ಅಬುದಾಬಿ(ಯುಎಇ): ಟಿ-20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ನ ದೈತ್ಯ ಆಟಗಾರ ಕೀರನ್ ಪೊಲಾರ್ಡ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಸಾಧನೆ ಮಾಡಿರುವ ಮೊದಲ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ 10ಕ್ಕೂ ಅಧಿಕ ಸಾವಿರ ರನ್ಗಳಿಕೆ ಮಾಡಿರುವ ಈ ಪ್ಲೇಯರ್, 300 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿರುವ ಮೊದಲ ಕ್ರಿಕೆಟಿಗನಾಗಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ 7ನೇ ಓವರ್ನಲ್ಲಿ ಕ್ರಿಸ್ ಗೇಲ್ ಔಟ್ ಮಾಡಿ ಟಿ-20ಯಲ್ಲಿ 299ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದ ಪೊಲಾರ್ಡ್, ತದ ನಂತರ ಅದೇ ಓವರ್ನಲ್ಲಿ ಪಂಜಾಬ್ ಕ್ಯಾಪ್ಟನ್ ಕೆ ಎಲ್ ರಾಹುಲ್ ವಿಕೆಟ್ ಪಡೆದು 300 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಪೊಲಾರ್ಡ್ ಟಿ-20 ಕ್ರಿಕೆಟ್ನಲ್ಲಿ 11,202 ರನ್ಗಳಿಕೆ ಮಾಡಿದ್ದು, ಹೀಗಾಗಿ, 10 ಸಾವಿರಕ್ಕಿಂತಲೂ ಅಧಿಕ ರನ್ ಹಾಗೂ 300 ವಿಕೆಟ್ ಪಡೆದ ಏಕೈಕ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
-
3️⃣0️⃣0️⃣ wickets in T20 cricket!#OneFamily #MumbaiIndians #MIvPBKS #IPL2021 @KieronPollard55 pic.twitter.com/QFgkACyL4H
— Mumbai Indians (@mipaltan) September 28, 2021 " class="align-text-top noRightClick twitterSection" data="
">3️⃣0️⃣0️⃣ wickets in T20 cricket!#OneFamily #MumbaiIndians #MIvPBKS #IPL2021 @KieronPollard55 pic.twitter.com/QFgkACyL4H
— Mumbai Indians (@mipaltan) September 28, 20213️⃣0️⃣0️⃣ wickets in T20 cricket!#OneFamily #MumbaiIndians #MIvPBKS #IPL2021 @KieronPollard55 pic.twitter.com/QFgkACyL4H
— Mumbai Indians (@mipaltan) September 28, 2021
ಇದನ್ನೂ ಓದಿರಿ: ತಂಡದ ಗೆಲುವಿನ ಸಂಪೂರ್ಣ ಶ್ರೇಯ ಕೋಚ್ ಮೆಕಲಮ್ಗೆ ಸಲ್ಲಬೇಕು : ಕೆಕೆಆರ್ ಕ್ಯಾಪ್ಟನ್ ಮಾರ್ಗನ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದು, ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ.