ಮುಂಬೈ (ಮಹಾರಾಷ್ಟ್ರ): ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ನಾಯಕನ ಮುಂಬೈ ಇಂಡಿಯನ್ಸ್ನ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ನ 12ನೇ ಪಂದ್ಯ ನಡೆಯಲಿದೆ. ರೋಹಿತ್ ಪಡೆ ತವರು ನೆಲದಲ್ಲಿ ಗೆಲುವಿನ ಟ್ರ್ಯಾಕ್ ಮರಳುವ ಪ್ರಯತ್ನದಲ್ಲಿದೆ. ಎರಡನೇ ಪಂದ್ಯ ಗೆದ್ದಿರುವ ಸಿಎಸ್ಕೆ ಜಯವನ್ನು ಮುಂದುವರೆಸುವ ಚಿಂತನೆಯಲ್ಲಿದೆ.
-
Ready for Round 2, Chennai? Get in on the early access to ticket sales and much more! Sign up today! #WhistlePodu #Yellove
— Chennai Super Kings (@ChennaiIPL) April 7, 2023 " class="align-text-top noRightClick twitterSection" data="
">Ready for Round 2, Chennai? Get in on the early access to ticket sales and much more! Sign up today! #WhistlePodu #Yellove
— Chennai Super Kings (@ChennaiIPL) April 7, 2023Ready for Round 2, Chennai? Get in on the early access to ticket sales and much more! Sign up today! #WhistlePodu #Yellove
— Chennai Super Kings (@ChennaiIPL) April 7, 2023
ಕಳೆದ ಐಪಿಎಲ್ ಸೀಸನ್ನಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡದ ಕಾರಣ ಈ ಬಾರಿ ಅದನ್ನು ಮರೆಮಾಚುವ ಪ್ರದರ್ಶನ ನೀಡಬೇಕಿದೆ. ಇಬ್ಬರು ನಾಯಕರ ಮೇಲೆ ಈ ಒತ್ತಡ ಇದ್ದು, ಅತಿ ಹೆಚ್ಚು ಕಪ್ಗಳನ್ನು ಗೆದ್ದ ತಂಡಗಳಾಗಿದ್ದು, ವೈಫಲ್ಯ ಕಾಣುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಯಶಸ್ವಿ ನಾಯಕರಾಗಿದ್ದು, ತಂಡವನ್ನು ಗೆಲುವಿನ ಲಯಕ್ಕೆ ತರಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಎರಡು ಪಂದ್ಯಗಳಲ್ಲಿ ಒಂದು ಸೋಲು ಮತ್ತು ಒಂದು ಗೆಲುವಿನೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡ ಒಂದು ಪಂದ್ಯದಲ್ಲಿ ಒಂದು ಸೋಲಿನೊಂದಿಗೆ 9 ನೇ ಸ್ಥಾನದಲ್ಲಿದೆ. ಮುಂಬೈ ತಂಡ ರಾಯಲ್ ಚಾಲೆಂಜ್ ಬೆಂಗಳೂರು ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ಸೋತಿದೆ. ಮುಂಬೈ ಇಂಡಿಯನ್ಸ್ ತವರು ನೆಲದಲ್ಲಿ ಗೆಲುವಿನ ಭರವಸೆಯಲ್ಲಿದೆ.
