ETV Bharat / sports

ಮಹಿಪಾಲ್​ ಬಳಿ ಕ್ಷಮೆ ಕೇಳಿದ ಸಿರಾಜ್​: ಪಂದ್ಯದಲ್ಲಿ ನಡೆದಿದ್ದಾದರೂ ಏನು? - ETV Bharath Kannada news

ರಾಜಸ್ಥಾನ ರಾಯಲ್ಸ್​ ಮತ್ತು ಆರ್​ಸಿಬಿ ಪಂದ್ಯದ ವೇಳೆ ಸಿರಾಜ್​ ಮತ್ತು ಮಹಿಪಾಲ್​ ನಡುವೆ ಮನಸ್ಥಾಪ ಉಂಟಾಗಿದ್ದು, ಸಿರಾಜ್​ ಕ್ಷಮೆ ಯಾಚಿಸಿದ್ದಾರೆ.

Etv Bharat
Etv Bharat
author img

By

Published : Apr 24, 2023, 8:49 PM IST

ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ರಾಯಲ್​ ಚಾಲೆಂಜರ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ನಡುವೆ ಹಣಾಹಣಿ ನಡೆಯಿತು. ಆರ್​ಸಿಬಿ ಕೊನೆಯ ಓವರ್​ನಲ್ಲಿ ಪಂದ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡು 7 ರನ್​ನಿಂದ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ 8 ಅಂಕದಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿತು. ಆರ್​ಸಿಬಿ ಆಟಗಾರರು ಗೋ-ಗ್ರೀನ್​ ಅಭಿಯಾನದಲ್ಲಿ ನಿನ್ನೆ ಮೈದಾನಕ್ಕಿಳಿದಿದ್ದರು.

ಭಾನುವಾರ ಪಂದ್ಯದ ವೇಳೆ ಸಿರಾಜ್​ ಮತ್ತು ಮಹಿಪಾಲ್ ಲೊಮ್ರೋರ್‌ ಸಣ್ಣ ಇರುಸು ಮುರುಸು ಉಂಟಾಯಿತು. ಪಂದ್ಯದ ವೇಳೆ ಮೈದಾದದಲ್ಲಿ ಎದುರಾಳಿ ಆಟಗಾರರ ನಡುವೆ ಕೆಲ ಫೈಟ್​ಗಳು ನಡೆಯುವುದು ಸಾಮಾನ್ಯ. ಆದರೆ ಒಂದೇ ತಂಡದ ಆಟಗಾರರು ಗಲಾಟೆ ಮಾಡಿಕೊಂಡರೆ ಸಂಘಟಿತ ಆಟಕ್ಕೆ ಸಮಸ್ಯೆ ಆಗುತ್ತದೆ. ಆದರೆ ಆ ಕ್ಷಣಕ್ಕೆ ಆಟಗಾರು ಆಟದ ಒತ್ತಡದಲ್ಲಿ ಕೆಲ ಮಾತುಗಳನ್ನು ಆಡುವುದು ಅಥವಾ ಬೈಯುವುದು ಸಹಜವಾಗಿರುತ್ತದೆ. ಇದೇ ರೀತಿ ನಿನ್ನೆ ಪಂದ್ಯದಲ್ಲಿ ಸಿರಾಜ್​ ಮಹಿಪಾಲ್​ ಮೇಲೆ ಕುಪಿತರಾಗಿದ್ದರು.

ಪಂದ್ಯದ ನಂತರ ಡ್ರೆಸ್ಸಿಂಗ್​ ರೂಮ್​ನ ವಿಡಿಯೋವನ್ನು ಆರ್​ಸಿಬಿ ಹಂಚಿಕೊಂಡಿದ್ದು, ಅದರಲ್ಲಿ ಮೊಹಮ್ಮದ್ ಸಿರಾಜ್ ಮಹಿಪಾಲ್ ಲೊಮ್ರೋರ್‌ ಬಳಿ ಕ್ಷಮೆ ಕೇಳಿದ್ದಾರೆ. ವಿಡಿಯೋದಲ್ಲಿ ಸಿರಾಜ್​ ಪಂದ್ಯದ ನಂತರ ಎರಡು ಬಾರಿ ಕ್ಷಮೆ ಕೇಳಿದ್ದೇನೆ ಮತ್ತೆ ಕೇಳುತ್ತೇನೆ.. ಮಹಿಪಾಲ್ ಕ್ಷಮಿಸು ಎಂದಿದ್ದಾರೆ. ಇದಕ್ಕೆ ಮಹಿಪಾಲ್​ ಸಹ ಪ್ರತಿಕ್ರಿಯೆ ನೀಡಿದ್ದು,"ಪರವಾಗಿಲ್ಲ ಸಿರಾಜ್ ಭಾಯ್. ಬಡೇ ಬಡೇ ಮ್ಯಾಚೋನ್ ಮೇ ಐಸೇ ಚೋಟಿ ಚೋಟಿ ಬಾತೇಂ ಹೋತಿ ರೆಹತಿ ಹೈಂ (ಇಂತಹ ದೊಡ್ಡ ಪಂದ್ಯಗಳಲ್ಲಿ ಇಂತಹ ಸಣ್ಣ ವಿಷಯಗಳು ನಡೆಯುತ್ತಲೇ ಇರುತ್ತವೆ)" ಎಂದು ಹೇಳಿದ್ದಾರೆ.

