ಮುಂಬೈ (ಮಹಾರಾಷ್ಟ್ರ): ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅವರ ಅರ್ಧಶತಕ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮುಂಬೈ ಇಂಡಿಯನ್ಸ್ಗೆ 200 ರನ್ ಗುರಿ ನೀಡಿದೆ. ಮುಂಬೈ ಇಂಡಿಯನ್ಸ್ನ (ಎಂಐ) ಜೇಸನ್ ಬೆಹ್ರೆನ್‌ಡಾರ್ಫ್ ಬೆಂಗಳೂರಿನ ಟಾಪ್ ಬ್ಯಾಟರ್ಗಳನ್ನು ಕಾಡಿದರು. ಇದರಿಂದ ಆರ್ಸಿಬಿ ನಿಗದಿತ ಓವರ್ ಅಂತ್ಯಕ್ಕೆ 6 ವಿಕೆಟ್ ನಷ್ಟದಿಂದ 199 ರನ್ ಗಳಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಬಂದ ಆರ್ಸಿಬಿಗೆ ಜೇಸನ್ ಬೆಹ್ರೆನ್‌ಡಾರ್ಫ್ ಮೊದಲ ಶಾಕ್ ನೀಡಿದರು. ಉತ್ತಮ ಫಾರ್ಮ್ನಲ್ಲಿರುವ ಮತ್ತು ಈ ಆವೃತ್ತಿಯ 10 ಪಂದ್ಯದಲ್ಲಿ 6 ಅರ್ಧಶತಕ ಗಳಿಸಿದ್ದ ವಿರಾಟ್ ಕೊಹ್ಲಿ ವಿಕೆಟ್ ಕಿತ್ತರು. ಮೊದಲ ಓವರ್ನ 4ನೇ ಬಾಲ್ಗೆ ಒಂದು ರನ್ ಗಳಿಸಿದ್ದ ವಿರಾಟ್ ವಿಕೆಟ್ ಬಿದ್ದಿತ್ತು. ವಿರಾಟ್ ನಂತರ ಬಂದ ಯುವ ಬ್ಯಾಟರ್ ಅನುಜ್ ರಾವತ್ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಜೇಸನ್ ಬೆಹ್ರೆನ್‌ಡಾರ್ಫ್ 6 ರನ್ ಗಳಸಿದ್ದ ಅನುಜ್ ಅವರನ್ನು ಪೆವಿಲಿಯನ್ಗೆ ಅಟ್ಟಿದರು.
-
🚨 Toss Update from Wankhede Stadium 🚨@ImRo45 has won the toss & @mipaltan have elected to bowl against the @faf1307-led @RCBTweets.
— IndianPremierLeague (@IPL) May 9, 2023 " class="align-text-top noRightClick twitterSection" data="
Follow the match ▶️ https://t.co/ooQkYwbrnL#TATAIPL | #MIvRCB pic.twitter.com/S17myQaEgc
">🚨 Toss Update from Wankhede Stadium 🚨@ImRo45 has won the toss & @mipaltan have elected to bowl against the @faf1307-led @RCBTweets.
— IndianPremierLeague (@IPL) May 9, 2023
Follow the match ▶️ https://t.co/ooQkYwbrnL#TATAIPL | #MIvRCB pic.twitter.com/S17myQaEgc🚨 Toss Update from Wankhede Stadium 🚨@ImRo45 has won the toss & @mipaltan have elected to bowl against the @faf1307-led @RCBTweets.
— IndianPremierLeague (@IPL) May 9, 2023
Follow the match ▶️ https://t.co/ooQkYwbrnL#TATAIPL | #MIvRCB pic.twitter.com/S17myQaEgc
ಆರ್ಸಿಬಿ ಮೂರನೇ ಓವರ್ಗೆ 16 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿತ್ತು. ಸಂಕಷ್ಟದ ಸಮಯದಲ್ಲಿ ಇಬ್ಬರು ವಿದೇಶಿ ಆಟಗಾರರು ಆಸರೆಯಾದರು. ಆರಂಭಿಕರಾಗಿ ಇಳಿದಿದ್ದ ಫಾಫ್ಗೆ ಮ್ಯಾಕ್ಸ್‌ವೆಲ್ ಉತ್ತಮ ಸಾಥ್ ನೀಡಿದರು. ಈ ಜೋಡಿ 120 ರನ್ ಜೊತೆಯಾಟ ಮಾಡಿತು. ಮ್ಯಾಕ್ಸ್‌ವೆಲ್ ಮುಂಬೈ ಬೌಲರ್ಗಳನ್ನು ಮನಸೋಇಚ್ಛೆ ದಂಡಿಸಿದರು.