-
I am 𝘃𝗲𝗻𝗴𝗲𝗮𝗻𝗰𝗲. I am the 𝗻𝗶𝗴𝗵𝘁. I am 𝗛𝗜𝗧𝗠𝗔𝗡©️
— Mumbai Indians (@mipaltan) April 7, 2023 " class="align-text-top noRightClick twitterSection" data="
One sleep away from El Clásico 👊#OneFamily #MumbaiMeriJaan #MumbaiIndians #IPL2023 #TATAIPL @ImRo45 pic.twitter.com/J37W7eg5ZN
">I am 𝘃𝗲𝗻𝗴𝗲𝗮𝗻𝗰𝗲. I am the 𝗻𝗶𝗴𝗵𝘁. I am 𝗛𝗜𝗧𝗠𝗔𝗡©️
— Mumbai Indians (@mipaltan) April 7, 2023
One sleep away from El Clásico 👊#OneFamily #MumbaiMeriJaan #MumbaiIndians #IPL2023 #TATAIPL @ImRo45 pic.twitter.com/J37W7eg5ZNI am 𝘃𝗲𝗻𝗴𝗲𝗮𝗻𝗰𝗲. I am the 𝗻𝗶𝗴𝗵𝘁. I am 𝗛𝗜𝗧𝗠𝗔𝗡©️
— Mumbai Indians (@mipaltan) April 7, 2023
One sleep away from El Clásico 👊#OneFamily #MumbaiMeriJaan #MumbaiIndians #IPL2023 #TATAIPL @ImRo45 pic.twitter.com/J37W7eg5ZN
ಬೆಂಗಳೂರು ಎದುರು ಮುಂಬೈ ಇಂಡಿಯನ್ಸ್ನ ಮಧ್ಯಮ ಕ್ರಮಾಂಕದ ತಿಲಕ್ ವರ್ಮ ಮಾತ್ರ ಬ್ಯಾಟಿಂಗ್ನಲ್ಲಿ ಘರ್ಜಿಸಿದ್ದು, ಮತ್ಯಾವ ಬ್ಯಾಟರ್ಗಳು ದೊಡ್ಡ ಮೊತ್ತ ಕಲೆ ಹಾಕಲಿಲ್ಲ. ನಾಯಕ ರೋಹಿತ್ ಶರ್ಮಾ ಮತ್ತು ಆರಂಭಿಕ ಇಶಾನ್ ಕಿಶನ್ ಲಯಕ್ಕೆ ಮರಳ ಬೇಕಿದೆ. ಸೂರ್ಯ ಕುಮಾರ್ ಯಾದವ್ ಬ್ಯಾಟ್ನಿಂದಲೂ ರನ್ ಬರಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ತಂಡ ಗುಜರಾತ್ ವಿರುದ್ಧ 5 ವಿಕೆಟ್ಗಳ ಸೋಲನುಭವಿಸಿತು. 179 ರನ್ ಗುರಿಯನ್ನು ಕಟ್ಟಿ ಹಾಕುವಲ್ಲಿ ಧೋನಿ ಪಡೆಯ ಬೌಲಿಂಗ್ ವಿಫಲವಾಯಿತು. ತವರಿನಲ್ಲಿ ಲಕ್ನೋ ವಿರುದ್ಧ 217 ಗುರಿ ನೀಡಿತ್ತಾದರೂ, 12 ರನ್ಗಳಿಂದ ಗೆದ್ದುಕೊಂಡಿತು. ಬೃಹತ್ ರನ್ ನೀಡಿದರೂ ಚೆನ್ನೈ ಕಡಿಮೆ ಅಂತರದ ಗೆಲುವು ದಾಖಲಿಸಿರುವುದು ಬೌಲಿಂಗ್ ವೈಫಲ್ಯ ತೋರುತ್ತದೆ.
ಮುಖಾಮುಖಿ: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕಳೆದ ಐದು ಪಂದ್ಯಗಳಲ್ಲಿ, ಮುಂಬೈ ಇಂಡಿಯನ್ಸ್ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 2 ಪಂದ್ಯಗಳನ್ನು ಗೆದ್ದಿದೆ.
ಸಂಭಾವ್ಯ ತಂಡಗಳು..: ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿಕೆಟ್ ಕೀಪರ್/ನಾಯಕ), ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಆರ್‌ಎಸ್ ಹಂಗರ್ಗೇಕರ್
ಮಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್
ಇದನ್ನೂ ಓದಿ: IPLನಲ್ಲಿ ನಾಳೆ: ಚೊಚ್ಚಲ ಗೆಲುವಿಗೆ ಡೆಲ್ಲಿ ಪ್ರಯತ್ನ, ಪ್ರಯೋಗದಿಂದ ಕೈ ಸುಟ್ಟುಕೊಂಡ ಸಂಜು ನಡೆ ಏನು?