ಚೆನ್ನೈ: ಸತತ ಮೂರನೇ ವರ್ಷವೂ ಐಪಿಎಲ್ ಹರಾಜಿನಿಂದ ಹೊರಗುಳಿಯುವುದು ಎಂದರೆ ಬಹಳ ಕಷ್ಟದ ನಿರ್ಧಾರ. ಒಂದು ಅವಕಾಶ ದೊರೆತರೆ ಉತ್ತಮ ಪ್ರದರ್ಶನ ತೋರುವ ಭರವಸೆ ಇದೆ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬೇಸರ ವ್ಯಕ್ತಪಡಿಸಿದರು.
ಐಪಿಎಲ್ ಹರಾಜು ಫೆಬ್ರವರಿ 18ರಂದು 3 ಗಂಟೆಗೆ ಚೆನ್ನೈನಲ್ಲಿ ನಡೆಯಲಿದೆ. ಒಟ್ಟು 292 ಆಟಗಾರರ ಹೆಸರು ಹರಾಜಿಗೆ ಅಂತಿಮಗೊಂಡಿದ್ದು, ಇಂಗ್ಲೆಂಡ್ನ ಮೊಯೀನ್ ಅಲಿ, ಜೇಸನ್ ರಾಯ್ ಮತ್ತು ಮಾರ್ಕ್ ವುಡ್ ಅದರಲ್ಲಿ ಸೇರಿದ್ದಾರೆ. 292 ಆಟಗಾರರ ಪೈಕಿ 164 ಆಟಗಾರರು ಭಾರತೀಯರಿದ್ದರೆ, 128 ವಿದೇಶಿ ಕ್ರಿಕೆಟಿಗರಿದ್ದಾರೆ.
ಇದು ತುಂಬಾ ಕಷ್ಟಕರವಾದ ನಿರ್ಧಾರ. ಅವಕಾಶ ದೊರೆಯುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಅಂತಿಮಗೊಂಡ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿರುವುದು ಬೇಸರವಾಗಿದೆ. ಹತಾಶನಾಗಿದ್ದೇನೆ. ಮುಂದಿನ ಐಪಿಎಲ್ನಲ್ಲಾದರೂ ಅವಕಾಶ ಸಿಗುವ ಆಶಾದಾಯಕ ಇನ್ನೂ ಕರಗಿಲ್ಲ ಎಂದು ಮೊದಲ ಟೆಸ್ಟ್ನಲ್ಲಿ 218 ರನ್ ಗಳಿಸಿ ಪಂದ್ಯದ ಗೆಲುವಿಗೆ ಕಾರಣರಾದ ರೂಟ್ ಹೇಳಿದರು.
ಮೊದಲ ಟೆಸ್ಟ್ನಲ್ಲಿ ನಾವು ಅದ್ಭುತ ಕ್ರಿಕೆಟ್ ಆಡಿದ್ದೇವೆ. ಈಗಲೂ ಅದೇ ವಿಶ್ವಾಸದಲ್ಲಿದ್ದೇವೆ. ಅಲ್ಲದೇ, ಗೆಲ್ಲುವ ವಿಶ್ವಾಸವನ್ನೂ ಹೊಂದಿದ್ದೇವೆ. ಆದರೆ, ದೊಡ್ಡಮಟ್ಟದ ಸವಾಲು ಎದುರಿಸಬೇಕಾಗಿದೆ ಎಂದರು. ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ನಾಳೆ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.