ಮುಂಬೈ: ಕೆ.ಎಲ್. ರಾಹುಲ್, ದೀಪಕ್ ಹೂಡಾರ ಅರ್ಧಶತಕ, ಮೊಹ್ಸಿನ್ ಖಾನ್ರ ಕರಾರುವಾಕ್ ದಾಳಿಗೆ ನಲುಗಿದ ದೆಹಲಿ ಕ್ಯಾಪಿಟಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 6 ರನ್ಗಳ ಸೋಲು ಕಂಡಿದೆ. ಲಖನೌ ತಂಡ ನೀಡಿದ್ದ 195 ರನ್ಗಳ ಗುರಿ ಬೆನ್ನತ್ತಿದ ದೆಹಲಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್ ಗಳಿಸಲಷ್ಟೇ ಶಕ್ತವಾಯಿತು.
ದೆಹಲಿಗೆ ಆರಂಭಿಕ ಆಘಾತ: ಬೃಹತ್ ಮೊತ್ತದ ಗುರಿ ಹೊಂದಿದ್ದ ದೆಹಲಿ ತಂಡ ಭದ್ರ ಬುನಾದಿ ಹಾಕಿಕೊಡಬೇಕಿದ್ದ ಆರಂಭಿಕ ಆಟಗಾರರಾದ ಫೃಥ್ವಿ ಶಾ(5) ಮತ್ತು ಡೇವಿಡ್ ವಾರ್ನರ್(3) 13 ಗಳಿಸುವಷ್ಟರಲ್ಲಿ ಇಬ್ಬರೂ ಪೆವಿಲಿಯನ್ ಸೇರಿದರು. ಮಿಚೆಲ್ ಮಾರ್ಷ್ (37), ರಿಷಬ್ ಪಂತ್(44) ರನ್ ಬಾರಿಸಿ ಕುಸಿಯುತ್ತಿದ್ದ ತಂಡಕ್ಕೆ ನೆರವಾದರು. ಲಲಿತ್ ಯಾದವ್(3) ಮತ್ತೆ ವಿಫಲವಾದರೆ, ರೋವ್ಮನ್ ಫೋವೆಲ್(35), ಅಕ್ಷರ್ ಪಟೇಲ್ (42) ರನ್ ಗಳಿಸಿದರೂ ತಂಡ ಗೆಲುವಿನ ದಡ ಮುಟ್ಟಿಸುವಲ್ಲಿ ಸಫಲವಾಗಲಿಲ್ಲ.
ಖಾನ್ ದರ್ಬಾರ್: ಒಂದೆಡೆ ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರೆ, ಇನ್ನೊಂದೆಡೆ ಅದ್ಭುತ ಬೌಲಿಂಗ್ ಮಾಡಿದ ಮೊಹ್ಸಿನ್ ಖಾನ್ 4 ಓವರ್ಗಳಲ್ಲಿ 16 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ದೆಹಲಿಯ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇದಲ್ಲದೇ, ದುಷ್ಮಂತ್ ಚಮೀರಾ, ರವಿ ಬಿಷ್ಣೋಯಿ, ಕೃಷ್ಣಪ್ಪ ಗೌತಮ್ ತಲಾ 1 ವಿಕೆಟ್ ಪಡೆದರು.
-
Sunday ko match jeetne waalon ko hum #SuperGiants kehte hain. ⁰#AbApniBaariHai💪#IPL2022 🏆 #bhaukaalmachadenge #lsg #LucknowSuperGiants #T20 #TataIPL@mohsin07khan @QuinnyDekock69 @dushmantha05 pic.twitter.com/zlUBq3bvcT
— Lucknow Super Giants (@LucknowIPL) May 1, 2022 " class="align-text-top noRightClick twitterSection" data="
">Sunday ko match jeetne waalon ko hum #SuperGiants kehte hain. ⁰#AbApniBaariHai💪#IPL2022 🏆 #bhaukaalmachadenge #lsg #LucknowSuperGiants #T20 #TataIPL@mohsin07khan @QuinnyDekock69 @dushmantha05 pic.twitter.com/zlUBq3bvcT
— Lucknow Super Giants (@LucknowIPL) May 1, 2022Sunday ko match jeetne waalon ko hum #SuperGiants kehte hain. ⁰#AbApniBaariHai💪#IPL2022 🏆 #bhaukaalmachadenge #lsg #LucknowSuperGiants #T20 #TataIPL@mohsin07khan @QuinnyDekock69 @dushmantha05 pic.twitter.com/zlUBq3bvcT
— Lucknow Super Giants (@LucknowIPL) May 1, 2022
ರಾಹುಲ್, ಹೂಡಾ ಅರ್ಧಶತಕ: ಈ ಸೀಸನ್ನಲ್ಲಿ ಆರೇಂಜ್ ಕ್ಯಾಪ್ಗೆ ಜೋಸ್ ಬಟ್ಲರ್ಗೆ ಭಾರಿ ಪೈಪೋಟಿ ನೀಡುತ್ತಿರುವ ಕೆ.ಎಲ್. ರಾಹುಲ್ ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ಮಿಂಚಿದರು. ಇನ್ನಿಂಗ್ಸ್ನ ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ರಾಹುಲ್ 5 ಸಿಕ್ಸರ್, 4 ಫೋರ್ ಸಮೇತ 51 ಎಸೆತಗಳಲ್ಲಿ 77 ರನ್ ಬಾರಿಸಿದರು. ಶತಕದೆಡೆಗೆ ಮುನ್ನುಗ್ಗುತ್ತಿದ್ದ ರಾಹುಲ್ 18 ನೇ ಓವರ್ನಲ್ಲಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಲಲಿತ್ ಯಾದವ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ರಾಹುಲ್ ಜೊತೆಗೆ ಇನ್ನೊಂದು ತುದಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ದೀಪಕ್ ಹೂಡಾ 34 ಎಸೆತಗಳಲ್ಲಿ 52 ರನ್ ಬಾರಿಸಿ ಔಟಾದರು. ಕ್ವಿಂಟನ್ ಡಿ ಕಾಕ್ 23, ಮಾರ್ಕಸ್ ಸ್ಟೋಯಿನಿಸ್ 17, ಕೃನಾಲ್ ಪಾಂಡ್ಯ 9 ರನ್ ಗಳಿಸಿದರು. ದೆಹಲಿ ಕ್ಯಾಪಿಟಲ್ಸ್ ಪರವಾಗಿ ಶಾರ್ದೂಲ್ ಠಾಕೂರ್ ಒಬ್ಬರೇ 3 ವಿಕೆಟ್ ಪಡೆದು ಮಿಂಚಿದರೆ, ಇನ್ನುಳಿದ ಎಲ್ಲಾ ಬೌಲರ್ಗಳು ವಿಕೆಟ್ ಗಳಿಸುವಲ್ಲಿ ವಿಫಲವಾದರಲ್ಲದೇ ದಂಡನೆಗೆ ಒಳಗಾದರು.
ಓದಿ: ಐಪಿಎಲ್ ಆವೃತ್ತಿಯೊಂದರಲ್ಲಿ ರಾಜಸ್ಥಾನ್ ಪರ ಗರಿಷ್ಠ ರನ್ ದಾಖಲಿಸಿದ ಜಾಸ್ ಬಟ್ಲರ್