ETV Bharat / sports

IPL 2023: ಡಕ್​ ಔಟ್​ನಲ್ಲಿ ದಾಖಲೆ ಬರೆದ ರೋಹಿತ್​ ಶರ್ಮಾ

ಇಂದು ದೀಪಕ್​ ಚಹಾರ್​ ಬಾಲ್​ನಲ್ಲಿ ಶೂನ್ಯಕ್ಕೆ ಔಟ್​ ಆಗುವ ಮೂಲಕ ರೋಹಿತ್​ ಶರ್ಮಾ ಐಪಿಎಲ್​ನಲ್ಲಿ ಅತಿ ಹೆಚ್ಚು ಡಕ್​ ಔಟ್​ಗೆ ಬಲಿಯಾದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

MI skipper Rohit Sharma creates unwanted batting record
IPL 2023: ಡಕ್​ ಔಟ್​ನಲ್ಲಿ ದಾಖಲೆ ಬರೆದ ರೋಹಿತ್​ ಶರ್ಮಾ
author img

By

Published : May 6, 2023, 6:19 PM IST

ಚೆನ್ನೈ (ತಮಿಳುನಾಡು): ಭಾರತ ಮತ್ತು ಮುಂಬೈ ಇಂಡಿಯನ್ಸ್ (MI) ನಾಯಕ ರೋಹಿತ್ ಶರ್ಮಾ ಶನಿವಾರ ತಮ್ಮ ಹೆಸರಿಗೆ ಅನಗತ್ಯ ದಾಖಲೆಯೊಂದನ್ನು ಬರೆದಿದ್ದಾರೆ. ಇಂಡಿಯನ್ ಪ್ರೀಮಿಯರ್​ ಲೀಗ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಡಕ್​ಗೆ ಔಟ್​ ಆದ ಆಟಗಾರ ಎಂಬ ದಾಖಲೆ ಬರೆದರು. ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಪಂದ್ಯದಲ್ಲಿ ಅನುಭವಿ ಬ್ಯಾಟರ್ ರೋಹಿತ್​ ಈ ದಾಖಲೆ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್​ನ ಆರಂಭಿಕರಲ್ಲಿ ಇಂದು ಬದಲಾವಣೆ ಮಾಡಲಾಯಿತು. ಧೋನಿ ಅವರ ಪ್ರಯೋಗದಿಂದ ಆರಂಭಿಕ ಬ್ಯಾಟರ್​ ಆಗಿ ಬಡ್ತಿ ಪಡೆದ ರೋಹಿತ್​ ಶರ್ಮಾ ನಂತರ ಅಂತಾರಾಷ್ಟ್ರೀಯ ಹಾಗೂ ಲೀಗ್​ ಪಂದ್ಯದಲ್ಲಿ ಆರಂಭಿಕರಾಗಿಯೇ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಇಂದು ರೋಹಿತ್​ ಶರ್ಮಾ ಬದಲಾಗಿ ಇಶಾನ್​ ಕಿಶನ್​ ಜೊತೆ ಆಸ್ಟ್ರೇಲಿಯದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಇನ್ನಿಂಗ್ಸ್ ಆರಂಭಿಸಿದರು. ಮೂರನೇ ಸ್ಥಾನದಲ್ಲಿ ಬರುವ ಗ್ರೀನ್​ಗೆ ರೋಹಿತ್​ ಬಡ್ತಿ ನೀಡಿ ಆರಂಭಿಕರಾಗಿ ಮೈದಾನಕ್ಕಿಳಿಸಿದರು.

ಆದರೆ, ಮುಂಬೈ ಇಂಡಿಯನ್ಸ್​ನ ಈ ಪ್ರಯೋಗ ಫಲ ನೀಡಲಿಲ್ಲ. ಕಳೆದ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿದ್ದ ಗ್ರೀನ್​ ಆರಂಭಿಕರಾಗಿ 6 ರನ್​ ಗಳಿಸಿದ್ದಾಗ ತುಷಾರ್​ ದೇಶಪಾಂಡೆಗೆ ವಿಕೆಟ್​ ಕೊಟ್ಟರು. ಇವರ ಬೆನ್ನಲ್ಲೇ ಆರಂಭಿಕ ಇಶಾನ್​ ಕಿಶನ್​ ಸಹ 7 ರನ್​ಗೆ ಔಟ್​ ಆದರು. ನಾಯಕ ರೋಹಿತ್​ ಶರ್ಮಾ ಗ್ರೀನ್​ ವಿಕೆಟ್​ ಪಡೆದ ನಂತರ ಮೂರನೇ ಬ್ಯಾಟರ್​ ಆಗಿ ಕ್ರೀಸ್​ಗೆ ಬಂದರು. ಇಂದು ಮೂರು ಬಾಲ್​ ಎದುರಿಸಿದ ರೋಹಿತ್​ ಶರ್ಮಾ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.

