ಹೈದರಾಬಾದ್ (ತೆಲಂಗಾಣ): ಡೆಲ್ಲಿ ಕ್ಯಾಪಿಟಲ್ಸ್ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡುತ್ತಿದೆ. ತಂಡದಲ್ಲಿ ಮಹತ್ತರ ಬದಲಾವಣೆಯನ್ನು ನಾಯಕ ಡೇವಿಡ್ ವಾರ್ನರ್ ಮಾಡಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ನ ವೀಕೆನ್ಸ್ನ್ನು ಕಮ್ಬ್ಯಾಕ್ ಮಾಡುವ ನಿರ್ಧಾರ ಮಾಡಿ ಕಣಕ್ಕಿಳಿದರು. ಆದರೆ ಅದು ಸಹ ಯಶಸ್ಸು ಕಾಣಲಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ಏಳನೇ ಪಂದ್ಯ ಆಡುತ್ತಿದ್ದು, ಮೊದಲ ಐದು ಪಂದ್ಯಗಳಲ್ಲಿ ಹೀನಾಯ ಸೋಲನ್ನು ಎದುರಿಸಿಕೊಂಡು ಬಂದಿತ್ತು. ಆದರೆ ಕಳೆದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಮೊದಲ ಗೆಲುವನ್ನು ಒದ್ದಾಡಿ ಸಾಧಿಸಿತು. ಆರನೇ ಪಂದ್ಯದಲ್ಲಿ ಲೀಗ್ನ ಮೊದಲ ಗೆಲುವನ್ನು ಡಿಸಿ ಕಂಡಿತ್ತು.
ಕೆಕೆಆರ್ ಪಂದ್ಯದ ಗೆಲುವಿನ ನಂತರ ಮಾತನಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ನ ನಿರ್ದೇಶಕ ಸೌರವ್ ಗಂಗೂಲಿ, ಬೌಲಿಂಗ್ನಲ್ಲಿ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಟಿಂಗ್ನಲ್ಲಿ ತಂಡ ಇನ್ನೂ ಲಯ ಕಂಡುಕೊಂಡಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯ ಇದೆ. ನಾಯಕ ಡೇವಿಡ್ ವಾರ್ನರ್ ಅವರ ಮಾರ್ಗದರ್ಶನದಲ್ಲ ತಂಡವಾಗಿ ಕಾರ್ಯ ನಿರ್ವಹಿಸ ಬೇಕು ಎಂದು ಸಲಹೆ ಇತ್ತಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ಗೆ ಪವರ್ ಪ್ಲೇ ಸಮಸ್ಯೆ: ಡೆಲ್ಲಿ ಕ್ಯಾಪಿಟಲ್ಸ್ ಆರು ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ಕಂಡಿಲ್ಲ. ಪವರ್ ಪ್ಲೇ ಮುಗಿಯುವ ವೇಳೆಗೆ ಸರಾಸತಿ ಮೂರು ವಿಕೆಟ್ಗಳನ್ನು ಕಳೆದುಕೊಂಡಿದೆ. ಹೀಗಾಗಿ ಆರಂಭಿಕ ಜೊತೆಯಾಟವನ್ನು ಉತ್ತಮ ಗೊಳಿಸುವ ಚಿಂತನೆಯಲ್ಲಿ ಇಂದು ಪೃಥ್ವಿ ಶಾ ಅವರನ್ನು ಕೈಬಿಡಲಾಯಿತು. ಅಚ್ಚರಿ ಎಂದರೆ ಶಾ ಅವರಿಗೆ ಇಂಪ್ಯಾಕ್ಟ್ ಪ್ಲೇಯರ್ ಜಾಗದಲ್ಲೂ ಸ್ಥಳ ನೀಡದೇ ಬೇಚ್ನಲ್ಲಿ ಕೂರಿಸಲಾಗಿದೆ. ಅವರ ಬದಲಿ ಇಂದು ಆರಂಭಿಕರಾಗಿ ಫಿಲಿಫ್ ಸಾಲ್ಟ್ ಅವರನ್ನು ಆಡಿಸಲಾಗಿದೆ.
ಶೂನ್ಯಕ್ಕೆ ಔಟ್ ಆದ ಸಾಲ್ಟ್: ಆರಂಭಿಕ ಜೋಡಿ ಬದಲಾಯಿಸಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಮತ್ತೆ ಆರಂಭಿಕ ಆಘಾತ ಎದುರಾಯಿತು. ಶಾ ಬದಲಿಯಾಗಿ ವಾರ್ನರ್ ಜೊತೆಗೆ ಕಣಕ್ಕಿಳಿದ ಫಿಲಿಫ್ ಸಾಲ್ಟ್ ಸಹ ಜೊತೆಯಾಟ ಮಾಡಲಿಲ್ಲ. ಮೊದಲ ಓವರ್ನಲ್ಲಿ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಇದರಿಂದ ಮತ್ತೆ ಆರಂಭಿಕ ಜೊತೆಯಾಟ ಡೆಲ್ಲಿಗೆ ಬರಲಿಲ್ಲ. ಅದರ ಜೊತೆಗೆ ಪವರ್ ಪ್ಲೇ ಮುಗಿಯುವ ವೇಳೆಗೆ 2 ವಿಕೆಟ್ ಪತನವಾಗಿತ್ತು ಮತ್ತು 49 ರನ್ ಮಾತ್ರ ಗಳಿಸಿತ್ತು. ಇದರಿಂದ ಹೊಸ ಯೋಜನೆಯೂ ಕ್ಯಾಪಿಟಲ್ಸ್ ಕೈ ಹಿಡಿಯಲಿಲ್ಲ.
ಶಾ ಸತತ ವೈಫಲ್ಯ: ಪೃಥ್ವಿ ಶಾ ಈ ಆವೃತ್ತಿಯಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದಾರೆ. ಶಾ 6 ಪಂದ್ಯಗಳಲ್ಲಿ 7.83 ಸರಾಸರಿಯಲ್ಲಿ ಕೇವಲ 47 ರನ್ ಗಳಿಸಿದ್ದಾರೆ, ಗರಿಷ್ಠ ಸ್ಕೋರ್ ಕೇವಲ 15 ಆಗಿದೆ. ಮೊದಲ ಪಂದ್ಯ 12, 7, 0, 15, 0 ಮತ್ತು 13 ರನ್ ಗಳಿಸಿದ್ದಾರೆ.
ಇದನ್ನೂ ಓದಿ: SRH vs DC: ಸನ್ ರೈಸರ್ಸ್ ಹೈದರಾಬಾದ್ಗೆ 145 ರನ್ನ ಸರಳ ಗುರಿ ನೀಡಿದ ಡಿಸಿ