  • RCB v RR Game Day Post Match Interviews

    Maxwell talks about his form, partnership with Faf, and what flipped the switch after the 10 over mark with the ball, while Mike Hesson, Adam Griffith and Harshal Patel explain the bowlers’ role in last night’s win.#PlayBold #ನಮ್ಮRCB pic.twitter.com/SAU4bYbSk2

    — Royal Challengers Bangalore (@RCBTweets) April 24, 2023 " class="align-text-top noRightClick twitterSection" data=" ">

ಪಂದ್ಯದಲ್ಲಿ ನಡೆದಿದ್ದಾದರೂ ಏನು?: 18.6 ಬಾಲ್​ನಲ್ಲಿ ಧ್ರುವ್ ಜುರೆಲ್ ರನ್​ ಔಟ್​ ಆಗುವ ಅವಕಾಶ ಇತ್ತು. ಆದರೆ ಮಹಿಪಾಲ್​ ಸರಿಯಾಗಿ ಬಾಲ್​ ಕೊಡದ ಕಾರಣ ಸಿರಾಜ್​ಗೆ ರನ್​ ಔಟ್​ ಮಾಡುವ ಅವಕಾಶ ತಪ್ಪಿತು. ಇದರಿಂದ ಬೇಸರಗೊಂಡ ಸಿರಾಜ್​ ಮೈದಾನದಲ್ಲಿ ಕಡಿಕಾರಿದ್ದರು. ಪಂದ್ಯ ಕೊನೆಯ ಘಟ್ಟಕ್ಕೆ ತಲುಪಿದ್ದಾಗ ಮಾಡುವ ಸಣ್ಣ ತಪ್ಪು ಸೋಲಿಗೆ ಕಾರಣವಾಗುತ್ತದೆ. ಹೀಗಾಗಿ ಸಿರಾಜ್​ಗೆ ಕೋಪ ಇಮ್ಮಡಿಯಾಗಿತ್ತು.

ಪಂದ್ಯದ ನಂತರ ಸಿರಾಜ್​ ಮಹಿಪಾಲ್​ ಬಳಿ ಕ್ಷಮೆ ಕೇಳಿದ್ದರು. ಮತ್ತೆ ಪಂದ್ಯಗಳಲ್ಲಿ ಇಂತಹ ಘಟನೆಗಳು ಸಂಭವಿಸುವುದು ಸಾಮಾನ್ಯವಾಗಿದೆ. ಕ್ಯಾಚ್​​ ಕೈ ತಪ್ಪಿದ್ದಾಗ ಇಡೀ ತಂಡವೇ ಬಿಟ್ಟವನನ್ನು ಅಪರಾಧಿಯಂತೆ ನೋಡುತ್ತದೆ. ಆದರೆ ಆ ಕ್ಷಣದ ನಂತರ ಅದನ್ನು ಅಲ್ಲೇ ಬಿಟ್ಟು ಮುಂದುವರೆಯುತ್ತಾರೆ. ಇದು ಆಟದಲ್ಲಿ ಎಲ್ಲರೂ ಸಾಮರಸ್ಯದಿಂದ ಒಂದು ತಂಡವಾಗಿ ಆಡಲು ಸಹಕಾರ ನೀಡುತ್ತದೆ.

ಪಂದ್ಯ: ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ತಂಡ 9 ವಿಕೆಟ್​ ಕಳೆದುಕೊಂಡು 189 ರನ್​ ಗಳಿಸಿತ್ತು. ಫಾಫ್​ ಡು ಪ್ಲೆಸಿಸ್​ ಮತ್ತು ಮ್ಯಾಕ್ಸ್​ ವೆಲ್​ ಅವರ ಅರ್ಧಶತಕ ತಂಡ ರಾಜಸ್ಥಾನಕ್ಕೆ 190 ರನ್​ನ ಗುರಿ ನೀಡುವಲ್ಲಿ ಸಹಕಾರಿಯಾಯಿತು. ನಂತರ, ದೇವದತ್ ಪಡಿಕ್ಕಲ್ ಅವರ ಅದ್ಭುತ 52 ರನ್‌ಗಳ ಹೊರತಾಗಿಯೂ ರಾಜಸ್ಥಾನವನ್ನು ಆರ್​ಸಿಬಿ 182/6ಕ್ಕೆ ಕಟ್ಟಿಹಾಕಿತು. ಇದರಿಂದ 7 ರನ್​ ಗೆಲುವು ಆರ್​ಸಿಬಿಗೆ ದೊರೆಯಿತು.

ಇದನ್ನೂ ಓದಿ: SRH vs DC: ಸನ್​ ರೈಸರ್ಸ್​ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟಿಂಗ್​ ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.