ETV Bharat / sports

ಮುತ್ತಯ್ಯ ಮುರಳೀಧರನ್‌ಗೆ ಚೆನ್ನೈ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿ - ಮುತ್ತಯ್ಯ ಮುರಳೀಧರನ್

ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರನ್ನು ಏಪ್ರಿಲ್ 18ರಂದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Muttiah Muralitharan undergoes angioplasty in Chennai
ಮುತ್ತಯ್ಯ ಮುರಳೀಧರನ್ ಆಸ್ಪತ್ರೆಗೆ ದಾಖಲು
author img

By

Published : Apr 19, 2021, 8:42 AM IST

ಚೆನ್ನೈ: ಶ್ರೀಲಂಕಾದ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರಿಗೆ ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಂಡಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿದೆ.

ವೈದ್ಯಕೀಯ ಪರೀಕ್ಷೆ ವೇಳೆ ಹೃದಯದ ಸಮಸ್ಯೆ ಇರುವುದು ಪತ್ತೆಯಾಗಿದ್ದು, ವೈದ್ಯರು ಅವರಿಗೆ ಹೃದಯದ ಸ್ಟೆಂಟ್ ಅಳವಡಿಸಿದ್ದಾರೆ.

ಮುರಳೀಧರನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹಾಯಕ ಸಿಬ್ಬಂದಿಯೂ ಆಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಹೃದಯದ ಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಐಪಿಎಲ್​ ಮೂಲಗಳು ತಿಳಿಸಿವೆ.

ಮುರಳೀಧರನ್ ಅಂತರಾಷ್ಟ್ರೀಯ ಕ್ರಿಕೆಟ್‌ ಸಾಧನೆ

ಮುರಳೀಧರನ್ (49)​ 133 ಟೆಸ್ಟ್, 350 ಏಕದಿನ ಮತ್ತು 12 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ 800 ವಿಕೆಟ್‌, ಏಕದಿನ ಕ್ರಿಕೆಟ್‌ನಲ್ಲಿ 534 ಮತ್ತು ಟಿ-20 ಯಲ್ಲಿ 13 ವಿಕೆಟ್‌ ಪಡೆದಿದ್ದಾರೆ.

ಇದನ್ನೂ ಓದಿ: ಗಬ್ಬರ್​ ಅಬ್ಬರಕ್ಕೆ ಪಂಜಾಬ್​ ತತ್ತರ: ಡೆಲ್ಲಿಗೆ 6 ವಿಕೆಟ್​​ಗಳ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.