ಮುಂಬೈ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಲು ಸಾಧ್ಯವಾಗದಿರುವುದು ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಆಡಲು ವಿಫಲವಾಗಿರುವುದು ನನ್ನನ್ನು ಹೆಚ್ಚು ಕಾಡುತ್ತಿದೆ ಎಂದು ವಿರಾಟ್ ಕೊಹ್ಲಿ ಹೇಳಿದರು.
ನಿನ್ನೆ ಪಂದ್ಯದಲ್ಲಿ ಕೊಹ್ಲಿ 54 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಐಪಿಎಲ್ ಟೇಬಲ್-ಟಾಪರ್ಸ್ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಲು ಮತ್ತು ಪ್ಲೇ-ಆಫ್ ರೇಸ್‌ನಲ್ಲಿ ಜೀವಂತವಾಗಿರಲು ಕೊಹ್ಲಿ ಆಟ ನೆರವಾಗಿತ್ತು.
ಇದನ್ನೂ ಓದಿ: RCB vs GT: ಕೊಹ್ಲಿ,ಡುಪ್ಲೆಸಿಸ್,ಮ್ಯಾಕ್ಸಿ ಅಬ್ಬರಕ್ಕೆ ಸೋತ ಗುಜರಾತ್.. ಬೆಂಗಳೂರು ಪ್ಲೇ-ಆಫ್ ಆಸೆ ಜೀವಂತ
'ಇದು ಒಂದು ಪ್ರಮುಖ ಪಂದ್ಯವಾಗಿತ್ತು. ನಾನು ತಂಡಕ್ಕಾಗಿ ಹೆಚ್ಚಿನದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಿರಾಶೆಗೊಂಡಿದ್ದು, ನನ್ನ ಕೊಡುಗೆ ಏನೂ ಇಲ್ಲವೆಂಬುದು ನನ್ನನ್ನು ಕಾಡುತ್ತಿತ್ತು. ನಿನ್ನೆ ನನ್ನಿಂದ ಸಾಧ್ಯವಾದ ಆಟವಾಡಿದ್ದೇನೆ' ಎಂದು ಕೊಹ್ಲಿ ತಿಳಿಸಿದರು.
'ನಾನು ನಿಜವಾಗಿಯೂ ಕಷ್ಟಪಟ್ಟು ಅಭ್ಯಾಸ ಮಾಡಿದ್ದೇನೆ. ಬುಧವಾರ ನೆಟ್ಸ್‌ನಲ್ಲಿ 90 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದೆ. ಮೊಹಮ್ಮದ್ ಶಮಿ ಅವರ ಮೊದಲ ಬೌಂಡರಿಯು ನನ್ನ ಆಟ ಮರಳಿ ಪಡೆಯುವಲ್ಲಿ ದೂರವಿಲ್ಲ ಎಂಬ ವಿಶ್ವಾಸ ನೀಡಿತು. ನಾನು ಹಿಂದೆಂದೂ ನೋಡಿರದ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ' ಎಂದು ಕೊಹ್ಲಿ ಭಾವುಕರಾದರು.