ETV Bharat / sports

ವಿರಾಟ್​ ಕೊಹ್ಲಿ ಶತಕದ ಬೆನ್ನಲ್ಲೇ ಟ್ರೋಲ್​ಗೆ ಗುರಿಯಾದ ಗಂಭೀರ್​, ನವೀನ್-ಉಲ್-ಹಕ್! - ಇಂಡಿಯನ್​ ಪ್ರೀಮಿಯರ್​ ಲೀಗ್​

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೈದರಾಬಾದ್​ ವಿರುದ್ಧ ವಿರಾಟ್​ ಭರ್ಜರಿ ಶತಕದ ನೆರವಿನಿಂದ ಬೆಂಗಳೂರು ಗೆಲುವು ಸಾಧಿಸುತ್ತಿದ್ದಂತೆ, ಅಫ್ಘಾನಿಸ್ತಾನದ ವೇಗಿ ನವೀನ್-ಉಲ್-ಹಕ್ ಮತ್ತು ಮೆಂಟರ್​ ಗೌತಮ್ ಗಂಭೀರ್ ಅವರ​ನ್ನು ಅಭಿಮಾನಿಗಳು ಟ್ರೋಲ್​ ಮಾಡಿದ್ದಾರೆ.

Etv Bharat
ವಿರಾಟ್​ ಕೊಹ್ಲಿ ಶತಕದ ಬೆನ್ನಲ್ಲೇ ಟ್ರೋಲ್​ಗೆ ಗುರಿಯಾದ ಗಂಭೀರ್​ - ನವೀನ್-ಉಲ್-ಹಕ್!
author img

By

Published : May 19, 2023, 9:07 AM IST

Updated : May 19, 2023, 10:35 AM IST

ವಿರಾಟ್ ಕೊಹ್ಲಿ ಅಬ್ಬರದ ಶತಕದ ನೆರವಿನಿಂದ ಗುರುವಾರ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 8 ವಿಕೆಟ್​ ಅಂತರದಿಂದ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್​ ಆಸೆ ಜೀವಂತವಾಗಿದೆ. ಕೊಹ್ಲಿ ಶತಕ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಬಿರುಸಿದ ಅರ್ಧಶತಕದ ನೆರವಿನಿಂದ ಆರ್​ಸಿಬಿ ನಿರ್ಣಾಯಕ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದ್ದು, ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಗೆಲುವಿನ ಬೆನ್ನಲ್ಲೇ ಲಕ್ನೋ ತಂಡದ ಆಟಗಾರ ಅಫ್ಘಾನಿಸ್ತಾನದ ವೇಗದ ಬೌಲರ್​ ನವೀನ್-ಉಲ್-ಹಕ್ ಮತ್ತು ಮೆಂಟರ್​ ಗೌತಮ್ ಗಂಭೀರ್ ಭಾರಿ ಟ್ರೋಲ್​ಗೆ ಗುರಿಯಾಗಿದ್ದಾರೆ.

ಕೆಲದಿನಗಳ ಹಿಂದೆ, ಮೇ 1ರಂದು ಲಕ್ನೋ ವಿರುದ್ಧದ ಪಂದ್ಯದ ಬಳಿಕ ವಿರಾಟ್​ ಕೊಹ್ಲಿ ಹಾಗೂ ಗೌತಮ್​ ಗಂಭೀರ್​ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೆ ಪಂದ್ಯದ ವೇಳೆಯೂ ಮೈದಾನದಲ್ಲಿ ವಿರಾಟ್​​ ಹಾಗೂ ನವೀನ್-ಉಲ್-ಹಕ್ ಮಾತಿನ ಚಕಮಕಿ ನಡೆಸಿದ್ದರು. ಇದಾದ ಬಳಿಕ ಎಲ್ಲ ಮೂವರೂ ಆಟಗಾರರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿತ್ತು. ಈ ಪಂದ್ಯದುದ್ದಕ್ಕೂ ಮೈದಾನದಲ್ಲಿ ಅಬ್ಬರದ ಸಂಭ್ರಮಾಚರಣೆ ತೋರಿದ್ದ ಕೊಹ್ಲಿ ಲಕ್ನೋ ಮೈದಾನದ ಕೇಂದ್ರಬಿಂದುವಾಗಿದ್ದರು.

