ನವದೆಹಲಿ : 2023ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಎಲ್ಲ 10 ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದೆ. ಇದರ ಜೊತೆಗೆ ಭಾರತೀಯ ಬ್ಯಾಟ್ಸ್ಮನ್ ಮತ್ತು ಬೌಲರ್ಗಳು ಮೈದಾನದಲ್ಲಿ ಮಿಂಚು ಹರಿಸುತ್ತಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಕಣ್ಣಿಗೆ ಹಬ್ಬವಾಗಿದೆ. ಇದುವರೆಗೆ ಒಟ್ಟು 36 ಪಂದ್ಯಗಳು ನಡೆದಿದ್ದು, ಈ ಸುತ್ತಿನ ಅರ್ಧದಷ್ಟು ಪಂದ್ಯಗಳು ಮುಕ್ತಾಯಗೊಂಡಿದೆ. ಇಂದು 37ನೇ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಈ ಎಲ್ಲ ತಂಡಗಳು ಐಪಿಎಲ್ ಕಿರೀಟಕ್ಕಾಗಿ ಕಾದಾಟ ನಡೆಸುತ್ತಿದ್ದು, ಇನ್ನೊಂದೆಡೆ ಆಟಗಾರರ ನಡುವೆ ಪರ್ಪಲ್ ಕ್ಯಾಪ್ ಮತ್ತು ಆರೆಂಜ್ ಕ್ಯಾಪ್ಗೆ ಪೈಪೋಟಿ ಮುಂದುವರೆದಿದೆ.
![Orange Cap](https://etvbharatimages.akamaized.net/etvbharat/prod-images/18360316_t33.jpg)
ಆರೆಂಜ್ ಕ್ಯಾಪ್ ರೇಸ್ನಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದು, ಪರ್ಪಲ್ ಕ್ಯಾಪ್ ರೇಸಿನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ ತಂಡಗಳ ಅಂಕಪಟ್ಟಿಯನ್ನು ನೋಡುವುದಾದರೆ, ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ಇದ್ದು, ಈ ಎರಡೂ ತಂಡಗಳು 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು, 10 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
![Purple Cap](https://etvbharatimages.akamaized.net/etvbharat/prod-images/18360316_t555.jpg)
ಮೂರನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ ಇದ್ದು, ಇಂದಿನ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದರೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸಮಬಲ ಸಾಧಿಸಲಿದೆ. ಚೆನ್ನೈ ಮತ್ತೊಂದು ಜಯದ ನಿರೀಕ್ಷೆಯಲ್ಲಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲು ಮುಂದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಏಳು ಪಂದ್ಯಗಳಲ್ಲಿ 5 ಪಂದ್ಯಗಳನ್ನು ಸೋತು ಕೊನೆ ಸ್ಥಾನದಲ್ಲಿದ್ದರೆ, ಹೈದರಾಬಾದ್ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಆರೆಂಜ್ ಕ್ಯಾಪ್ ರೇಸ್ನಲ್ಲಿರುವ ಆಟಗಾರರ ಪಟ್ಟಿಯಲ್ಲಿ ಈ ಸುತ್ತಿನ ಐಪಿಎಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಡುಪ್ಲೆಸಿಸ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಡುಪ್ಲೆಸಿಸ್ 8 ಪಂದ್ಯಗಳಲ್ಲಿ 422 ರನ್ ಗಳಿಸಿದ್ದು, 60.28 ಆವ್ರೇಜ್ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿ ಕಿಂಗ್ ಕೊಹ್ಲಿ ಇದ್ದು 8 ಪಂದ್ಯಗಳಿಂದ 333 ರನ್ ಗಳಿಸಿ, 47.57 ಆವ್ರೇಜ್ ಹೊಂದಿದ್ದಾರೆ.
![2023 IPL points table update](https://etvbharatimages.akamaized.net/etvbharat/prod-images/18360316_thum66.jpg)
ಆರೆಂಜ್ ಕ್ಯಾಪಿನ ಟಾಪ್ 10 ಪಟ್ಟಿಯಲ್ಲಿ ಭಾರತದ ಐದು ಬ್ಯಾಟ್ಸ್ಮನ್ಗಳು ಮತ್ತು ಐವರು ವಿದೇಶಿ ಬ್ಯಾಟ್ಸ್ಮನ್ಗಳಿದ್ದಾರೆ. ಭಾರತೀಯರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, ನಂತರದಲ್ಲಿ ವೆಂಕಟೇಶ್ ಅಯ್ಯರ್, ಶುಭಮನ್ ಗಿಲ್, ರಿತುರಾಜ್ ಗಾಯಕ್ವಾಡ್, ಕೆ.ಎಲ್ ರಾಹುಲ್, ಮತ್ತು ರಿಂಕು ಸಿಂಗ್ ಟಾಪ್ 10 ಅಲ್ಲಿ ಸ್ಥಾನ ಪಡೆದಿದ್ದಾರೆ.
ಪರ್ಪಲ್ ಕ್ಯಾಪ್ ರೇಸಿನಲ್ಲಿ ರಶೀದ್ ಖಾನ್ ಮತ್ತು ಮೊಹಮ್ಮದ್ ಸಿರಾಜ್ ನಡುವೆ ಸ್ಪರ್ಧೆ ಮುಂದುವರೆದಿದೆ. ಪರ್ಪಲ್ ಕ್ಯಾಪ್ ಗಾಗಿ ಬೌಲರ್ಗಳ ನಡುವೆ ತೀವ್ರ ಪೈಪೋಟಿ ಇದ್ದು, ಮೊಹಮ್ಮದ್ ಸಿರಾಜ್ ಮತ್ತು ರಶೀದ್ ಖಾನ್ ತಲಾ 14 ವಿಕೆಟ್‌ಗಳೊಂದಿಗೆ ನಂಬರ್ ಒನ್ ಸ್ಥಾನ ಹಂಚಿಕೊಂಡಿದ್ದಾರೆ. ಜೊತೆಗೆ ತಲಾ 13 ವಿಕೆಟ್ ಪಡೆಯುವುದರ ಮೂಲಕ ಅರ್ಷದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ಜಂಟಿಯಾಗಿ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಈ ಐಪಿಎಲ್ನಲ್ಲಿ ಭಾರತದ ಬ್ಯಾಟ್ಸ್ಮನ್ಗಳಿಗಿಂತ ಭಾರತದ ಬೌಲರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪರ್ಪಲ್ ಕ್ಯಾಪ್ ರೇಸ ನಲ್ಲಿ ರಶೀದ್ ಖಾನ್ ಮತ್ತು ಮಾರ್ಕ್ ವುಡ್ ಅವರನ್ನು ಹೊರತುಪಡಿಸಿದರೆ ಉಳಿದಂತೆ ಟಾಪ್ 10 ಪಟ್ಟಿಯಲ್ಲಿ 8 ಭಾರತೀಯ ಬೌಲರ್ಗಳು ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ಇತಿಹಾಸ ಬರೆದ ವಿರಾಟ್ ಕೊಹ್ಲಿ