ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಖರೀದಿಯಾಗಿದ್ದಾರೆ. ಮುಂಬೈನಲ್ಲಿ ನಡೆದ 73ನೇ ಪೊಲೀಸ್ ಆಹ್ವಾನ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಲ್ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗ ಕೊನೆಗೂ ಐಪಿಎಲ್ನಲ್ಲಿ ಹರಾಜಾಗಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಅವರನ್ನ ಕೌಶಲ್ಯದ ಆಧಾರದ ಮೇಲೆ ತಂಡ ಅವರನ್ನ ಆಯ್ಕೆ ಮಾಡಿದೆ ಎಂದು ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಹೇಳಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಅವರನ್ನು ಮುಂಬೈ ಇಂಡಿಯನ್ಸ್ ನಿನ್ನೆ ನಡೆದ ಮಿನಿ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ.ಗೆ ಖರೀದಿಸಿದೆ.
ಮುಂಬೈ ಇಂಡಿಯನ್ಸ್‌ನೊಂದಿಗಿನ ಒಪ್ಪಂದವು ಅರ್ಜುನ್‌ಗೆ ಕಲಿಕೆಯ ಪ್ರಕ್ರಿಯೆಯಾಗಲಿದೆ. 21 ವರ್ಷದ ಎಡಗೈ ಮಧ್ಯಮ ವೇಗಿ ತನ್ನ ಆಟವನ್ನು ಕಲಿಕೆಯ ಜೊತೆಗೆ ವಿಕಸನಗೊಳಿಸಲು ಅವಶ್ಯಕವಾಗಲಿದೆ ಎಂದು ಮಹೇಲಾ ಜಯವರ್ಧನೆ ಹೇಳಿದ್ದಾರೆ.
ನಾವು ಅವನನ್ನು ಕೇವಲ ಕೌಶಲ್ಯ ಆಧಾರದ ಮೇಲೆ ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಅವರ ತಂದೆ ಸಚಿನ್ ಅವರ ಟ್ಯಾಗ್ ಲೈನ್ ನೋಡಿ ತೆಗೆದುಕೊಂಡಿಲ್ಲ. ಅರ್ಜುನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಅವರಿಗೆ ಸಹಯಾಕವಾಗಲಿದೆ ಎಂದರು.
ಓದಿ :ಐಪಿಎಲ್ನಲ್ಲಿ ಅರ್ಜುನ್ ತೆಂಡೂಲ್ಕರ್ ಸೇಲ್... ಇಷ್ಟೊಂದು ಹಣ ನೀಡಿ ಖರೀದಿ ಮಾಡಿದ ಫ್ರಾಂಚೈಸಿ!
"ಇದು ಅರ್ಜುನ್‌ಗೆ ಕಲಿಕೆಯ ಪ್ರಕ್ರಿಯೆಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಅವನು ಮುಂಬೈಗಾಗಿ ಆಡಲು ಪ್ರಾರಂಭಿಸಿದರೆ, ಅವನ ಕಲಿಕೆಯ ಜೊತೆಗೆ ವಿಕಸನಗೊಳ್ಳಲು ಉತ್ತಮ ಅವಕಾಶವಾಗಿದೆ. ಅವನು ಇನ್ನೂ ಚಿಕ್ಕವನು ನಾವು ಅವನ ಮೇಲೆ ಒತ್ತಡ ಹಾಕುವುದಕ್ಕಿಂತ ಅವನ ಕಲಿಕೆಗೆ ಸಮಯ ನೀಡಬೇಕು ಎಂದು ಹೇಳಿದ್ದಾರೆ.
"ನಾನು ಸಾಕಷ್ಟು ಸಮಯವನ್ನು ಅವನ ಜೊತೆ ನೆಟ್‌ಗಳಲ್ಲಿ ಕಳೆದಿದ್ದೇನೆ. ಅವನಿಗೆ ವ್ಯಾಪಾರದ ಕೆಲವು ತಂತ್ರಗಳನ್ನು ಕಲಿಸಲು ಪ್ರಯತ್ನಿಸುತ್ತಿದ್ದೇನೆ, ಅವನು ಕಷ್ಟಪಟ್ಟು ದುಡಿಯುವ ಮಗು. ಅವನು ಕಲಿಯಲು ಉತ್ಸುಕನಾಗಿದ್ದು, ಇದು ಒಂದು ಉತ್ತೇಜಕ ಭಾಗವಾಗಿದೆ.
ಸಚಿನ್ ತೆಂಡೂಲ್ಕರ್ ಅವರ ಮಗನಾಗಿರುವುದಕ್ಕೆ ಒತ್ತಡ ಯಾವಾಗಲೂ ಇರುತ್ತದೆ. ಅವನ ಮೇಲೆ ಆ ಒತ್ತಡ ಇದ್ದರೆ ಒಳ್ಳೆಯದು. ಇದು ಅವನಿಗೆ ಉತ್ತಮ ಕ್ರಿಕೆಟಿಗನಾಗಲು ಸಹಾಯ ಮಾಡುತ್ತದೆ. ತನ್ನ ಆಟದ ಬಗ್ಗೆ ಅವನು ಸಾಬೀತುಪಡಿಸಲು ಇದು ಉತ್ತಮ ಅವಕಾಶ ಎಂದು ಜಹೀರ್ ಖಾನ್ ಹೇಳಿದ್ದಾರೆ.