ಮುಂಬೈ(ಮಹಾರಾಷ್ಟ್ರ): ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಎರಡನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಯಕ ರೋಹಿತ್ ಶರ್ಮಾ ಲೀಗ್ನ ನಾಲ್ಕನೇ ಗೆಲುವಿಗೆ ತವರಿನಲ್ಲಿ ಗೆಲುವಿನ ಓಟ ಮುಂದುವರಿಸಲು ಪ್ರಯತ್ನಿಸಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಕಳೆದ ಐದು ಪಂದ್ಯಗಳಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ನಂತರದ ಮೂರರಲ್ಲಿ ಗೆಲುವು ಕಂಡಿದ್ದು, ಇಂದು ನಾಲ್ಕನೇ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ.
-
Dha-one and only Livi! 😉#JazbaHaiPunjabi #SaddaPunjab #TATAIPL #PunjabKings I @SDhawan25 @liaml4893 pic.twitter.com/o34QIPZuAl
— Punjab Kings (@PunjabKingsIPL) April 21, 2023 " class="align-text-top noRightClick twitterSection" data="
">Dha-one and only Livi! 😉#JazbaHaiPunjabi #SaddaPunjab #TATAIPL #PunjabKings I @SDhawan25 @liaml4893 pic.twitter.com/o34QIPZuAl
— Punjab Kings (@PunjabKingsIPL) April 21, 2023Dha-one and only Livi! 😉#JazbaHaiPunjabi #SaddaPunjab #TATAIPL #PunjabKings I @SDhawan25 @liaml4893 pic.twitter.com/o34QIPZuAl
— Punjab Kings (@PunjabKingsIPL) April 21, 2023
ಮುಂಬೈ ಇಂಡಿಯನ್ಸ್ ತಂಡ ಪ್ರಸ್ತುತ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದು ಇನ್ನೂ 2 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ಅಗ್ರ ಶ್ರೇಯಾಂಕದ ತಂಡಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ ಪಂಜಾಬ್ ತಂಡ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 24 ರನ್ಗಳ ಸೋಲನ್ನು ಕಂಡಿತ್ತು, ಅದನ್ನು ಮರೆತು ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಬೇಕಿದೆ.
ಪಂಜಾಬ್ ತಂಡ 6 ಪಂದ್ಯಗಳಲ್ಲಿ ಮೂರು ಗೆದ್ದು, ಮೂರರಲ್ಲಿ ಸೋತು 6 ಅಂಕದಿಂದ ಸದ್ಯ ಏಳನೇ ಸ್ಥಾನದಲ್ಲಿದೆ. ಕಳೆದ ಎರಡು ಪಂದ್ಯಗಳಲ್ಲಿ ಶಿಖರ್ ಧವನ್ ಅನುಪಸ್ಥಿತಿಯಿಂದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ನೀಡಲು ಸಾಧ್ಯವಾಗುತ್ತಿಲ್ಲ. ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಪಂಜಾಬ್ ಲಕ್ನೋದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ಅನ್ನು ಸೋಲಿಸಿತು, ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಇದುವರೆಗೆ ಒಟ್ಟು 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ 15 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ಮತ್ತು 14 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಗೆದ್ದಿದೆ. ಉಭಯ ತಂಡಗಳ ನಡುವಿನ ಕೊನೆಯ 5 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ 3 ರಲ್ಲಿ ಗೆದ್ದಿದ್ದು ಮೇಲುಗೈ ಸಾಧಿಸಿದೆ.
ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ಇದುವರೆಗಿನ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ತಂಡದ ಬಲಿಷ್ಠ ಆಟಗಾರರಾದ ಕ್ಯಾಮೆರಾನ್ ಗ್ರೀನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ನಿಂದ ಬೃಹತ್ ರನ್ ಕೊಡುಗೆ ಬರುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಕೂಡ ಸುದೀರ್ಘ ಇನ್ನಿಂಗ್ಸ್ ಕಟ್ಟುತ್ತಿಲ್ಲ. ಬಿರುಸಿನ ಆಟಕ್ಕೆ ಮುಂದಾದ ತಂಡ ಸತತ ವಿಕೆಟ್ ನಷ್ಟವನ್ನು ಎದುರಿಸುತ್ತಿದೆ.
-
Learning from the mistakes ✅
— Mumbai Indians (@mipaltan) April 22, 2023 " class="align-text-top noRightClick twitterSection" data="
Right men at the right place ✅
🎥 ℂ𝕆𝔸ℂℍ ℂ𝔸𝕄 with Commander Pamment is here 💪 #OneFamily #MIvPBKS #MumbaiMeriJaan #MumbaiIndians #IPL2023 #TATAIPL MI TV pic.twitter.com/NSS7Vu0YjV
">Learning from the mistakes ✅
— Mumbai Indians (@mipaltan) April 22, 2023
Right men at the right place ✅
🎥 ℂ𝕆𝔸ℂℍ ℂ𝔸𝕄 with Commander Pamment is here 💪 #OneFamily #MIvPBKS #MumbaiMeriJaan #MumbaiIndians #IPL2023 #TATAIPL MI TV pic.twitter.com/NSS7Vu0YjVLearning from the mistakes ✅
— Mumbai Indians (@mipaltan) April 22, 2023
Right men at the right place ✅
🎥 ℂ𝕆𝔸ℂℍ ℂ𝔸𝕄 with Commander Pamment is here 💪 #OneFamily #MIvPBKS #MumbaiMeriJaan #MumbaiIndians #IPL2023 #TATAIPL MI TV pic.twitter.com/NSS7Vu0YjV
ಶಿಖರ್ ಧವನ್ ಇಂದು ಮತ್ತೆ ಮೈದಾನಕ್ಕೆ ಇಳಿಯುತ್ತಾರಾ ಎಂಬುದರ ಬಗ್ಗೆ ಪಂಜಾಬ್ ಯಾವುದೇ ಮಾಹಿತಿ ನೀಡಿಲ್ಲ. ಅಭ್ಯಾಸದಲ್ಲಿ ಶಿಖರ್ ತೊಡಗಿಕೊಂಡಿರುವುದು ಕಾಣುತ್ತಿದೆ. ಇಂದು ಮತ್ತೆ ನಾಯಕನ ಸ್ಥಾನ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಸಂಭಾವ್ಯ ತಂಡ..: ಪಂಜಾಬ್ ಕಿಂಗ್ಸ್: ಅಥರ್ವ ಟೈಡೆ, ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಜೇಸನ್ ಬೆಹ್ರೆಂಡಾರ್ಫ್, ಪಿಯೂಷ್ ಚಾವ್ಲಾ
ಇದನ್ನೂ ಓದಿ: ಐಪಿಎಲ್ ನಿವೃತ್ತಿಯ ಬಗ್ಗೆ ಧೋನಿಯೇ ಮಾತನಾಡಿದ್ರಾ.. ಅವರು ಹೇಳಿದ್ದಾದರೂ ಏನು?