ETV Bharat / sports

IPL 2023: ಪಂಜಾಬ್​ ಕಿಂಗ್ಸ್​ ವಿರುದ್ಧ ಕೆಎಲ್​ ರಾಹುಲ್ ಪಡೆಗೆ ಸೂಪರ್​ ಜಯ - IPL 2023

ಮೊಹಾಲಿಯಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ಕೆಎಲ್​ ರಾಹುಲ್ ನೇತೃತ್ವದ ಲಖನೌ ತಂಡ ಸೂಪರ್ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಲಖನೌ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

Punjab Kings vs Lucknow Super Giants Match Score update
PBKS vs LSG: ಲಕ್ನೋ ವಿರುದ್ಧ ಟಾಸ್​ ಗೆದ್ದ ಶಿಖರ್​ ಧವನ್​ ಬೌಲಿಂಗ್​ ಆಯ್ಕೆ
author img

By

Published : Apr 28, 2023, 7:15 PM IST

Updated : Apr 29, 2023, 1:08 AM IST

ಮೊಹಾಲಿ (ಪಂಜಾಬ್​): ಇಂಡಿಯನ್ ಪ್ರೀಮಿಯರ್ ಲೀಗ್​ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನದ ಮೂಲಕ ಲಖನೌ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಲಖನೌ ನೀಡಿದ್ದ 258 ರನ್‌ಗಳ ಗುರಿ ಬೆನ್ನಟ್ಟಿದ್ದ ಪಂಜಾಬ್ ಇನ್ನಿಂಗ್ಸ್​ ಒಂದು ಎಸೆತ ಬಾಕಿ ಇರುವಾಗ 201 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಕೆಎಲ್​ ರಾಹುಲ್​ ಪಡೆ 56 ರನ್​ಗಳಿಂದ ಜಯದ ಕೇಕೆ ಹಾಕಿತು.

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಲಖನೌ ತಂಡ ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋಯ್ನಿಸ್ ಅರ್ಧಶತಕಗಳ ನೆರವು ಮತ್ತು ನಿಕೋಲಸ್ ಪೂರನ್ ಮತ್ತು ಆಯುಷ್ ಬಡೋನಿ ಅವರ ಸ್ಫೋಟಕ ಬ್ಯಾಟಿಂಗ್​ನಿಂದ ಐದು ವಿಕೆಟ್​ ನಷ್ಟಕ್ಕೆ 257 ರನ್​ಗಳನ್ನು ಪೇರಿತ್ತು. ಈ ಬೃಹತ್ ಸ್ಕೋರ್ ಬೆನ್ನಟ್ಟಿದ ಪಂಜಾಬ್ ಪರ ಅರ್ಧಶತಕ ಬಾರಿಸಿದ ಅಥರ್ವ ಟೈಡೆ (66) ಮಾತ್ರ ಪ್ರತಿಯಾಗಿ ಹೋರಾಟ ನಡೆಸಿದರು.

ಪಂಜಾಬ್​ಗೆ ಉತ್ತಮ ಆರಂಭವೇ ಸಿಗಲಿಲ್ಲ. ಆರಂಭಿಕರಾದ ನಾಯಕ ಶಿಖರ್ ಧವನ್ (1) ಮತ್ತು ಪ್ರಭಾಸಿಮ್ರಾನ್ ಸಿಂಗ್ (9) ಬೇಗನೆ ಪೆವಿಯಲಿನ್​ ಸೇರಿದರು. ಈ ಮೂಲಕ ನಾಲ್ಕನೇ ಓವರ್​ನ ನಾಲ್ಕನೇ ಎಸೆತದವ ವೇಳೆಗೆ ಪಂಜಾಬ್ 31 ರನ್​ಗಳಿಗೆ ಎರಡು ವಿಕೆಟ್​ ಕಳೆದುಕೊಂಡಿತು. ಮೂರನೇ ಕ್ರಮಾಂಕದಲ್ಲಿ ಅಥರ್ವ ಟೈಡೆ ಮತ್ತು ಸಿಕಂದರ್ ರಝಾ ತಂಡವನ್ನು ಉತ್ತಮ ಮುನ್ನಡೆಸಿದರು. ಅಥರ್ವ ಹೆಚ್ಚು ಆಕ್ರಮಣ ಆಟವಾಡಲು ಮುಂದಾಗ ರಝಾ ಎಚ್ಚರಿಕೆಯಿಂದ ಬ್ಯಾಟ್​ ಬೀಸಿದರು.