ಇದು ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಅವರ 16 ನೇ ಡಕ್ ಔಟ್​ ಆಗಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅತೀ ಹೆಚ್ಚು ಡಕ್​ಗೆ ಔಟ್​ ಆದ ಆಟಗಾರ ಎಂಬ ದಾಖಲೆಗೆ ರೋಹಿತ್​ ಸೇರಿದರು. ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಸುನಿಲ್ ನರೈನ್, ಭಾರತದ ಬ್ಯಾಟ್ಸ್‌ಮನ್‌ಗಳಾದ ದಿನೇಶ್ ಕಾರ್ತಿಕ್ ಮತ್ತು ಮನ್‌ದೀಪ್ ಸಿಂಗ್ ತಲಾ 15 ಬಾರಿ ಡಕ್‌ ಔಟ್​ ಆಗಿದ್ದು ಎರಡನೇ ಸ್ಥಾನದಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್​​ ಶರ್ಮಾ ಈ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಫಾರ್ಮ್​ನಲ್ಲಿಲ್ಲ. ಅವರು ಈ ವರೆಗೆ ಆಡಿದ 10 ಪಂದ್ಯಗಳಲ್ಲಿ, ಅವರು 18.40 ರ ಸರಾಸರಿಯಲ್ಲಿ ಮತ್ತು 129.58 ರ ಸ್ಟ್ರೈಕ್ ರೇಟ್‌ನಲ್ಲಿ 184 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. 10 ಪಂದ್ಯದಲ್ಲಿ ಹಿಟ್​ ಮ್ಯಾನ್​ ಎಂದು ಖ್ಯಾತರಾಗಿರುವ ರೋಹಿತ್​ ಬ್ಯಾಟ್​ನಿಂದ ಒಂದು ಅರ್ಧಶತಕ ಮಾತ್ರ ದಾಖಲಾಗಿದೆ. ಅವರ ಈ ಸೀಸನ್​ನ ಅತ್ಯುತ್ತಮ ಸ್ಕೋರ್ 65 ಆಗಿದೆ.

ದೀಪಕ್​ ಚಹಾರ್​ಗೆ ಮೂರನೇ ಬಾರಿಗೆ ಔಟ್​: ಚೆನ್ನೈನ ಮಧ್ಯಮ ವೇಗಿ ದೀಪಕ್​ ಚಹಾರ್​ ಬೌಲಿಂಗ್​ನಲ್ಲಿ ರೋಹಿತ್​ ಶರ್ಮಾ ಮೂರನೇ ಬಾರಿ ವಿಕೆಟ್​ ಕೊಟ್ಟರು. ಒಟ್ಟಾರೆ ಐಪಿಎಲ್​ನಲ್ಲಿ ಚಹಾರ್​ ಅವರ 49 ಬಾಲ್​ ಎದುರಿಸಿರುವ ರೋಹಿತ್​ 122.44 ರ ಸ್ಟ್ರೈಕ್​​ ರೇಟ್​​ನಲ್ಲಿ 60 ರನ್​ ಗಳಿಸಿದ್ದು, 3 ಬಾರಿ ವಿಕೆಟ್​ ಒಪ್ಪಿಸಿದ್ದಾರೆ.

ಇದನ್ನೂ ಓದಿ: IPLನಲ್ಲಿ ಇಂದು: ಡಿಸಿ ವಿರುದ್ಧ ಜಯದ ನಿರೀಕ್ಷೆಯಲ್ಲಿ ಆರ್‌ಸಿಬಿ, ತವರಿನಲ್ಲಿ ವಿಜೃಂಭಿಸುವರೇ ಕೊಹ್ಲಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.