ಅಹಮದಾಬಾದ್ (ಗುಜರಾತ್): ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಐಪಿಎಲ್ ಎಂಬ ಮಹಾ ಕ್ರಿಕೆಟ್ ಮನಂಜನೆಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಈ ಪಂದ್ಯಕ್ಕಾಗಿ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾ ಸಂಕೀರ್ಣದ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದೆ. 16ನೇ ಆವೃತ್ತಿಯ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿವೆ.
-
Get 𝗥𝗘𝗔𝗗𝗬 to experience the visual extravaganza! 👏 👏
— IndianPremierLeague (@IPL) May 28, 2023 " class="align-text-top noRightClick twitterSection" data="
DO NOT MISS the IPL MID SHOW in the #TATAIPL 2023 Grand Finale! 🎥 😎#GTvCSK pic.twitter.com/W5OGC9itQg
">Get 𝗥𝗘𝗔𝗗𝗬 to experience the visual extravaganza! 👏 👏
— IndianPremierLeague (@IPL) May 28, 2023
DO NOT MISS the IPL MID SHOW in the #TATAIPL 2023 Grand Finale! 🎥 😎#GTvCSK pic.twitter.com/W5OGC9itQgGet 𝗥𝗘𝗔𝗗𝗬 to experience the visual extravaganza! 👏 👏
— IndianPremierLeague (@IPL) May 28, 2023
DO NOT MISS the IPL MID SHOW in the #TATAIPL 2023 Grand Finale! 🎥 😎#GTvCSK pic.twitter.com/W5OGC9itQg
58 ದಿನಗಳ ಕಾಲ 73 ಪಂದ್ಯಗಳು 12 ಕ್ರೀಡಾಂಗಣಗಳಲ್ಲಿ ನಡೆದಿವೆ. ಮೊದಲ ಪಂದ್ಯ ಆರಂಭವಾದ ಜಾಗದಲ್ಲೇ ಕಾಕತಾಳೀಯವೆಂಬಂತೆ ಅದೇ ತಂಡಗಳ ನಡುವಣ ಫೈನಲ್ ಹೋರಾಟದೊಂದಿಗೆ ಟೂರ್ನಿ ಮುಕ್ತಾಯವಾಗಲಿದೆ. ಅತೀ ಹೆಚ್ಚು ಪ್ರೇಕ್ಷಕರು ಕುಳಿತು ನೋಡಬಹುದಾದ ಈ ಕ್ರೀಡಾಂಗಣವನ್ನು 1000 ಕ್ಕೂ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಇಂದು ಬೃಹತ್ ಮೈದಾನ ನಾನಾ ಬಣ್ಣಗಳ ವಿದ್ಯುತ್ ದೀಪದಿಂದ ಪ್ರಜ್ವಲಿಸುತ್ತಿದೆ.
ಮಹಾ ಮನರಂಜನೆಯನ್ನು ಮನೆಯಲ್ಲಿರುವ ಟಿವಿ ಮತ್ತು ಅಲ್ಲಲ್ಲಿ ಮೊಬೈಲ್ನಲ್ಲಿ ನೋಡುವವರಿಗೆ ಅಚ್ಚುಕಟ್ಟಾಗಿ ತಲುಪಿಸಲು ಹಲವಾರು ಕ್ಯಾಮರಾ ಕಣ್ಣುಗಳು ಕಾರ್ಯನಿರ್ವಹಿಸಲಿದೆ. ನಾನಾ ಆಯಾಮಗಳಲ್ಲಿ ಈ ಕ್ಯಾಮರಾಗಳು ದೃಶ್ಯಗಳನ್ನು ಸೆರೆಹಿಡಿಯಲಿವೆ. ಮೈದಾನದಲ್ಲಿ ಪಂದ್ಯ ವೀಕ್ಷಣೆಗೆ ತೆರಳಿದ ಅಭಿಮಾನಿಗಳಿಗಿಂತ ಹೆಚ್ಚು ಜನರು ನೇರ ಪ್ರಸಾರವನ್ನು ತಾವಿದ್ದಲ್ಲಿಂದಲೇ ಅನುಭವಿಸಲಿದ್ದಾರೆ.
-
All the action, drama, emotion which is set to get captured by more than 50 different cameras across the stadium 🎥
— IndianPremierLeague (@IPL) May 28, 2023 " class="align-text-top noRightClick twitterSection" data="
Mr. Dev Shriyan, Director - Production and Broadcast breaks down the coverage of the Final Showdown for us👌🏻👌🏻#TATAIPL | #CSKvGT | #Final pic.twitter.com/pankEr6VHz
">All the action, drama, emotion which is set to get captured by more than 50 different cameras across the stadium 🎥
— IndianPremierLeague (@IPL) May 28, 2023
Mr. Dev Shriyan, Director - Production and Broadcast breaks down the coverage of the Final Showdown for us👌🏻👌🏻#TATAIPL | #CSKvGT | #Final pic.twitter.com/pankEr6VHzAll the action, drama, emotion which is set to get captured by more than 50 different cameras across the stadium 🎥
— IndianPremierLeague (@IPL) May 28, 2023
Mr. Dev Shriyan, Director - Production and Broadcast breaks down the coverage of the Final Showdown for us👌🏻👌🏻#TATAIPL | #CSKvGT | #Final pic.twitter.com/pankEr6VHz
ಈ ಬಗ್ಗೆ ಐಪಿಎಲ್ ಪ್ರಸಾರ ನಿರ್ದೇಶಕ ದೇವ್ ಶ್ರೇಯಾನ್ ಮಾತನಾಡಿ, "ಪಂದ್ಯವನ್ನು ಸೆರೆಹಿಡಿಯಲು 50 ಕ್ಯಾಮರಾಗಳನ್ನು ಬಳಸುತ್ತಿದ್ದೇವೆ. ಇದರಲ್ಲಿ 28 ವ್ಯಕ್ತಗತವಾಗಿ ನಿರ್ವಹಣೆ ಮಾಡಲಾಗುತ್ತದೆ. 6 ಸೂಪರ್ ಮೋಷನ್, 3 ಅಲ್ಟ್ರಾ ಮೋಷನ್ ಕ್ಯಾಮರಾಗಳನ್ನು ಬಳಸುತ್ತಾರೆ. ಇದಲ್ಲದೇ ಸ್ಪೈಡರ್ ಕ್ಯಾಮ್, ಎರಡು ಡ್ರೋನ್ ಅದಲ್ಲದೇ ಎರಡು ಸ್ವಯಂಚಾಲಿತ ಎರಡು ಕ್ಯಾಮರಾಗಳನ್ನು ವಿಶೇಷವಾಗಿ ಬಳಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಧೋನಿಗಿಂದು 250ನೇ IPL ಪಂದ್ಯ: 10ನೇ ಬಾರಿಗೆ ಸಿಎಸ್‌ಕೆ ತಂಡವನ್ನು ಫೈನಲ್‌ಗೇರಿಸಿದ ಕೀರ್ತಿ!
