ETV Bharat / sports

2008ರಲ್ಲಿ ಇದೇ ದಿನ, ಐಪಿಎಲ್​ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್​ ಪಡೆದ್ದ ಲಕ್ಷ್ಮೀಪತಿ ಬಾಲಾಜಿ...

author img

By

Published : May 10, 2023, 6:25 PM IST

ಆ ಪಂದ್ಯದಲ್ಲಿ ಪಂಜಾಬ್‌ ತಂಡವು 182 ರನ್​ಗಳ ಚೇಸ್‌ನ ಅಂತಿಮ ಓವರ್‌ನಲ್ಲಿ ಲಕ್ಷ್ಮೀಪತಿ ಬಾಲಾಜಿ ಅವರು ಇರ್ಫಾನ್ ಪಠಾಣ್, ಪಿಯೂಷ್ ಚಾವ್ಲಾ ಮತ್ತು ವಿಆರ್‌ವಿ ಸಿಂಗ್ ಅವರನ್ನು ಔಟ್ ಮಾಡಿದ್ದರು.

Lakshmipathy Balaji hattrick
2008ರಲ್ಲಿ ಇದೇ ದಿನ, ಐಪಿಎಲ್​ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್​ ಪಡೆದ್ದ ಲಕ್ಷ್ಮೀಪತಿ ಬಾಲಾಜಿ

ಚೆನ್ನೈ (ತಮಿಳುನಾಡು): 2008ರಲ್ಲಿ ಇದೇ ದಿನ, ಭಾರತದ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್​ ಪಡೆದು ಸಾಧನೆ ಮಾಡಿದ್ದರು. ಐಪಿಎಲ್​ 2008ರ ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್ ಎಂದು ಕರೆಯಲಾಗುತ್ತದೆ) ವಿರುದ್ಧದ ಪಂದ್ಯದ ಸಮಯದಲ್ಲಿ ವೇಗಿ ಮಾಡಿದ್ದ ಈ ಸಾಧನೆ ಸ್ಮರಿಸಬಹುದು.

ಆ ಪಂದ್ಯದಲ್ಲಿ ಪಂಜಾಬ್‌ ತಂಡವು 182 ರನ್‌ಗಳ ಚೇಸ್‌ ಮಾಡುತ್ತಿದ್ದ ಅಂತಿಮ ಓವರ್‌ನಲ್ಲಿ ಬೌಲರ್ ಬಾಲಾಜಿ ಅವರು, ಇರ್ಫಾನ್ ಪಠಾಣ್, ಪಿಯೂಷ್ ಚಾವ್ಲಾ ಮತ್ತು ವಿಆರ್‌ವಿ ಸಿಂಗ್ ಅವರನ್ನು ಔಟ್ ಮಾಡಿದ್ದರು. ಸಿಎಸ್‌ಕೆ 18 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಬಾಲಾಜಿ 5/24 ಅಂಕಿಅಂಶಗಳೊಂದಿಗೆ ಫಿನಿಶ್ ಮಾಡಿದರು. ಇದಕ್ಕಾಗಿ ಅವರಿಗೆ 'ಪಂದ್ಯ ಶ್ರೇಷ್ಠ' ಪ್ರಶಸ್ತಿಯನ್ನು ನೀಡಲಾಯಿತು. ಬಾಲಾಜಿ ಆ ಸೀಸನ್​ನಲ್ಲಿ ಸಿಎಸ್​ಕೆನ ಪ್ರಮುಖ ಬೌಲರ್ ಆಗಿದ್ದರು. ಇದರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ನಂತರ, ಸಿಎಸ್​ಕೆ ರನ್ನರ್ ಅಪ್ ಆಗಿತ್ತು. ಬಾಲಾಜಿ ಒಂಬತ್ತು ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದರು. ಆ ದಿನದಿಂದ, ಈ ಸಾಧನೆಯನ್ನು ಇನ್ನೂ 21 ಬಾರಿ ಪುನರಾವರ್ತಿಸಲಾಗಿದೆ.

