ETV Bharat / sports

'ಐಪಿಎಲ್​ನ ಮೊದಲ ಪಂದ್ಯ ಮಿಸ್ ಆಗಿದ್ದಕ್ಕೆ ಬೇಸರವಿದೆ': ಪಡಿಕ್ಕಲ್ - Devadutta Padikkal latest news

ಐಪಿಎಲ್‌ನಲ್ಲಿ ಶತಕ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದ ದೇವದತ್ ಪಡಿಕ್ಕಲ್, ತಮ್ಮ ಮೊದಲ ಪಂದ್ಯ ಮಿಸ್​ ಆದ ಬಗ್ಗೆ ಹೇಳಿಕೆ ನೀಡಿದ್ದಾರೆ.

Padikkal
ದೇವದತ್ ಪಡಿಕ್ಕಲ್
author img

By

Published : Apr 23, 2021, 10:23 AM IST

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್, ನಿನ್ನೆಯ ಪಂದ್ಯದಲ್ಲಿ 52 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿ ಆರ್‌ಸಿಬಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಐಪಿಎಲ್‌ನಲ್ಲಿ ಶತಕ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪಡಿಕ್ಕಲ್‌, ಕೊರೊನಾಗೆ ತುತ್ತಾಗಿದ್ದರು. ಇನ್ನು ಸೋಂಕಿಗೆ ತುತ್ತಾದ್ದರಿಂದ ತಂಡಕ್ಕೆ ಸ್ವಲ್ಪ ತಡವಾಗಿ ಲಗ್ಗೆ ಇಟ್ಟಿದ್ದರು. ಆದರೆ ಬಳಿಕ ಆಡಿದ ಮೂರು ಪಂದ್ಯದಲ್ಲಿ ಭರ್ಜರಿ ರನ್​ ಕಲೆಹಾಕಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಅವರು, "ನನ್ನ ಸರದಿಗಾಗಿ ನಾನು ಕಾಯಬೇಕಾಗಿತ್ತು. ನಾನು ಕೋವಿಡ್​ಗೆ ತುತ್ತಾಗಿದ್ದರಿಂದ ಆಟಕ್ಕೆ ಸ್ವಲ್ಪ ತಡವಾಗಿ ಆಗಮಿಸಿದೆ. ಮೊದಲನೇಯ ಮ್ಯಾಚ್​ ಕೈ ತಪ್ಪಿದ್ದು ನನಗೆ ನಿಜವಾಗಿಯೂ ನೋವುಂಟು ಮಾಡಿತು" ಎಂದು ಹೇಳಿದರು.

ಇನ್ನು ದೇವದತ್ ಬಗ್ಗೆ ಮಾತನಾಡಿದ ಮ್ಯಾಕ್ಸ್​ವೆಲ್,​ "ನಾನು ದೇವದತ್ ಅವರೊಂದಿಗೆ ಆಡಿಲ್ಲ. ಆದರೆ ಅವರಿಗೆ ಬ್ಯಾಟ್‌ ಜೊತೆ ತುಂಬಾ ಉತ್ತಮ ಸಂಬಂಧ ಇದೆ" ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.