ನವದೆಹಲಿ: ಐಪಿಎಲ್ 2021ರಲ್ಲಿ ಬ್ಯಾಟಿಂಗ್ ಶೈಲಿಯಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿರುವುದೇ ತಮ್ಮ ಯಶಸ್ಸಿಗೆ ಕಾರಣ ಎಂದು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.
ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 38 ಎಸೆತಗಳಲ್ಲಿ 56 ರನ್ ಬಾರಿಸಿದ ಫಾಫ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳ ಮೂಲಕ ಆರೆಂಜ್ ಕ್ಯಾಪ್ ಪಡೆದರು. ಅವರು 6 ಪಂದ್ಯಗಳಿಂದ 67.05 ಸರಾಸರಿಯಲ್ಲಿ 270 ರನ್ ಪೇರಿಸಿದ್ದು, 140ರ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸಲು ಯತ್ನಿಸುತ್ತಿದ್ದೇನೆ. ಕೊನೆಯ ಆವೃತ್ತಿಯಲ್ಲಿನ ಯಶಸ್ಸನ್ನೇ ಮುಂದುವರೆಸುವುದು ಅಗತ್ಯವಾಗಿದೆ. ಕೆಲ ಬದಲಾವಣೆಗಳೊಂದಿಗೆ ಈ ಸೀಸನ್ಲ್ಲಿ ಆಡುತ್ತಿದ್ದೇನೆ ಎಂದು ಡುಪ್ಲೆಸಿಸ್ ಹೇಳಿದರು.
-
#CSKvSRH
— daddycool #FBPE #FBPPR 💚 (@Henry64Ian) April 28, 2021 " class="align-text-top noRightClick twitterSection" data="
Not bade for an old git#FafDuPlessis pic.twitter.com/6fXpwioWTk
">#CSKvSRH
— daddycool #FBPE #FBPPR 💚 (@Henry64Ian) April 28, 2021
Not bade for an old git#FafDuPlessis pic.twitter.com/6fXpwioWTk#CSKvSRH
— daddycool #FBPE #FBPPR 💚 (@Henry64Ian) April 28, 2021
Not bade for an old git#FafDuPlessis pic.twitter.com/6fXpwioWTk
ಕ್ಯಾಚ್ ಬಗ್ಗೆ ಮಾತನಾಡಿದ ಅವರು, ಪಂದ್ಯಗಳಲ್ಲಿ ಹೆಚ್ಚು ಕ್ಯಾಚ್ ಪಡೆಯುವ ಅವಕಾಶ ಸಿಗದಿರುವುದಕ್ಕೆ ಬೇಸರವಿದೆ. ಜಡೇಜಾ ಅದ್ಭುತ ಕ್ಯಾಚ್ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಅವರೊಬ್ಬ ಸೂಪರ್ ಮ್ಯಾನ್ ಆಗಿದ್ದಾರೆ. ಹೈದರಾಬಾದ್ ವಿರುದ್ಧ ಒಂದು ಕ್ಯಾಚ್ ಪಡೆದಿರುವುದು ಸಂತಸ ತಂದಿದೆ ಎಂದರು. ನಿನ್ನೆ ಪಂದ್ಯದಲ್ಲಿ ಲಾಂಗ್ ಆನ್ನತ್ತ ಮನೀಶ್ ಪಾಂಡೆ ಬಾರಿಸಿದ್ದ ಚೆಂಡನ್ನು ಡೈವ್ ಮೂಲಕ ಹಿಡಿಯುವಲ್ಲಿ ಡುಪ್ಲೆಸಿಸ್ ಸಫಲರಾಗಿದ್ದರು.
ಇದನ್ನೂ ಓದಿ: ಸತ್ತ ಮಹಿಳೆ ಅಂತ್ಯ ಸಂಸ್ಕಾರ ಮಾಡಲು ಹೋಗುವಾಗ ಮತ್ತೆ ಜೀವಂತ: ಎರಡು ಬಾರಿ ಸಾವಿಗೀಡಾದ ಮಹಿಳೆ!