ಮೊದಲ ಮೂರು ಓವರ್ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ 10 ಓವರ್ಗೆ 104 ರನ್ ಕಲೆ ಹಾಕಿತ್ತು, ಫಾರಿನ್ ಆಟಗಾರರು ರನ್ರೇಟ್ ಕಾಯ್ದುಕೊಂಡು ಬ್ಯಾಟಿಂಗ್ ಮಾಡಿದರು. ಮ್ಯಾಕ್ಸ್‌ವೆಲ್ 33 ಬಾಲ್ ಎದುರಿಸಿ 4 ಸಿಕ್ಸ್ ಮತ್ತು 8 ಬೌಂಡರಿಯಿಂದ 68 ರನ್ ಗಳಿಸಿದರು. 12.3 ಬಾಲ್ನಲ್ಲಿ ಮ್ಯಾಕ್ಸ್‌ವೆಲ್ ಕೂಡ ಜೇಸನ್ ಬೆಹ್ರೆನ್ಡಾರ್ಫ್ಗೆ ವಿಕೆಟ್ ಕೊಟ್ಟರು. ನಂತರ ಬಂದ ಮಹಿಪಾಲ್ ಲೊಮ್ರೋರ್ 1 ರನ್ ಔಟ್ ಆದರು.
41 ಬಾಲ್ನಲ್ಲಿ 3 ಸಿಕ್ಸ್ ಮತ್ತು 5 ಬೌಂಡರಿಯಿಂದ 65 ರನ್ ಗಳಿಸಿದ್ದ ಫಾಪ್ ಗ್ರೀನ್ಗೆ ವಿಕೆಟ್ ಕೊಟ್ಟರು. ನಂತರ ಬಂದ ದಿನೇಶ್ ಕಾರ್ತಿಕ್ ಮತ್ತು ಕೇದಾರ್ ಜಾದವ್ ಜೋಡಿ ತಂಡಕ್ಕೆ ಕೊನೆ ಓವರ್ಗಳಲ್ಲಿ 20 ರನ್ ಸೇರಿಸಿತು. 30 ರನ್ ಗಳಿಸಿದ ದಿನೇಶ್ ಕಾರ್ತಿಕ್ ಜೋರ್ಡನ್ಗೆ ವಿಕೆಟ್ ಕೊಟ್ಟರು. ಕೊನೆಯಲ್ಲಿ ಹಸರಂಗ (12) ಮತ್ತು ಕೇದಾರ್ (12) ಅಜೇಯರಾಗಿ ಉಳಿದರು.
ಮುಂಬೈ ಪರ ಜೇಸನ್ ಬೆಹ್ರೆನ್‌ಡಾರ್ಫ್ 3, ಕ್ಯಾಮೆರಾನ್ ಗ್ರೀನ್, ಕುಮಾರ್ ಕಾರ್ತಿಕೇಯ ಮತ್ತು ಕ್ರಿಸ್ ಜೋರ್ಡಾನ್ ತಲಾ ಒಂದು ವಿಕೆಟ್ ಪಡೆದರು.
ತಂಡಗಳು ಇಂತಿವೆ..: ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ವನಿಂದು ಹಸರಂಗಾ, ಹರ್ಷಲ್ ಪಟೇಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆನ್‌ಡಾರ್ಫ್
ಇದನ್ನೂ ಓದಿ: IPLನಲ್ಲಿ ಇಂದು: ಕಠಿಣ ಪ್ಲೇ ಆಫ್ ಹಾದಿಯಲ್ಲಿ ಮುಂಬೈ - ಬೆಂಗಳೂರು ನಿರ್ಣಾಯಕ ಕದನ