ಮುಂಬೈ (ಮಹಾರಾಷ್ಟ್ರ): ಆರಂಭಿಕ ಇಶಾನ್ ಕಿಶನ್ ಅರ್ಧ ಶತಕ ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ಗಳಿಂದ ಗೆಲುವು ಸಾಧಿಸಿದೆ. 17.4 ಓವರ್ನಲ್ಲಿ ಎಂಐ(MI) ತಂಡ 5 ವಿಕೆಟ್ ಕಳೆದುಕೊಂಡು ಕೆಕೆಆರ್ ನೀಡಿದ್ದ 186 ರನ್ ಗುರಿ ಭೇದಿಸಿತು.
ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ವೆಂಕಟೇಶ್ ಅಯ್ಯರ್ ಅವರ ಶತಕದ ನೆರವಿನಿಂದ 185 ರನ್ ಗಳಿಸಿ ಸ್ಪರ್ಧಾತ್ಮಕ ಗುರಿ ನೀಡಿತ್ತು. ಹೊಟ್ಟೆ ನೋವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ ಹೊರಗೆ ಕುಳಿತಿದ್ದ ರೋಹಿತ್ ಶರ್ಮಾ ಇಂಪ್ಯಾಕ್ಟ್ ಆಟಗಾರನಾಗಿ ಕ್ರೀಸ್ಗಿಳಿದರು. ಆರಂಭಿಕ ಜೋಡಿ 65 ರನ್ ಜೊತೆಯಾಟ ನೀಡಿತು.
ರೋಹಿತ್ ಶರ್ಮಾ ಎರಡು ಸಿಕ್ಸ್ ಮತ್ತು ಒಂದು ಫೋರ್ನಿಂದ 20 ರನ್ ಗಳಿಸಿ ಔಟಾದರು. ನಂತರ ನಾಯಕ ಸೂರ್ಯ ಕುಮಾರ್ ಹಾಗು ಮತ್ತೋರ್ವ ಆರಂಭಿಕ ಕಿಶನ್ ಜೊತೆಗೂಡಿ ರನ್ ಕಲೆಹಾಕಿದರು. ಕಿಶನ್ ಭರ್ಜರಿ ಬ್ಯಾಟ್ ಬೀಸಿ ಐಪಿಎಲ್ನಲ್ಲಿ 2,000 ರನ್ ಗಡಿ ದಾಟಿದರು. ಇಂದಿನ ಅವರ ಇನ್ನಿಂಗ್ಸ್ನಲ್ಲಿ ಐಪಿಎಲ್ನ 12ನೇ ಅರ್ಧಶತಕ ದಾಖಲಿಸಿದರು. 25 ಬಾಲ್ ಎದುರಿಸಿ 5 ಬೌಂಡರಿ ಮತ್ತು 5 ಸಿಕ್ಸ್ನಿಂದ 58 ರನ್ ಚಚ್ಚಿದರು.
-
A special victory lap from @mipaltan to thank a special crowd at the Wankhede Stadium in Mumbai 😃 👏#TATAIPL | #MIvKKR pic.twitter.com/lGo8r8npow
— IndianPremierLeague (@IPL) April 16, 2023 " class="align-text-top noRightClick twitterSection" data="
">A special victory lap from @mipaltan to thank a special crowd at the Wankhede Stadium in Mumbai 😃 👏#TATAIPL | #MIvKKR pic.twitter.com/lGo8r8npow
— IndianPremierLeague (@IPL) April 16, 2023A special victory lap from @mipaltan to thank a special crowd at the Wankhede Stadium in Mumbai 😃 👏#TATAIPL | #MIvKKR pic.twitter.com/lGo8r8npow
— IndianPremierLeague (@IPL) April 16, 2023
ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಸ್ಕೈ(SKY): ನಾಯಕನ ಜವಾಬ್ದಾರಿ ಹೊತ್ತಿದ್ದ ಸೂರ್ಯ ಕುಮಾರ್ ಯಾದವ್ ನಿಧಾನಗತಿಯಲ್ಲಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ಈ ಹಾದಿಯಲ್ಲಿ ಕಿಶನ್ ನಂತರ ತಿಲಕ್ ವರ್ಮಾ ಅವರಿಗೆ ಸಾಥ್ ನೀಡಿದರು. ಕೆಕೆಆರ್ನ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ಕೊಟ್ಟ ಇಬ್ಬರು 50 ರನ್ಗಳ ಜೊತೆಯಾಟ ಮಾಡಿದರು.
ತಿಲಕ್ ವರ್ಮಾ 30 ರನ್ ಗಳಿಸಿದರೆ, ಅವರ ನಂತರ ಬಂದ ವಧೇರಾ 6 ರನ್ಗೆ ವಿಕೆಟ್ ಕೊಟ್ಟರು. ಸೂರ್ಯ ಕುಮಾರ್ ಯಾದವ್ 25 ಬಾಲ್ ಎದುರಿಸಿ 3 ಸಿಕ್ಸ್ ಮತ್ತು ನಾಲ್ಕು ಬೌಂಡರಿಸಹಿತ 43 ರನ್ ಗಳಿಸಿ ಶಾರ್ದೂಲ್ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಟಿಮ್ ಡೇವಿಡ್ 13 ಎಸೆತದಲ್ಲಿ ಅಜೇಯ 24 ರನ್ ಗಳಿಸಿ ಎಂಐಗೆ ಜಯ ತಂದಿತ್ತರು. ಕೆಕೆಆರ್ ಪರ ಸುಯಶ್ ಶರ್ಮಾ 2 ಮತ್ತು ಶಾರ್ದೂಲ್ ಠಾಕೂರ್, ಲೂಕಿ ಫರ್ಗ್ಯುಸನ್ ಹಾಗು ವರುಣ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: GT vs RR: ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