ರಶೀದ್ ಖಾನ್ ಮೊದಲ ಹ್ಯಾಟ್ರಿಕ್ ಸಾಧನೆ: ಅಫ್ಘಾನಿಸ್ತಾನ ಮತ್ತು ಗುಜರಾತ್ ಟೈಟಾನ್ಸ್ ಸ್ಪಿನ್ನರ್ ರಶೀದ್ ಖಾನ್ ಅವರು ಏಪ್ರಿಲ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಮೊದಲ ಹ್ಯಾಟ್ರಿಕ್ ಅನ್ನು ಪಡೆದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆಫ್ಘನ್ T-20 ಸೂಪರ್‌ಸ್ಟಾರ್ ಇದನ್ನು ಸಾಧಿಸಿದ್ದಾರೆ. ಅಂತಿಮ ನಾಲ್ಕು ಓವರ್‌ಗಳಲ್ಲಿ ಕೆಕೆಆರ್‌ಗೆ 50 ರನ್‌ಗಳ ಅಗತ್ಯವಿದ್ದಾಗ, ರಶೀದ್ 17ನೇ ಓವರ್‌ಗೆ ಆಗಮಿಸಿದರು. ಅವರು ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಅಪಾಯಕಾರಿ ಆಂಡ್ರೆ ರಸೆಲ್ (1), ಸುನಿಲ್ ನರೈನ್ (0) ಮತ್ತು ಶಾರ್ದೂಲ್ ಠಾಕೂರ್ (0) ಅವರನ್ನು ಔಟ್​ ಮಾಡುವ ಮೂಲಕ ತಕ್ಷಣವೇ ಪ್ರಭಾವ ಬೀರಿದರು. ಕೆಲವೇ ನಿಮಿಷಗಳಲ್ಲಿ ಕೆಕೆಆರ್​ ಅನ್ನು 155/4 ರಿಂದ 155/7ಕ್ಕೆ ಇಳಿಸಿದರು. ಆದರೆ, ಅಂತಿಮ ಓವರ್‌ನಲ್ಲಿ ರಿಂಕು ಸಿಂಗ್ ಯಶ್ ದಯಾಲ್ ಅವರನ್ನು ಸತತ ಐದು ಸಿಕ್ಸರ್‌ಗಳನ್ನು ಹೊಡೆದ ನಂತರ ಕೆಕೆಆರ್ ಪಂದ್ಯವನ್ನು ಗೆಲ್ಲಲು ಮುಂದಾಯಿತು.

ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ಮೂರು ಹ್ಯಾಟ್ರಿಕ್‌ ಸಾಧನೆ: ಐಪಿಎಲ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಅಫ್ಘಾನಿಸ್ತಾನ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಲೀಗ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 18ನೇ ಬೌಲರ್ ಆಗಿದ್ದಾರೆ. ಲೀಗ್ ಪ್ರಾರಂಭವಾದಾಗಿನಿಂದ, ಬಾಲಾಜಿ, ರೋಹಿತ್ ಶರ್ಮಾ, ಯುವರಾಜ್ ಸಿಂಗ್, ರಶೀದ್, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್, ಸ್ಯಾಮ್ ಕುರ್ರಾನ್ ಮುಂತಾದ ತಾರೆಗಳು. ಶ್ರೇಯಸ್ ಗೋಪಾಲ್, ಸುನಿಲ್ ನರೈನ್, ಆಂಡ್ರ್ಯೂ ಟೈ, ಜಯದೇವ್ ಉನದ್ಕತ್, ಅಕ್ಷರ್ ಪಟೇಲ್, ಶೇನ್ ವ್ಯಾಟ್ಸನ್ ಮತ್ತು ಅಮಿತ್ ಮಿಶ್ರಾ ಐಪಿಎಲ್ ಹ್ಯಾಟ್ರಿಕ್ ವಿಕೆಟ್​ ಪಡೆದ ಕೆಲವು ಆಟಗಾರರು ಇವರು. ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ಮೂರು ಬಾರಿ ಹ್ಯಾಟ್ರಿಕ್‌ ವಿಕೆಟ್​ಪಡೆದಿದ್ದು, ಲೀಗ್‌ನ ಇತಿಹಾಸದಲ್ಲಿ ಈ ಬೌಲರ್‌ ಅತಿ ಹೆಚ್ಚು ಹ್ಯಾಟ್ರಿಕ್‌ ಗಳಿಸಿದ್ದಾರೆ.

ಇದನ್ನೂ ಓದಿ: IPLನಲ್ಲಿ ಇಂದು: ಡೆಲ್ಲಿ ಕ್ಯಾಪಿಟಲ್ಸ್‌ಗೆ ಉಳಿವಿನ ಹೋರಾಟ, ಪ್ಲೇ ಆಫ್‌ ಮೇಲೆ ಚೆನ್ನೈ ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.