"ಎಂದಿನಂತೆ ಬಳಸುವ ಅಂಪೈರ್ ಕ್ಯಾಪ್ನಲ್ಲಿ, ವಿಕೆಟ್ನಲ್ಲಿ ಹಾಗೆಯೇ 8 ಕ್ಯಾಮರಾಗಳನ್ನು ವಿಶೇಷವಾಗಿ ಮೂರನೇ ಅಂಪೈರ್ಗಾಗಿ ಬಳಸಲಾಗುತ್ತದೆ. ಅದರಲ್ಲಿ ನೋಬಾಲ್, ಎಲ್ಬಿಡ್ಲ್ಯೂ, ಕ್ಯಾಚ್ಗಳು ಮತ್ತು ರನ್ ಔಟ್ನ ರೀತಿಯ ಸಮಯದಲ್ಲಿ ದೃಶ್ಯಗಳನ್ನು ಬಳಸಿಕೊಳ್ಳಲಾಗುತ್ತದೆ. ಮೈದಾನದಲ್ಲಿ ಆಟಗಾರರ ಬದಲಾವಣೆಯನ್ನು ಮತ್ತು ಗ್ರಾಫಿಕ್ಸ್ಗಳ ಬಳಕೆಗಾಗಿ ಎರಡು ರೂಫ್ ಕ್ಯಾಮರಾಗಳು ಬಳಸಲಾಗುತ್ತದೆ. ಮೈದಾನದಲ್ಲಿ ನಡೆಯುವ ಎಲ್ಲ ಭಾವನೆಗಳನ್ನು ನೋಡುಗರಿಗೆ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ" ಎಂದರು.
-
They BCCI's team of Pitch Curators has worked tirelessly to provide sporting pitches over the course of the tournament 👍🏻👍🏻
— IndianPremierLeague (@IPL) May 28, 2023 " class="align-text-top noRightClick twitterSection" data="
A big thank you to all of them involved behind the scenes in the #TATAIPL
This is their story 😊#Final | #CSKvGT pic.twitter.com/6euIgibxY0
">They BCCI's team of Pitch Curators has worked tirelessly to provide sporting pitches over the course of the tournament 👍🏻👍🏻
— IndianPremierLeague (@IPL) May 28, 2023
A big thank you to all of them involved behind the scenes in the #TATAIPL
This is their story 😊#Final | #CSKvGT pic.twitter.com/6euIgibxY0They BCCI's team of Pitch Curators has worked tirelessly to provide sporting pitches over the course of the tournament 👍🏻👍🏻
— IndianPremierLeague (@IPL) May 28, 2023
A big thank you to all of them involved behind the scenes in the #TATAIPL
This is their story 😊#Final | #CSKvGT pic.twitter.com/6euIgibxY0
ಫೈನಲ್ ಪಂದ್ಯಕ್ಕಾಗಿ ಪಿಚ್ ಅನ್ನು ಬಿಸಿಸಿಐನ ಉನ್ನತ ಪಿಚ್ ಕ್ಯೂರೇಟರ್ಗಳು ಸಿದ್ಧಪಡಿಸಿದ್ದಾರೆ. ಬಿಸಿಸಿಐ ಕೃಷಿ ವಿಭಾಗದಲ್ಲಿ ಮತ್ತು ಮಣ್ಣಿನ ಬಗ್ಗೆ ಅಧ್ಯಯನ ಮಾಡಿದ ಇಂಜಿನಿಯರಿಂಗ್ ಟೀಮ್ ಅನ್ನು ಪಿಚ್ ಸಿದ್ಧಪಡಿಸಲು ನಿಯೋಜಿಸಿದೆ. ಎಲ್ಲ ಪಂದ್ಯಗಳಿಗೂ ಆಯಾ ಮೈದಾನಕ್ಕೆ ಪಿಚ್ ಸಿದ್ಧ ಮಾಡುವ ಸಿಬ್ಬಂದಿ ಇರುತ್ತಾರೆ. ಅವರನ್ನು ಬಿಸಿಸಿಐ ವಿಶೇಷವಾಗಿ ನೇಮಿಸಿರುತ್ತದೆ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್: ಸ್ಟ್ಯಾಂಡ್‌ಬೈ ಆಟಗಾರನಾಗಿ ಯಶಸ್ವಿ ಜೈಸ್ವಾಲ್‌ಗೆ ಅವಕಾಶ