ಈ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಆರ್​​ಸಿಬಿ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​​ವೊಂದರ ಮೂಲಕ ಗಮನ ಸೆಳೆದಿದ್ದ ನವೀನ್-ಉಲ್-ಹಕ್ ಪರೋಕ್ಷವಾಗಿ ಕೊಹ್ಲಿ ಹಾಗೂ ಆರ್​ಸಿಬಿ ಅಭಿಮಾನಿಗಳ ಕಾಲೆಳೆದಿದ್ದರು. ಆರ್​​ಸಿಬಿ ಹಾಗೂ ಮುಂಬೈ ಪಂದ್ಯ ನಡೆಯುತ್ತಿದ್ದ ಟಿವಿ ಪರದೆಯ ಮುಂದೆ ಮಾವಿನ ಹಣ್ಣುಗಳನ್ನು ಇಟ್ಟ ಫೋಟೊ ಹಂಚಿಕೊಂಡಿದ್ದ ಹಕ್​, "ಸಿಹಿ ಮಾವಿನ ಹಣ್ಣುಗಳು" ಎಂದು ಬರೆದುಕೊಂಡಿದ್ದರು. ವಿರಾಟ್​ ಕೊಹ್ಲಿ (1) ಔಟಾಗಿರುವ ದೃಶ್ಯ ಟಿವಿಯಲ್ಲಿ ಸೆರೆಯಾಗಿರುವುದು ಗಮನಿಸಬೇಕಾದ ಸಂಗತಿ.

ಇದನ್ನೇ ಗುರಿಯಾಗಿಸಿಕೊಂಡಂತಿರುವ ಆರ್​ಸಿಬಿ ಅಭಿಮಾನಿಗಳು ನಿನ್ನೆ ಹೈದರಾಬಾದ್​ ವಿರುದ್ಧ ಬೆಂಗಳೂರು ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್​ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್​ ಮಾಡಿದ್ದಾರೆ. ತರಹೇವಾರಿ ಮೀಮ್ಸ್​ಗಳ ಮೂಲಕ ಟ್ವೀಟ್​ಗಳೊಂದಿಗೆ ಗಂಭೀರ್​ ಹಾಗೂ ನವೀನ್-ಉಲ್-ಹಕ್ ಕಾಲೆಳೆದಿದ್ದಾರೆ.

ಜೊತೆಗೆ, ಪತ್ರಕರ್ತ ರಜತ್​ ಶರ್ಮಾ ಕೂಡ ಕೊಹ್ಲಿ ಶತಕಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದು, ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ. ''ವಿರಾಟ್ ಕೊಹ್ಲಿಯಿಂದ ಭವ್ಯವಾದ ಶತಕ. ಬ್ಯಾಟಿಂಗ್​ ನೋಡುವುದೇ ಆನಂದಮಯ. ಸಹಜವಾಗಿ, ಎಲ್ಲೋ ಒಂದೆಡೆ ಕೆಲವರಿಗೆ ಇದು ಸಂತಸ ತಂದಿಲ್ಲ'' ಎಂದು ಟ್ವೀಟ್​ ಮಾಡಿದ್ದಾರೆ.

ವಿರಾಟ್​ ಜೊತೆಗಿನ ವಾಗ್ವಾದ ಬೆನ್ನಲ್ಲೇ ಗಂಭೀರ್​ , ಪತ್ರಕರ್ತ ಹಾಗೂ ದೆಹಲಿ ಕ್ರಿಕೆಟ್​ ಅಸೋಸಿಯೇಷನ್​ ಮಾಜಿ ಅಧ್ಯಕ್ಷ ರಜತ್​ ಶರ್ಮಾ ವಿರುದ್ಧವೂ ಪರೋಕ್ಷವಾಗಿ ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿದ್ದರು. ಒತ್ತಡವನ್ನು ನೆಪವಾಗಿಟ್ಟುಕೊಂಡು ದೆಹಲಿ ಕ್ರಿಕೆಟ್ ಜವಾಬ್ದಾರಿಯಿಂದ ಓಡಿಹೋದ ವ್ಯಕ್ತಿ ಎಂದೆಲ್ಲ ಸಂಭೋದಿಸಿದ್ದರು.

ಇನ್ನು ಐಪಿಎಲ್‌ನಲ್ಲಿ ಇಂದು ಸಂಜೆ ಪಂಜಾಬ್ ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗುತ್ತಿವೆ.

ಇದನ್ನೂ ಓದಿ: ''real King Virat Kohli'': ವಿರಾಟ್​ ಬ್ಯಾಟಿಂಗ್​ ಕೊಂಡಾಡಿದ ಪಾಕ್​ ಕ್ರಿಕೆಟಿಗ, ಬಾಬರ್​ ಫ್ಯಾನ್ಸ್​ಗೆ ಟಾಂಗ್​!

Last Updated : May 19, 2023, 10:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.