ಅಥರ್ವ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.ಇದರೊಂದಿಗೆ ಪಂಜಾಬ್ 11ನೇ ಓವರ್ ನಲ್ಲಿ 100 ರನ್ ದಾಟಲು ಶಕ್ತವಾಯಿತು. ಆದರೆ, ಈ ವೇಳೆ 22 ಎಸೆತಗಳಲ್ಲಿ 36 ರನ್ ಗಳಿಸಿದ್ದ ರಝಾ ಔಟಾದರು. ಇವರಿಬ್ಬರು ಮೂರನೇ ವಿಕೆಟ್‌ಗೆ 61 ರನ್ ಕಲೆಹಾಕಿದರು. ಇದಾದ ಸ್ವಲ್ಪ ಹೊತ್ತದಲ್ಲೇ ಅಥರ್ವ ಕೂಡ ವಿಕೆಟ್​​ ಪತನವಾಯಿತು. ಹೀಗಾಗಿ 13 ಓವರ್‌ಗಳಲ್ಲಿ 4 ವಿಕೆಟ್​ ಕಳೆದುಕೊಂಡು 127ಕ್ಕೆ ಪಂಜಾಬ್​ ಕುಸಿಯಿತು. 36 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಥರ್ವ 66 ರನ್ ಬಾರಿಸಿದರು.

ನಂತರ ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಸ್ಯಾಮ್ ಕುರ್ರಾನ್, ಜಿತೇಶ್ ಶರ್ಮಾ ಅಬ್ಬರದ ಆಟವಾಡಿದರಾದರೂ ಮೂವರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಎರಡೇ ಓವರ್​ನ ಅಂತರದಲ್ಲಿ ಲಿವಿಂಗ್‌ಸ್ಟನ್ (23) ಮತ್ತು ಸ್ಯಾಮ್ ಕರ್ರಾನ್ (21), ಜಿತೇಶ್ ಶರ್ಮಾ (24) ವಿಕೆಟ್​ ಒಪ್ಪಿಸಿದರು. ಇದು ಲಖನೌ ಗೆಲುವನ್ನು ಖಚಿತಪಡಿಸಿತು.

ರಾಹುಲ್ ಚಹಾರ್ (0), ಕಗಿಸೊ ರಬಾಡ (0) ಹಾಗೂ ಶಾರುಖ್ ಖಾನ್ (6) ಕೂಡ ಔಟಾಗುವ ಮೂಲಕ ಪಂಜಾಬ್ ಇನಿಂಗ್ಸ್​​ಗೆ ತೆರೆ ಬಿದ್ದಿತು. ಲಖನೌ ಪರ ಒಂಬತ್ತು ಆಟಗಾರರು ಬೌಲಿಂಗ್ ಮಾಡಿದರು. ಯಶ್ ಠಾಕೂರ್ ನಾಲ್ಕು ವಿಕೆಟ್ ಕಬಳಿಸಿದರೆ, ನವೀನ್ ಉಲ್ ಹಕ್ ಮೂರು ಮತ್ತು ರವಿ ಬಿಷ್ಣೋಯ್ ಎರಡು ಹಾಗೂ ಮಾರ್ಕಸ್ ಸ್ಟೋನಿಸ್ ಒಂದು ವಿಕೆಟ್ ಪಡೆದರು.

ಲಖನೌ ಇನ್ನಿಂಗ್​: ಇದಕ್ಕೂ ಮುನ್ನ ಭರ್ಜರಿ ಬ್ಯಾಟಿಂಗ್ ತೋರಿದ ಲಖನೌ ಓವರ್​ಗಳ​ ಅಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 257 ರನ್​ ಗಳಿಸಿತ್ತು. ಮೊದಲ ಓವರ್​ನಿಂದಲೇ ಅಬ್ಬರದ ಬ್ಯಾಟಿಂಗ್​ ತೋರಿದ ಲಖನೌ ಬ್ಯಾಟರ್​ಗಳು ಪಂಜಾಬ್​ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಮೇಯರ್ಸ್ ಹಾಗೂ ಸ್ಟೋಯ್ನಿಸ್ ​ಅಬ್ಬರದ ಅರ್ಧಶತಕ ಸಿಡಿಸಿದರೆ, ಮತ್ತಿಬ್ಬರು 40 + ರನ್​ ಕಲೆ ಹಾಕಿದರು.

ಕೆಎಲ್​ ರಾಹುಲ್​ ಮತ್ತು ಕೈಲ್ ಮೇಯರ್ಸ್ 3.2 ಓವರ್​ಗೆ 41 ರನ್​ ಜೊತೆಯಾಟವಾಡಿದರು. ರಾಹುಲ್​ 9 ಬಾಲ್​ನಲ್ಲಿ 1 ಸಿಕ್ಸರ್​​ ಮತ್ತು ಬೌಂಡರಿಯಿಂದ 12 ರನ್​ ಗಳಿಸಿ ಔಟಾದರು.​ ನಂತರ ಬಂದ ಆಯುಷ್ ಬದೋನಿ ಮತ್ತೋರ್ವ ಆರಂಭಿಕ ಕೈಲ್ ಮೇಯರ್ಸ್ ಜೊತೆ ಅಬ್ಬರದ ಬ್ಯಾಟಿಂಗ್​ ಮುಂದುವರೆಸಿದರು. ಈ ಜೋಡಿ ಪಂಜಾಬ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಕಳೆದ ಕೆಲ ಪಂದ್ಯಗಳಲ್ಲಿ ದೊಡ್ಡ ಮೊತ್ತ ಕೆಲೆ ಹಾಕಲು ಕಷ್ಟಪಡುತ್ತಿದ್ದ ಕೈಲ್ ಮೇಯರ್ಸ್ ತಮ್ಮ ಬಲಾಢ್ಯ ಬ್ಯಾಟಿಂಗ್​ ಪ್ರದರ್ಶಿಸಿದರು. ಕೇವಲ 24 ಬಾಲ್​ ಎದುರಿಸಿದ ಅವರು 7 ಬೌಂಡರಿ ಮತ್ತು 4 ಸಿಕ್ಸರ್​ ಸಹಿತ 54 ರನ್​ ಗಳಿಸಿದರು.

