ನವದೆಹಲಿ : ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ದ್ವಿತೀಯಾರ್ಧದ ಐಪಿಎಲ್ಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬದಲಿ ಆಟಗಾರನಾಗಿ ಆಸ್ಟ್ರೇಲಿಯಾದ ಉದಯೋನ್ಮುಖ ವೇಗಿ ನೇಥನ್ ಎಲ್ಲಿಸ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ದ್ವಿತೀಯಾರ್ಧದ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ದುಬಾರಿ ಬೆಲೆ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದ ಜೇ ರಿಚರ್ಡ್ಸನ್ ಮತ್ತು ರಿಲೀ ಮೆರಿಡಿತ್ ಸೌಲಭ್ಯವನ್ನು ಕಳೆದುಕೊಳ್ಳಲಿದೆ. ಹಾಗಾಗಿ, ಬದಲಿ ಆಟಗಾರನಾಗಿ ಎಲ್ಲಿಸ್‌ಗೆ ಮಣೆ ಹಾಕಿದೆ.
-
Nathan ᴇʟʟ-ɪs a 👑
— Punjab Kings (@PunjabKingsIPL) August 20, 2021 " class="align-text-top noRightClick twitterSection" data="
He’s the newest addition to #SaddaSquad for the second phase of #IPL2021! 😍#SaddaPunjab #PunjabKings pic.twitter.com/0hMuOJ19NU
">Nathan ᴇʟʟ-ɪs a 👑
— Punjab Kings (@PunjabKingsIPL) August 20, 2021
He’s the newest addition to #SaddaSquad for the second phase of #IPL2021! 😍#SaddaPunjab #PunjabKings pic.twitter.com/0hMuOJ19NUNathan ᴇʟʟ-ɪs a 👑
— Punjab Kings (@PunjabKingsIPL) August 20, 2021
He’s the newest addition to #SaddaSquad for the second phase of #IPL2021! 😍#SaddaPunjab #PunjabKings pic.twitter.com/0hMuOJ19NU
ಎಲ್ಲಿಸ್ ಇತ್ತೀಚೆಗೆ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧ ಸರಣಿಯ ವೇಳೆ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿ, ಅದೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಇದರೊಂದಿಗೆ ಪದಾರ್ಪಣೆ ಪಂದ್ಯದಲ್ಲಿಯೇ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದರು.
ಜೊತೆಗೆ ಮುಂಬರುವ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡದಲ್ಲಿ ಮೀಸಲು ಆಟಗಾರನಾಗಿಯೂ ಅವಕಾಶ ಪಡೆದಿದ್ದಾರೆ. ಜೊತೆಗೆ ಬಿಗ್ಬ್ಯಾಶ್ ಲೀಗ್ನಲ್ಲೂ 14 ಪಂದ್ಯಗಳಲ್ಲಿ 20 ವಿಕೆಟ್ ಪಡೆದು ಮಿಂಚಿದ್ದರು.
ಇನ್ನು, ಪಂಜಾಬ್ ಕಿಂಗ್ಸ್ ನೇಥನ್ ಎಲ್ಲಿಸ್ ಜೊತೆಗೆ ಮತ್ತೊಬ್ಬ ಬದಲಿ ಆಟಗಾರನನ್ನು ಘೋಷಿಸುವುದಾಗಿ ತಿಳಿಸಿದೆ. ಈಗಾಗಲೇ ಕ್ರಿಸ್ ಜೋರ್ಡನ್ ಕೂಡ ವಿದೇಶಿ ವೇಗದ ಬೌಲಿಂಗ್ ವಿಭಾಗದಲ್ಲಿದ್ದಾರೆ.
ಇದನ್ನು ಓದಿ : ಐಪಿಎಲ್ ಜಾಹೀರಾತಿನಲ್ಲಿ ಮಿಂಚಿದ ಧೋನಿ : ಅಭಿಮಾನಿಗಳಿಗೆ ಕಿಕ್ ನೀಡಿದ ಎಂಎಸ್ಡಿ ಆ್ಯಕ್ಟಿಂಗ್