ETV Bharat / sports

LSG vs CSK: ಮಳೆ ಪಾಲಾದ ಚೆನ್ನೈ-ಲಕ್ನೋ ಪಂದ್ಯ, ಉಭಯ ತಂಡಕ್ಕೂ ಒಂದೊಂದು ಅಂಕ - ETV Bharath Karnataka

ಲಕ್ನೋ ಸೂಪರ್​ ಜೈಂಟ್ಸ್ ನಾಯಕ ಕೆ ಎಲ್​ ರಾಹುಲ್​ ಗಾಯದ ಸಮಸ್ಯೆಯಿಂದ ಇಂದಿನ ಪಂದ್ಯವನ್ನು ಆಡುತ್ತಿಲ್ಲ.

Lucknow Super Giants vs Chennai Super Kings Score update
LSG vs CSK: ಲಕ್ನೋ - ಚೆನ್ನೈ ಪಂದ್ಯಕ್ಕೆ ಮಳೆಯಿಂದಾಗಿ ಟಾಸ್​ ವಿಳಂಬ, ಕೆ ಎಲ್​ ರಾಹುಲ್​ ಅಲಭ್ಯ
author img

By

Published : May 3, 2023, 3:20 PM IST

Updated : May 3, 2023, 8:42 PM IST

ಲಕ್ನೋ (ಉತ್ತರ ಪ್ರದೇಶ): ಚೆನ್ನೈ ಸೂಪರ್​ ಕಿಂಗ್ಸ್​​ ಮತ್ತು ಲಕ್ನೋ ಸೂಪರ್​ ಜೈಂಟ್ಸ್ ಮಳೆ ಕಾಟ ಕೊಟ್ಟಿದೆ. 19.2 ಓವರ್​ಗೆ 125 ರನ್​ ಗಳಿಸಿರುವ ಲಕ್ನೋ 7 ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ಆರಂಭವಾದ ಮಳೆ ನಿಲ್ಲದ ಕಾರಣ ಪಂದ್ಯ ಫಲಿತಾಂಶ ರಹಿತವಾಯಿತು. ಇದರಿಂದ ಆಯುಷ್​ ಬದೋನಿ ಅರ್ಧಶತಕವೂ ವ್ಯರ್ಥವಾಯಿತು.

ಮಳೆಯಿಂದಾಗಿ ಇದೇ ಹಂತಕ್ಕೆ ಮೊದಲ ಇನ್ನಿಂಗ್ಸ್​ ಡಿಕ್ಲೇರ್​ ಆದಲ್ಲಿ ಚೆನ್ನೈ 19 ಓವರ್​ನಲ್ಲಿ 127 ರನ್​ ಗಳಿಸ ಬೇಕಾಗಿತ್ತು. ಆದರೆ ವರುಣ ಬಿಡದೇ ಸುರಿದ ಕಾರಣ ಪಂದ್ಯ ರದ್ದಾಯಿತು. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಲಕ್ನೋ ತಂಡ ಆರಂಭದಿಂದಲೇ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆರಿಬಿಯನ್​ ಆಟಗಾರ ಕೈಲ್ ಮೇಯರ್ಸ್ (14) ಮೊಯಿನ್ ಅಲಿಗೆ ವಿಕೆಟ್​ ಕೊಟ್ಟರು. ಗಾಯಗೊಂಡ ನಾಯಕ ಕೆಎಲ್​ ರಾಹುಲ್​ ಬದಲಾಗಿ ತಂಡಕ್ಕೆ ಸೇರಿಕೊಂಡ ಮನನ್ ವೋಹ್ರಾ 10 ರನ್​ ಗಳಿಸಿ ಪೆವಿಲಿಯನ್​ ಹಾದಿಹಿಡಿದರು. ನಂತರ ಬಂದ ಇಂದಿನ ಪಂದ್ಯದ ನಾಯಕ ಕೃನಾಲ್​ ಪಾಂಡ್ಯ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.

ಮಾರ್ಕಸ್ ಸ್ಟೋಯ್ನಿಸ್ (6) ಮತ್ತು ಕರಣ್ ಶರ್ಮಾ (9) ಹೆಚ್ಚಿನ ಕೊಡುಗೆ ನೀಡಲಿಲ್ಲ. ಪವರ್- ಪ್ಲೇ ಮುಕ್ತಾಯದ ವೇಳೆಗೆ 3 ವಿಕೆಟ್​ ಕಳೆದುಕೊಂಡು 31 ರನ್​ ಗಳಿಸಿದ್ದ ಲಕ್ನೋ, 10 ಓವರ್​ ವೇಳೆಗೆ 44 ರನ್​ಗೆ 5 ವಿಕೆಟ್​ ಕಳೆದುಕೊಂಡಿತ್ತು. ಆರು ಮತ್ತು ಏಳನೇ ವಿಕೆಟ್​ ಆಗಿ ಬಂದ ನಿಕೋಲಸ್ ಪೂರನ್ ಮತ್ತು ಆಯುಷ್ ಬದೋನಿ ತಂಡಕ್ಕೆ ಆಸರೆಯಾದರು. ಈ ಜೋಡಿ ತಂಡದ ಮೊತ್ತವನ್ನು 100 ಗಡಿ ಮುಟ್ಟಿಸಿತು. ಈ ವೇಳೆ 31 ಬಾಲ್​ನಲ್ಲಿ 20 ರನ್​ ಗಳಸಿದ್ದ ಪೂರನ್​ ವಿಕೆಟ್​ ಕೊಟ್ಟರು. ನಂತರ ಬಂದ ಕೃಷ್ಣಪ್ಪ ಗೌತಮ್ ಸಹ 1 ರನ್​ಗೆ ಔಟ್​ ಆದರು.

ಅರ್ಧಶತಕ ಗಳಿಸಿದ ಬದೋನಿ: ತಂಡ ಬ್ಯಾಟರ್​ಗಳು ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಪರದಾಡುತ್ತಿದ್ದರೆ, ಬದೋನಿ ತಾಳ್ಮೆಯಿಂದ ಬ್ಯಾಟ್​ ಬೀಸಿ ಅರ್ಧಶತಕ ಪೂರೈಸಿಕೊಂಡರು. 33 ಬಾಲ್​ ಆಡಿದ ಅವರು 2 ಬೌಂಡರಿ ಮತ್ತು 4 ಸಿಕ್ಸ್​ನಿಂದ 59 ರನ್​ ಗಳಿಸಿ ಅಜೇಯರಾಗಿದ್ದಾರೆ. 19.2 ಓವರ್​ಗೆ ