ಧ ಹೀನಾಯ ಸೋಲನುಭವಿಸಿತು. ಇದರಿಂದ ಆರ್​ಆರ್​ಗೆ ಪ್ಲೇ ಆಫ್​ ಹಾದಿ ಕಠಿಣವಾಗಿದೆ. ಆರ್​ಸಿಬಿ ನೀಡಿದ್ದ 172 ರನ್​ನ ಗುರಿ ಬೆನ್ನು ಹತ್ತಿದ ರಾಜಸ್ಥಾನ ಕೇವ 59 ರನ್​ಗೆ ಆಲ್​ ಔಟ್​ ಆಗಿ ರನ್​ರೇಟ್​ ಕಳೆದುಕೊಂಡಿತು. ಈ ಅಲ್ಪ ಮೊತ್ತದ ಸೋಲಿನ ಅವಮಾನದಿಂದ ಆರ್​ಆರ್​ ಹೊರಬರಲು ದೊಡ್ಡ ಗೆಲುವನ್ನೇ ಪಡೆಯಬೇಕಿದೆ. ದೊಡ್ಡ ಅಂತರದ ಗೆಲುವು ಪ್ಲೇ ಆಫ್​ ಕನಸನ್ನು ಜೀವಂತವಾಗಿರಿಸಲಿದೆ ಆದರೆ, ಮೇಲೆ ಹೇಳಿದಂತೆ ಎಂಐ ಮತ್ತು ಆರ್​ಸಿಬಿ ಸೋಲು ಕಂಡಲ್ಲಿ ಮಾತ್ರ.

ಎಲಿಮಿನೇಟ್​ ಆದ ಡೆಲ್ಲಿಗೆ ಮಣಿದ ಪಂಜಾಬ್​: ಕಳೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಡೆಲ್ಲಿಯ ವಿರುದ್ಧ 15 ರನ್​ನ ಸೋಲನುಭವಿಸಿತು. ಲಿಯಾಮ್ ಲಿವಿಂಗ್ಸ್ಟೋನ್ 94 ರನ್​ ಏಕಾಂಗಿ ಹೋರಾಟದ ನಡುವೆಯೂ ತಂಡ ಗೆಲುವು ಕಾಣಲಿಲ್ಲ. ಇದರಿಂದ ಪ್ಲೇ ಆಪ್​ ಕನಸು ಮತ್ತು 16 ವರ್ಷದ ಕಪ್ ಗೆಲ್ಲುವ ಆಸೆಯೂ ಭಗ್ನವಾಯಿತು. ಇಂದು ಗೆದ್ದರೂ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯುವ ಅವಕಾಶ ಬಹುತೇಕ ಕಷ್ಟವಿದೆ. ​

ಸಂಭಾವ್ಯ ತಂಡ ಇಂತಿದೆ: ಪಂಜಾಬ್​ ಕಿಂಗ್ಸ್​: ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್), ಸ್ಯಾಮ್ ಕುರಾನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ನಾಥನ್ ಎಲ್ಲಿಸ್, ರಿಷಿ ಧವನ್, ಅರ್ಶ್‌ದೀಪ್ ಸಿಂಗ್.

ರಾಜಸ್ಥಾನ ರಾಯಲ್ಸ್​​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ/ ವಿಕೆಟ್​ ಕೀಪರ್​), ಜೋ ರೂಟ್, ದೇವದತ್ ಪಡಿಕ್ಕಲ್/ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಕೆಎಂ ಆಸಿಫ್, ಯುಜ್ವೇಂದ್ರ ಚಹಾಲ್.

ಇದನ್ನೂ ಓದಿ: ಶತಕದಾಟದ ಬಳಿಕ ಮೈದಾನದಿಂದಲೇ ಪತ್ನಿಗೆ ವಿಡಿಯೋ ಕಾಲ್​ ಮಾಡಿದ ಕೊಹ್ಲಿ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.