ಮೇಯರ್ಸ್ ಔಟಾದ ಬಳಿಕ ಬದೋನಿ ಜೊತೆ ಸೇರಿದ ಮಾರ್ಕಸ್ ಸ್ಟೋನಿಸ್ ರನ್​ ಮಳೆ ಮುಂದುವರೆಸಿದರು. 24 ಬಾಲ್​ನಲ್ಲಿ 3 ಸಿಕ್ಸರ್​ ಹಾಗೂ 3 ಬೌಂಡರಿಯಿಂದ 43 ರನ್​ ಗಳಿಸಿ ಔಟಾದರು. ಬಳಿಕ ನಿಕೋಲಸ್ ಪೂರನ್ ಕೂಡ ರನ್​ಗೆ ವೇಗ ಕೊಟ್ಟರು. ಸ್ಟೋನಿಸ್ 40 ಬಾಲ್​ನಲ್ಲಿ 5 ಸಿಕ್ಸರ್​​ ಮತ್ತು 6 ಬೌಂಡರಿ ಸಮೇತ 72 ರನ್​ ಕಲೆಹಾಕಿದರು. ಇದಕ್ಕೆ ಸಹಕಾರ ನೀಡಿದ ಪೂರನ್​ 19 ಎಸೆತಗಳಲ್ಲಿ 1 ಸಿಕ್ಸರ್​​ ಮತ್ತು 7 ಬೌಂಡರಿಯೊಂದಿಗೆ 45 ರನ್​ ಚಚ್ಚಿದರು. ಕೊನೆಯಲ್ಲಿ ದೀಪಕ್​ ಹೂಡಾ (6 ಎಸೆತಗಳಲ್ಲಿ 11) ಮತ್ತು ಕೃನಾಲ್​ ಪಾಂಡ್ಯ 2 ಎಸೆತಗಳಲ್ಲಿ 5 ರನ್​ ಬಾರಿಸಿ ಅಜೇಯರಾಗುಳಿದರು.

ಪಂಜಾಬ್​ ಪರ ಕಗಿಸೊ ರಬಾಡ ಮತ್ತು ಅರ್ಷದೀಪ್ ಸಿಂಗ್ 50+ ರನ್​ ಚಚ್ಚಿಸಿಕೊಂಡರು. ರಬಾಡ 2 ಹಾಗೂ ಅರ್ಷದೀಪ್​ 1 ವಿಕೆಟ್​ ಪಡೆದರು. ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್ ತಲಾ ಒಂದು ವಿಕೆಟ್​ ಪಡೆದರು.

ಎರಡನೇ ಐಪಿಎಲ್​ ಅತೀ ಹೆಚ್ಚಿನ ಸ್ಕೋರ್​: ಆರ್​ಸಿಬಿ 2013ರಲ್ಲಿ 263 ರನ್​ ಗಳಿಸಿರುವುದು ಐಪಿಎಲ್​ನ ಮೊದಲ ಅತೀ ಹೆಚ್ಚು ರನ್​ ಆದರೆ, ಲಖನೌ ಗಳಿಸಿದ 257 ರನ್​ ಎರಡನೇಯದ್ದಾಗಿದೆ. ಇದರ ನಂತರ ಆರ್​ಸಿಬಿ 248 ರನ್​ ಗಳಿಸಿರುವುದು ಮೂರನೇ ಸ್ಥಾನದಲ್ಲಿದೆ. ಇದರ ಜೊತೆಗೆ ಎರಡನೇ ಅತೀ ಹೆಚ್ಚು ಬೌಂಡರಿ ಸಹ ದಾಖಲಾಯಿತು. 27 ಫೋರ್​ ಮತ್ತು 14 ಸಿಕ್ಸ್​ಗಳು ಸೇರಿ ಇಂದು 41 ಬೌಂಡರಿ ದಾಖಲಾಗಿದೆ. ಇದಕ್ಕೂ ಮುನ್ನ ಆರ್​ಸಿಬಿ 21 ಫೋರ್​ ಮತ್ತು 21 ಸಿಕ್ಸ್​ (ಒಟ್ಟು 42) ಗಳಿಸಿದ್ದು ಪ್ರಥಮ ಸ್ಥಾನದಲ್ಲಿದೆ.

ಇದನ್ನೂ ಓದಿ: 71 ವರ್ಷಗಳ ಟೆಸ್ಟ್​ ದಾಖಲೆ ಮುರಿದ ಲಂಕಾ ಸ್ಪಿನ್ನರ್ ​​ಪ್ರಭಾತ್ ಜಯಸೂರ್ಯ

Last Updated : Apr 29, 2023, 1:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.