ETV Bharat / sports

'T20 ವಿಶ್ವಕಪ್​​​ ತಂಡದಲ್ಲಿ ಓಪನರ್​ ಆಗಿ ಆಯ್ಕೆಯಾಗಿದ್ದೀಯಾ'.. ಕೊಹ್ಲಿ ಮಾತೇ ಕಿಶನ್​​​ ಆಟಕ್ಕೆ ಸ್ಫೂರ್ತಿ..

ವಿರಾಟ್​ ಮಾತಿನಿಂದ ಸ್ಫೂರ್ತಿ ಪಡೆದ ಇಶಾನ್ ಕಿಶನ್​ ನಂತರದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ. ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 50 ರನ್ ಸಿಡಿಸಿ ಮಿಂಚುವ ಮೂಲಕ ಇದೀಗ ತಾನು ವಿಶ್ವಕಪ್​ಗೆ ಸಿದ್ಧನಾಗಿದ್ದೇನೆ ಎಂಬ ಸಂದೇಶವನ್ನೂ ನೀಡಿದ್ದಾರೆ..

Ishan Kishan
Ishan Kishan
author img

By

Published : Oct 9, 2021, 3:10 PM IST

ದುಬೈ : ಇದೇ ತಿಂಗಳ ಅಕ್ಟೋಬರ್​​ 17ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ-20 ವಿಶ್ವಕಪ್​ ಟೂರ್ನಿಗಾಗಿ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ. ತಂಡದಲ್ಲಿ ಆರಂಭಿಕ ಸ್ಥಾನಕ್ಕಾಗಿ ಇಶಾನ್​ ಕಿಶನ್​ ಆಯ್ಕೆಯಾಗಿದ್ದಾರೆ.

ಆದರೆ, ಐಪಿಎಲ್​​ನಲ್ಲಿ ಅವರ ಕಳಪೆ ಬ್ಯಾಟಿಂಗ್​​ನಿಂದಾಗಿ ಅನೇಕ ರೀತಿಯ ಟೀಕೆಗೆ ಗುರಿಯಾಗಿದ್ದರು. ಆದರೆ, ಇದೀಗ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿರುವ ಈ ಪ್ಲೇಯರ್​​ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದಾರೆ.

Ishan Kishan
ಸನ್​ರೈಸರ್ಸ್​ ವಿರುದ್ಧ ಇಶಾನ್​ ಕಿಶನ್​ ಅಬ್ಬರ

ದುಬೈನಲ್ಲಿ ಆರಂಭಗೊಂಡಿದ್ದ 14ನೇ ಆವೃತ್ತಿ ದ್ವಿತೀಯಾರ್ಧದ ಐಪಿಎಲ್​ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಇಶಾನ್ ಕಿಶನ್​, ಆಡಿರುವ 8 ಪಂದ್ಯಗಳಿಂದ ಕೇವಲ 107 ರನ್​​ಗಳಿಕೆ ಮಾಡಿ ಟೀಕೆಗೆ ಗುರಿಯಾಗಿದ್ದರು. ಹೀಗಾಗಿ, ಮುಂಬೈ ತಂಡ ಆಡುವ 11ರ ಬಳಗದಿಂದ ಅವರನ್ನ ಕೈಬಿಟ್ಟಿತ್ತು.

ಇದಾದ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಕಣಕ್ಕಿಳಿದಿದ್ದ ವೇಳೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ನಿರಾಶೆಗೊಳಗಾಗಿದ್ದ ಕಿಶನ್​, ವಿರಾಟ್​​ ಕೊಹ್ಲಿ ಎದುರು ಕಣ್ಣೀರು ಹಾಕಿದ್ದ ಘಟನೆಯೂ ಸಹ ನಡೆದಿತ್ತು. ಈ ವೇಳೆ ಧೈರ್ಯ ತುಂಬಿದ್ದ ವಿರಾಟ್​​, ಟಿ-20 ವಿಶ್ವಕಪ್​ ತಂಡದಲ್ಲಿ ಒಪನರ್​​ ಆಗಿ ಆಯ್ಕೆಯಾಗಿದ್ದೀಯಾ..

ಪ್ರತಿ ಪರಿಸ್ಥಿತಿ ಎದುರಿಸಲು ಸಿದ್ಧನಾಗಬೇಕು. ಕಲಿಯಲು ಇದು ಉತ್ತಮ ವೇದಿಕೆ. ವಿಶ್ವಕಪ್​​ನಲ್ಲಿ ಇಂತಹ ತಪ್ಪುಗಳು ನಡೆಯಬಾರದು ಎಂಬ ಮಾತು ಹೇಳಿದ್ದರಂತೆ. ಜೊತೆಗೆ ಮುಂಬರುವ ವಿಶ್ವಕಪ್​ ಟೂರ್ನಿಗೆ ನೀನು ಆರಂಭಿಕನಾಗಿ ಆಯ್ಕೆಯಾಗಿದ್ದೀಯಾ.. ಅದಕ್ಕಾಗಿ ಸಿದ್ಧನಾಗಬೇಕು ಎಂದು ಅವರು ತಿಳಿಸಿದ್ದರು ಎಂದು ಕಿಶನ್​ ಖುದ್ದಾಗಿ ಹೇಳಿಕೊಂಡಿದ್ದಾರೆ.

Ishan Kishan
ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಪ್ರಶಸ್ತಿ ಗೆದ್ದ ಇಶನ್​ ಇಶನ್​

ವಿರಾಟ್​ ಮಾತಿನಿಂದ ಸ್ಫೂರ್ತಿ ಪಡೆದ ಇಶಾನ್ ಕಿಶನ್​ ನಂತರದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ. ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 50 ರನ್ ಸಿಡಿಸಿ ಮಿಂಚುವ ಮೂಲಕ ಇದೀಗ ತಾನು ವಿಶ್ವಕಪ್​ಗೆ ಸಿದ್ಧನಾಗಿದ್ದೇನೆ ಎಂಬ ಸಂದೇಶವನ್ನೂ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.