ETV Bharat / sports

ಪೃಥ್ವಿ ಶಾಗೆ ತೀವ್ರ ಜ್ವರ, ಆಸ್ಪತ್ರೆಗೆ ದಾಖಲು: ಕೋವಿಡ್​ ವರದಿ ನೆಗೆಟಿವ್​​ - ಆಸ್ಪತ್ರೆಗೆ ದಾಖಲಾದ ಪೃಥ್ವಿ ಶಾ

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ಲೇಯರ್ಸ್​ಗೆ ಅನಾರೋಗ್ಯ ಇನ್ನಿಲ್ಲದಂತೆ ಕಾಡುತ್ತಿದ್ದು, ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಇದೀಗ ತೀವ್ರ ಜ್ವರದಿಂದ ಬಳಲುತ್ತಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

Prithvi Shaw admitted to Mumbai hospital

author img

By

Published : May 9, 2022, 3:01 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ ಆರಂಭಗೊಂಡಾಗಿನಿಂದಲೂ ಕೋವಿಡ್​ ಸೋಂಕಿನಿಂದಾಗಿ ತೊಂದರೆಗೊಳಗಾಗಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಇನ್​​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಎದುರು ಪಂದ್ಯ ಆರಂಭಗೊಳ್ಳುವುದಕ್ಕಿಂತಲೂ ಮುಂಚೆ ತಂಡದ ನೆಟ್ ಬೌಲರ್ ಒಬ್ಬರಿಗೆ​ ಕೋವಿಡ್ ಸೋಂಕು ದೃಢಪಟ್ಟ ಕಾರಣದಿಂದ ಎಲ್ಲ ಆಟಗಾರರನ್ನು ಐಸೋಲೇಷನ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಜ್ವರ ಕಾಣಿಸಿಕೊಂಡಿರುವ ಕಾರಣ ಪೃಥ್ವಿ ಶಾ ಆಸ್ಪತ್ರೆಗೆ ದಾಖಲಾಗಿದ್ದು, ಅವರ, ಕೋವಿಡ್ ವರದಿ ನೆಗೆಟಿವ್ ಬಂದಿದೆ.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ನೆಟ್​ ಬೌಲರ್​ಗೆ ಕೋವಿಡ್​​: ಆಟಗಾರರಿಗೆ ಐಸೋಲೇಷನ್!

ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾಹಿತಿ ಶೇರ್ ಮಾಡಿಕೊಂಡಿರುವ ಪೃಥ್ವಿ ಶಾ, ಸದ್ಯ ನಾನು ಆಸ್ಪತ್ರೆಗೆ ದಾಖಲಾಗಿದ್ದು, ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು ಎಂದಿರುವ ಎಡಗೈ ಬ್ಯಾಟರ್​, ಆದಷ್ಟು ಬೇಗ ಮೈದಾನಕ್ಕೆ ಮರಳುವ ಭರವಸೆ ನೀಡಿದ್ದಾರೆ.

ವಿಶೇಷ ಎಂದರೆ ಐಪಿಎಲ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಪೃಥ್ವಿ ಶಾ ಬೆಂಗಳೂರಿನಲ್ಲಿ ನಡೆದ ಯೋ-ಯೋ ಟೆಸ್ಟ್​​ನಲ್ಲಿ ಫೇಲ್​ ಆಗಿದ್ದರು. ಇದರ ಹೊರತಾಗಿ ಕೂಡ ಅವರಿಗೆ ಐಪಿಎಲ್​​ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ನಿನ್ನೆ ಸಿಎಸ್​ಕೆ ವಿರುದ್ಧ ನಡೆದ ಪಂದ್ಯದಲ್ಲೂ ಪೃಥ್ವಿ ಶಾ ಕಣಕ್ಕಿಳಿದಿರಲಿಲ್ಲ. ಈ ಪಂದ್ಯದಲ್ಲಿ ಡೆಲ್ಲಿ ತಂಡ ದಾಖಲೆಯ 91ರನ್​ಗಳ ಅಂತರದಿಂದ ಸೋಲು ಕಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.