ETV Bharat / sports

ಚಿನ್ನ ತಲಾ ಕಮ್ಮಿಂಗ್‌.. IPL ಚಾಂಪಿಯನ್‌ ಧೋನಿಗೆ ಡಬಲ್ ಸಂಭ್ರಮ.. ಇದಕ್ಕೆ ಕೂಲ್‌ ಮಡದಿಯೇ 'ಸಾಕ್ಷಿ'! - ಐಪಿಎಲ್​ ಫೈನಲ್​​

ವಿಶೇಷವೆಂದರೆ ಇದಕ್ಕೆ ಸಂಬಂಧಿಸಿದಂತೆ ಸಿಎಸ್​ಕೆ ತಂಡದ ಸಹ ಆಟಗಾರನಾಗಿರುವ ಸುರೇಶ್ ರೈನಾ ಪತ್ನಿ ಪ್ರಿಯಾಂಕಾ ಮಾತನಾಡಿದ್ದಾರೆ. ಸಾಕ್ಷಿ ಗರ್ಭಿಣಿಯಾಗಿರುವುದು ನಿಜ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೋಸ್ಟ್ ಕೂಡ ಮಾಡಿದ್ದಾರೆ. ಸಾಕ್ಷಿ ಗರ್ಭಿಣಿಯಾಗಿದ್ದು, 2022ರ ವೇಳೆಗೆ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ..

MS Dhoni wife
MS Dhoni wife
author img

By

Published : Oct 16, 2021, 3:47 PM IST

ದುಬೈ : ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​​​​​ 14ನೇ ಆವೃತ್ತಿ ಐಪಿಎಲ್​​ನ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಭರ್ಜರಿ ಜಯ ಸಾಧಿಸಿ 4ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಕೂಲ್ ಕ್ಯಾಪ್ಟನ್ ಧೋನಿಗೆ ಮತ್ತೊಂದು ಗುಡ್​ನ್ಯೂಸ್​ ಸಿಕ್ಕಿದೆ. ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಈಗ 2ನೇ ಮಗುವಿಗೆ ತಾಯಿ ಆಗಲಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಜೋಡಿ 2022ರ ವೇಳೆಗೆ ಮತ್ತೊಮ್ಮೆ ತಂದೆ-ತಾಯಿಯಾಗಲಿದ್ದಾರೆ.

ಸಾಕ್ಷಿ ಫೋಟೋ ವೈರಲ್​

ನಿನ್ನೆ ಫೈನಲ್​ನಲ್ಲಿ ಸಿಎಸ್​​ಕೆ ತಂಡ ಗೆಲುವು ದಾಖಲು ಮಾಡುತ್ತಿದ್ದಂತೆ ಸಾಕ್ಷಿ ಮೈದಾನಕ್ಕೆ ಬಂದು ಧೋನಿ ಜೊತೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಾಕ್ಷಿ ಅವರ ಉಬ್ಬಿದ ಹೊಟ್ಟೆಯ ಫೋಟೋ ಸಿಕ್ಕಾಪಟ್ಟೆ ವೈರಲ್​​ ಆಗಿದ್ದವು.

ಹೀಗಾಗಿ, ಧೋನಿ ಪತ್ನಿ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆಂಬ ಸುದ್ದಿ ಹೊರ ಬಿದ್ದಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಮಹೇಂದ್ರ ಸಿಂಗ್​ ಧೋನಿ ಅಥವಾ ಸಾಕ್ಷಿ ಯಾವುದೇ ರೀತಿಯ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿರಿ: ಚೆನ್ನೈ ವಿರುದ್ಧದ ಸೋಲಿಗೆ ಮಧ್ಯಮ ಕ್ರಮಾಂಕವೇ ಕಾರಣ: ಕೆಕೆಆರ್ ಕೋಚ್ ಮೆಕಲಮ್

ವಿಶೇಷವೆಂದರೆ ಇದಕ್ಕೆ ಸಂಬಂಧಿಸಿದಂತೆ ಸಿಎಸ್​ಕೆ ತಂಡದ ಸಹ ಆಟಗಾರನಾಗಿರುವ ಸುರೇಶ್ ರೈನಾ ಪತ್ನಿ ಪ್ರಿಯಾಂಕಾ ಮಾತನಾಡಿದ್ದಾರೆ. ಸಾಕ್ಷಿ ಗರ್ಭಿಣಿಯಾಗಿರುವುದು ನಿಜ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೋಸ್ಟ್ ಕೂಡ ಮಾಡಿದ್ದಾರೆ. ಸಾಕ್ಷಿ ಗರ್ಭಿಣಿಯಾಗಿದ್ದು, 2022ರ ವೇಳೆಗೆ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೆ ಸಿಎಸ್​​ಕೆ ಹಾಗೂ ಧೋನಿ ಫ್ಯಾನ್ಸ್​ಗಳು ಸಿಕ್ಕಾಪಟ್ಟೆ ಸಂತಸಗೊಂಡಿದ್ದಾರೆ. ಚಿನ್ನ ತಲಾ ಕಮ್ಮಿಂಗ್ ಎಂದು ಕಮೆಂಟ್ ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಸಿಂಗ್​​ಗೆ ಈಗಾಗಲೇ ಝೀವಾ ಎಂಬ ಮಗಳಿದ್ದಾಳೆ.

MS Dhoni daughter
ಪ್ರಶಸ್ತಿ ಜೊತೆ ಸಂಭ್ರಮಿಸಿದ ಧೋನಿ ಮಗಳು ಝೀವಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.