ಕೋಲ್ಕತ್ತಾ, ಪಶ್ಚಿಮ ಬಂಗಾಳ: ಈಡನ್ ಗಾರ್ಡನ್‌ನಲ್ಲಿ ಗುರುವಾರ ರಾತ್ರಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ ಬಳಿಕ ಬ್ಯಾಟಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಶಾರುಖ್ ಖಾನ್ ತಮ್ಮ ಪ್ರೀತಿಯ ಕ್ಷಣವನ್ನು ಹಂಚಿಕೊಂಡರು.
- " class="align-text-top noRightClick twitterSection" data="
">
ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿಜಯದ ನಂತರ ಶಾರುಖ್ ಖಾನ್ RCB ಸ್ಟಾರ್ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡು ಅಭಿನಂದನೆಗಳನ್ನು ಸಲ್ಲಿಸಿದರು. ಈ ವೇಳೆ ಈ ಇಬ್ಬರು ಸೆಲೆಬ್ರಿಟಿಗಳು ಶಾರುಖ್ ಖಾನ್ ಅವರ ಇತ್ತೀಚಿಗೆ ಬಿಡುಗಡೆಗೊಂಡ ಸೂಪರ್ ಹಿಟ್ ಸಿನಿಮಾ ಪಠಾಣ್ ಚಿತ್ರದ ಸಾಂಗ್ನ ಸ್ಟೇಪ್ಗಳನ್ನು ವಿರಾಟ್ಗೆ ಕಲಿಸಿಕೊಟ್ಟರು.
ಆರ್‌ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಶಾರುಖ್ ಖಾನ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಐಪಿಎಲ್ 2023ರ ತಮ್ಮ ತವರು ನೆಲದಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಕೆಆರ್ ಪ್ರಾಬಲ್ಯ ಸಾಧಿಸಿದ ನಂತರ ಶಾರುಖ್ ಖಾನ್ ಅವರು ಸಂಭ್ರಮಾಚರಣೆಯ ಮನಸ್ಥಿತಿಯಲ್ಲಿದ್ದರು.
-
Seeing our #Pathaan so happy and jhooming is all we SRKians want 💜
— Shah Rukh Khan Warriors FAN Club (@TeamSRKWarriors) April 6, 2023 " class="align-text-top noRightClick twitterSection" data="
The King deserves all of it & much more 🤩
Thank you Knights, @KKRiders!#KKRvRCB #ShahRukhKhanpic.twitter.com/4yuBbO6k8a
">Seeing our #Pathaan so happy and jhooming is all we SRKians want 💜
— Shah Rukh Khan Warriors FAN Club (@TeamSRKWarriors) April 6, 2023
The King deserves all of it & much more 🤩
Thank you Knights, @KKRiders!#KKRvRCB #ShahRukhKhanpic.twitter.com/4yuBbO6k8aSeeing our #Pathaan so happy and jhooming is all we SRKians want 💜
— Shah Rukh Khan Warriors FAN Club (@TeamSRKWarriors) April 6, 2023
The King deserves all of it & much more 🤩
Thank you Knights, @KKRiders!#KKRvRCB #ShahRukhKhanpic.twitter.com/4yuBbO6k8a
ಶಾರುಖ್ ಅವರು ವಿರಾಟ್ ಕೊಹ್ಲಿಯೊಂದಿಗೆ ಹೆಜ್ಜೆ ಹಾಕುತ್ತಿರುವುದನ್ನು ವೈರಲ್ ಆದ ಫೋಟೋ ಮತ್ತು ವಿಡಿಯೋಗಳಲ್ಲಿ ನೋಡಬಹುದು. ಈ ಇಬ್ಬರು ಸೆಲೆಬ್ರಿಟಿಗಳು ಒಟ್ಟಿಗೆ ವೇದಿಕೆ ಹಂಚಿಕೊಳ್ಳುವುದರೊಂದಿಗೆ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದೆ. ಸುಹಾನಾ ಖಾನ್, ಶಾನಯಾ ಕಪೂರ್ ಮತ್ತು ಶಾರುಖ್ ಒಟ್ಟಿಗೆ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದರು. ಶನಯಾ ಕಪೂರ್ ನಟ ಸಂಜಯ್ ಕಪೂರ್ ಅವರ ಮಗಳು. ಶಾರುಖ್ ಖಾನ್ ಕ್ರೀಡಾಂಗಣದಲ್ಲಿ ಅಭಿಮಾನಿಗಳತ್ತ ಕೈಬೀಸಿದರು.
ಆರ್ಸಿಬಿಗೆ ಸೋಲು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಆರಂಭದಲ್ಲಿ ಆರ್‌ಸಿಬಿ ಬೌಲರ್ಗಳು ಉತ್ತಮವಾಗಿಯೇ ಬೌಲಿಂಗ್ ಮಾಡುತ್ತಿದ್ದರು. ಪಂದ್ಯ ಆರ್‌ಸಿಬಿ ಪರವಾಗಿ ಸಾಗುತ್ತಿತ್ತು. ಕೋಲ್ಕತ್ತಾ ತಂಡ 50 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು. ರಹಮಾನುಲ್ಲಾ ಗುರ್ಬಾಜ್ ಮಾತ್ರ ಒಂದು ತುದಿಯಲ್ಲಿ ನಿಂತು ತಂಡವನ್ನು ಮುನ್ನಡೆಸುತ್ತಿದ್ದರು.
ಗುರ್ಬಾಜ್ 44 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದರು. ಆಂಡ್ರೆ ರಸೆಲ್ ಕೂಡ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ಆದರೆ ನಂತರ ಮೈದಾನದಲ್ಲಿ ರಿಂಕು ಸಿಂಗ್ ಮತ್ತು ಶಾರ್ದೂಲ್ ಠಾಕೂರ್ ಬಿರುಗಾಳಿ ಎಬ್ಬಿಸಿದರು. ಈ ಇಬ್ಬರು ಆಟಗಾರರು ತಂಡಕ್ಕೆ ಶತಕದ ಜೊತೆಯಾಟದ ಕೊಡುಗೆ ನೀಡಿದರು.
ಶಾರ್ದೂಲ್ 29 ಎಸೆತಗಳಲ್ಲಿ 68 ರನ್ ಗಳಿಸಿದ್ರೆ , ರಿಂಕು ಸಿಂಗ್ 33 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಸ್ಕೋರನ್ನು 204ಕ್ಕೆ ಕೊಂಡೊಯ್ದರು. ಇದಕ್ಕೆ ಉತ್ತರವಾಗಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಸುನೀಲ್ ನರೈನ್ ವಿರಾಟ್ ಕೊಹ್ಲಿ ವಿಕೆಟ್ ಪಡೆದ ಕೂಡಲೇ ಆರ್‌ಸಿಬಿ ತಂಡ ಕುಸಿದುಬಿತ್ತು. ಆರ್‌ಸಿಬಿ 17.4 ಓವರ್‌ಗಳಲ್ಲಿ 123 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಕೆಕೆಆರ್ ವಿರುದ್ಧ ಆರ್‌ಸಿಬಿ ತಂಡ ಹೀನಾಯ ಸೋಲು ಕಂಡಿತು.
ಓದಿ: 'ಈ ಸಲ ಕಪ್ ನಮ್ದೇ': ಪಂದ್ಯ ಸೋತರೂ ಆರ್ಸಿಬಿಗೆ ಜೈಕಾರ ಹಾಕಿದ ಫ್ಯಾನ್ಸ್