ಮುಂಬೈ: ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಡಿಗ ರಾಹುಲ್ ನಾಯಕತ್ವದ ಪಡೆ 2 ರನ್ಗಳ ರೋಚಕ ಜಯ ಸಾಧಿಸಿದೆ. ಇದರ ಜೊತೆಗೆ 2022ರ ಐಪಿಎಲ್ನಲ್ಲಿ ಪ್ಲೇ - ಆಫ್ ಪ್ರವೇಶ ಪಡೆದುಕೊಂಡಿದೆ. ತಂಡ ಕೊನೆ ಕ್ಷಣದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಡಗೌಟ್ನಲ್ಲಿ ಕುಳಿತುಕೊಂಡಿದ್ದ ಮೆಂಟರ್ ಗೌತಮ್ ಗಂಭೀರ್ ಚಿಕ್ಕ ಮಕ್ಕಳ ರೀತಿಯಲ್ಲಿ ಸಂಭ್ರಮಿಸಿದ್ದು, ತಂಡ ಚಾಂಪಿಯನ್ ಆದಷ್ಟೇ ಖುಷಿ ಪಟ್ಟಿದ್ದಾರೆ.
ಲಖನೌ ನೀಡಿದ್ದ 211ರನ್ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ 20 ಓವರ್ಗಳಲ್ಲಿ 208ರನ್ ಮಾತ್ರ ಗಳಿಸಲು ಶಕ್ತವಾಯಿತು. 20ನೇ ಓವರ್ ಎಸೆದ ಸ್ಟೋನಿಸ್ ಕೊನೆಯ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದುಕೊಳ್ಳುತ್ತಿದ್ದಂತೆ ಲಖನೌ ರೋಚಕ ಗೆಲುವು ದಾಖಲು ಮಾಡುವಂತಾಯಿತು. ಈ ವೇಳೆ ಮೆಂಟರ್ ಗೌತಮ್ ಗಂಭೀರ್ ಸಂಭ್ರಮಿಸಿದ್ದು, ಅದರ ವಿಡಿಯೋ ತುಣುಕು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
- — ChaiBiscuit (@Biscuit8Chai) May 18, 2022 " class="align-text-top noRightClick twitterSection" data="
— ChaiBiscuit (@Biscuit8Chai) May 18, 2022
">— ChaiBiscuit (@Biscuit8Chai) May 18, 2022
ಇದನ್ನು ಓದಿ: ಬಾಕ್ಸಿಂಗ್ ರಿಂಗ್ನಲ್ಲೇ ಹೃದಯಾಘಾತ.. 38ನೇ ವಯಸ್ಸಿನಲ್ಲೇ ಬಾಕ್ಸರ್ ಯಮಕ್ ವಿಧಿವಶ
2012 ಹಾಗೂ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ಗೌತಮ್ ಗಂಭೀರ್, ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದೀಗ ಲಖನೌ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್ನಲ್ಲಿ 14 ಪಂದ್ಯಗಳ ಪೈಕಿ 9ರಲ್ಲಿ ಗೆಲುವು ಸಾಧಿಸಿರುವ ರೋಹಿತ್ ಪಡೆ 18 ಪಾಯಿಂಟ್ಗಳೊಂದಿಗೆ ಎರಡನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ.