ಲಕ್ನೋ (ಉತ್ತರ ಪ್ರದೇಶ): ಮುಂಬೈ ಇಂಡಿಯನ್ಸ್ನ ಬ್ಯಾಟಿಂಗ್ ಫಾರ್ಮ್ಗೆ ಬಂದಿದೆ, ಬೌಲಿಂಗ್ನಲ್ಲಿ ಸುಧಾರಿಸಿಕೊಳ್ಳ ಬೇಕು ಎಂದು ವಿಮರ್ಶಿಸಲಾಗುತ್ತಿತ್ತು. ಇಂದು ಲಕ್ನೋ ವಿರುದ್ಧ ವಿಕೆಟ್ ಉರುಳಿಸದಿದ್ದರೂ ಕೃನಾಲ್ ಪಡೆಯನ್ನು ಅವರ ತವರು ನೆಲದಲ್ಲೇ ಮುಂಬೈ ಕಟ್ಟಿಹಾಕಿದೆ. ಎಂಐನ ಬಿಗಿಯಾದ ಬೌಲಿಂಗ್ ನಡುವೆ ನಾಯಕ ಕೃನಾಲ್ ಪಾಂಡ್ಯ ಹಾಗೂ ಮಾರ್ಕಸ್ ಸ್ಟೋನಿಸ್ ಬ್ಯಾಟಿಂಗ್ ನೆರವಿನಿಂದ ಲಕ್ನೋ ನಿಗದಿತ ಓವರ್ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದರು. ಮುಂಬೈ ಗೆಲುವಿಗೆ 178 ರನ್ನ ಅಗತ್ಯವಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಬಂದ ಲಕ್ನೂ ಸೂಪರ್ ಜೈಂಟ್ಸ್ ಆರಂಭಿಕ ಜೊತೆಯಾಟದ ಕೊರತೆ ಅನುಭವಿಸಿತು. ತಂಡ ಮೊತ್ತ 12 ಆಗಿದ್ದಾಗ 2.1 ಓವರ್ನಲ್ಲಿ ದೀಪಕ್ ಹೂಡಾ 6 ರನ್ಗೆ ವಿಕೆಟ್ ಕೊಟ್ಟರೆ, ಪ್ರೇರಕ್ ಮಂಕಡ್ ಶೂನ್ಯಕ್ಕೆ ವಿಕೆಟ್ ಕೊಟ್ಟಿದ್ದಾರೆ. ನಂತರ ನಾಯಕ ಕೃನಾಲ್ ಪಾಂಡ್ಯ ಮತ್ತು ಡಿ ಕಾಕ್ ಅವರನ್ನು ಸೇರಿಕೊಂಡರು. ಆದರೆ ಡಿ ಕಾಕ್ 16 ರನ್ ಗಳಿಸಿ ಔಟ್ ಆದರು.
-
Innings break!
— IndianPremierLeague (@IPL) May 16, 2023 " class="align-text-top noRightClick twitterSection" data="
An exceptional knock from @MStoinis inspires @LucknowIPL to a 177/3 in the first innings 🔥🔥
A huge chase coming up for @mipaltan. Can they do it?
Scorecard ▶️ https://t.co/yxOTeCROIh #TATAIPL | #LSGvMI pic.twitter.com/IuqLDqCyWy
">Innings break!
— IndianPremierLeague (@IPL) May 16, 2023
An exceptional knock from @MStoinis inspires @LucknowIPL to a 177/3 in the first innings 🔥🔥
A huge chase coming up for @mipaltan. Can they do it?
Scorecard ▶️ https://t.co/yxOTeCROIh #TATAIPL | #LSGvMI pic.twitter.com/IuqLDqCyWyInnings break!
— IndianPremierLeague (@IPL) May 16, 2023
An exceptional knock from @MStoinis inspires @LucknowIPL to a 177/3 in the first innings 🔥🔥
A huge chase coming up for @mipaltan. Can they do it?
