ಮುಂಬೈ (ಮಹಾರಾಷ್ಟ್ರ): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ಲೇ ಆಫ್ನ ಪ್ರವೇಶಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಮೊದಲ ನಾಲ್ಕು ಸ್ಥಾನವನ್ನು ಪಡೆಯಲು 8 ತಂಡಗಳು ಸ್ಪರ್ಧೆಯಲ್ಲಿದೆ. ಹೀಗಿರುವಾಗ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ಮುಖಾಮುಖಿಯಾಗುತ್ತಿದೆ.
-
Thank God It’s F̶r̶i̶d̶a̶y̶ Matchday! 🥳
— Mumbai Indians (@mipaltan) May 12, 2023 " class="align-text-top noRightClick twitterSection" data="
🎯: 2️⃣ very crucial points.#OneFamily #MIvGT #MumbaiMeriJaan #MumbaiIndians #TATAIPL #IPL2023 pic.twitter.com/1PNpnXV7cO
">Thank God It’s F̶r̶i̶d̶a̶y̶ Matchday! 🥳
— Mumbai Indians (@mipaltan) May 12, 2023
🎯: 2️⃣ very crucial points.#OneFamily #MIvGT #MumbaiMeriJaan #MumbaiIndians #TATAIPL #IPL2023 pic.twitter.com/1PNpnXV7cOThank God It’s F̶r̶i̶d̶a̶y̶ Matchday! 🥳
— Mumbai Indians (@mipaltan) May 12, 2023
🎯: 2️⃣ very crucial points.#OneFamily #MIvGT #MumbaiMeriJaan #MumbaiIndians #TATAIPL #IPL2023 pic.twitter.com/1PNpnXV7cO
ಪ್ಲೇ ಆಫ್ ಸ್ಥಾನ ಪಡೆಯಲು ಎರಡೂ ತಂಡಕ್ಕೆ ಈ ಪಂದ್ಯ ಅತ್ಯಂತ ಮುಖ್ಯವಾಗಿದೆ. ಟೇಬಲ್ ಟಾಪ್ನಲ್ಲಿರುವ ಗುಜರಾತ್ ಇಂದಿನ ಪಂದ್ಯ ಗೆದ್ದಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಲಿದ್ದು, ಕ್ವಾಲಿಫೈ ಆಗಲು ಇನ್ನೊಂದು ಪಂದ್ಯದ ಗೆಲುವು ಬೇಕಾದೀತು.
ಮುಂಬೈ ಇಂಡಿಯನ್ಸ್ಗೆ ಈ ಪಂದ್ಯ ಸೇರಿದಂತೆ ಮುಂದೆ ಆಡಲಿರುವ ಎರಡು ಪಂದ್ಯಗಳು ನಿರ್ಣಾಯಕವಾಗಲಿರುವುದರಿಂದ ಗೆಲ್ಲುವ ಒತ್ತಡ ತಂಡದ ಮೇಲಿದೆ. ತವರು ಮೈದಾನವಾಗಿರುವ ವಾಂಖೆಡೆಯಲ್ಲಿ ಇಂದಿನ ಪಂದ್ಯ ನಡೆಯುತ್ತಿರುವುದರಿಂದ ಇದರ ಲಾಭ ಪಡೆದುಕೊಳ್ಳುವ ಸಾಧ್ಯತೆ ರೋಹಿತ್ ಪಡೆಗಿದೆ. ಕಳೆದ ಮೂರು ಪಂದ್ಯದಲ್ಲಿ 200 ಪ್ಲೆಸ್ ಗುರಿಯನ್ನು ಲೀಲಾಜಾಲವಾಗಿ ಭೇದಿಸಿರುವ ನೀಲಿ ಟೀಮ್ ಇಂದು ಇನ್ನಷ್ಟು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.
-
@ShubmanGill | @ishankishan51 pic.twitter.com/FtKrHv1vEF
— Gujarat Titans (@gujarat_titans) May 11, 2023 " class="align-text-top noRightClick twitterSection" data="
">@ShubmanGill | @ishankishan51 pic.twitter.com/FtKrHv1vEF
— Gujarat Titans (@gujarat_titans) May 11, 2023@ShubmanGill | @ishankishan51 pic.twitter.com/FtKrHv1vEF
— Gujarat Titans (@gujarat_titans) May 11, 2023
ಅತ್ತ ಗುಜರಾತ್ ಕಳೆದ ಮೂರು ಪಂದ್ಯದಲ್ಲಿ ಎದುರಾಳಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ, ಎರಡು ಪಂದ್ಯದಲ್ಲಿ ಜಯಿಸಿದೆ. ಇದೇ ಬೌಲಿಂಗ್ ಬಲವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ತೆಗೆದುಕೊಂಡು ಹೋಗಲಿದ್ದಾರೆ. ಬೃಹತ್ ಮೊತ್ತವನ್ನು ಪೇರಿಸಿ ಗೆದ್ದ ಮುಂಬೈಗೆ ಗುಜರಾತ್ ಬೌಲರ್ಗಳು ಸವಾಲಾಗಲಿದ್ದಾರೆ.
ಅದೆ ರೀತಿ ಗುಜರಾತ್ ಬೃಹತ್ ರನ್ ನೀಡಿದರೂ ಅದನ್ನೂ ಬೆನ್ನಟ್ಟುವ ಸಾಮರ್ಥ್ಯದ ಪಡೆ ರೋಹಿತ್ ಬಳಿ ಇದೆ. ಗೆಲುವಿನ ಅನಿವಾರ್ಯ ಇರುವ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಇಂದಿನ ಹಣಾಹಣಿ ಜೋರಾಗಿಯೇ ನಡೆಯಲಿದೆ.
ಮುಂಬೈ ನಾಯಕ ರೋಹಿತ್ ಶರ್ಮಾ ಇನ್ನೂ ಫಾರ್ಮ್ ಕಂಡುಕೊಂಡಿಲ್ಲ. ಆದರೆ, ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ಸೂರ್ಯ ಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ತಿಲಕ್ ವರ್ಮಾ ಭರ್ಜರಿ ಫಾರ್ಮ್ನಲ್ಲಿದ್ದು, ದೊಡ್ಡ ಮೊತ್ತದ ಗುರಿಯನ್ನು ಸುಲಭವಾಗಿ ಗೆಲ್ಲಿಸುತ್ತಿದ್ದಾರೆ. ಎದುರಾಳಿ ಗುಜರಾತ್ ಸಹ ಬ್ಯಾಟಿಂಗ್ ಬೌಲಿಂಗ್ನಲ್ಲಿ ಬಲಿಷ್ಟವಾಗಿದೆ.
ವೃದ್ಧಿಮಾನ್ ಸಾಹ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಇವರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯ ಬ್ಯಾಟ್ ಬೀಸುತ್ತಿದ್ದಾರೆ. ಬೌಲಿಂಗ್ನಲ್ಲಿ ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ ಪ್ರಭಾವ ಬೀರುತ್ತಿದ್ದಾರೆ.
ಸಂಭಾವ್ಯ ತಂಡಗಳು ಇಂತಿವೆ..: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ತಿಲಕ್ ವರ್ಮಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಇದನ್ನೂ ಓದಿ: ನಟ ಅಮೀರ್ ಖಾನ್ ಜೊತೆ ಕ್ರಿಕೆಟಿಗ ಚಹಾಲ್ ದಂಪತಿ ಫೋಟೋ: ಫ್ಯಾನ್ಸ್ ಮೆಚ್ಚುಗೆ