Scorecard ▶️ https://t.co/yxOTeCROIh #TATAIPL | #LSGvMI pic.twitter.com/IuqLDqCyWy
ಡಿ ಕಾಕ್ ನಂತರ ಬಂದ ಮಾರ್ಕಸ್ ಸ್ಟೋನಿಸ್ ನಾಯಕ ಕೃನಾಲ್ಗೆ ಸಾಥ್ ನೀಡಿದರು. ತಂಡ ಸಂಕಷ್ಟದಲ್ಲಿದ್ದಾಗ ಜೋಡಿ 89 ರನ್ನ ಜೊತೆಯಾಟ ಮಾಡಿತು. ಇದು ಲಕ್ನೋ ತಂಡ ದಾಖಲೆಯ ಜೊತೆಯಾಟವಾಗಿದೆ. ಲಕ್ನೋ ತಂಡದಲ್ಲಿ ಈ ಆವೃತ್ತಿಯಲ್ಲಿ ಯಾವುದೇ ವಿಕೆಟ್ಗೆ 89 ರನ್ ಜೊತೆಯಾಟ ಬಂದಿರಲಿಲ್ಲ. 42 ಬಾಲ್ ಎದುರಿಸಿ 49 ರನ್ ಗಳಿಸಿ ಆಡುತ್ತಿದ್ದ ಕೃನಾಲ್ ಪಾಂಡ್ಯ ಗಾಯಕ್ಕೆ ತುತ್ತಾದರು. ಇದರಿಂದ 1 ರನ್ನಿಂದ ಅರ್ಧಶತಕದಿಂದ ವಂಚಿತರಾದರು. ಕೃನಾಲ್ ಗಾಯದ ಕಾರಣ ರಿಟೈರ್ಡ್ ಹರ್ಟ್ ಎಂದು ಘೋಷಿಸಿ ಪೆವಿಲಿಯನ್ಗೆ ಮರಳಿದರು.
ಪೂರನ್ ಕೃನಾಲ್ ಜಾಗಕ್ಕೆ ಮರಳಿದರು. ವಿಕೆಟ್ ಮೇಲೆ ಮೊದಲು ನಿಯಂತ್ರಣ ಸಾಧಿಸಿದ್ದ ಮುಂಬೈ ಬೌಲರ್ಗಳು ಕೊನೆಯ ಓವರ್ಗಳಲ್ಲಿ ದುಬಾರಿಯಾದರು. ಕೊನೆಯ ಮೂರು ಓವರ್ನಲ್ಲಿ 54 ರನ್ ಲಕ್ನೋ ತಂಡಕ್ಕೆ ಹರಿದು ಬಂತು. 18 ನೇ ಓವರ್ ಮಾಡಿದ ಕ್ರಿಸ್ ಜೋರ್ಡಾನ್ ಬರೋಬ್ಬರಿ 24 ರನ್ ಬಿಟ್ಟುಕೊಟ್ಟರು. ಈ ವೇಳೆ ಮಾರ್ಕಸ್ ಸ್ಟೋನಿಸ್ ಭರ್ಜರಿ ಅರ್ಧಶತಕ ಗಳಿಸಿದರು.
47 ಬಾಲ್ ಎದುರಿಸಿದ ಮಾರ್ಕಸ್ ಸ್ಟೋನಿಸ್ 8 ಸಿಕ್ಸ್ ಮತ್ತು 4 ಬೌಂಡರಿ ಸಹಾಯದಿಂದ 89 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಇನ್ನಿಂಗ್ಸ್ ಸಹಾಯದಿಂದ 177 ರನ್ಗೆ ಲಕ್ನೋ ತಲುಪಿತು. ಮುಂಬೈನ ಜೇಸನ್ ಬೆಹ್ರೆನ್‌ಡಾರ್ಫ್ 2 ವಿಕೆಟ್ ಮತ್ತು ಪಿಯೂಷ್ ಚಾವ್ಲಾ 1 ವಿಕೆಟ್ ಪಡೆದರು.
ತಂಡಗಳು ಇಂತಿವೆ..: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಆಕಾಶ್ ಮಧ್ವಲ್
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ(ನಾಯಕ), ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್
ಇದನ್ನೂ ಓದಿ: ವರ್ಷದಲ್ಲಿ ಆಡಿದ ಎಲ್ಲಾ ಮಾದರಿಯಲ್ಲೂ ಶತಕ: ಗಿಲ್ ವಿಶಿಷ್ಟ ಸಾಧನೆ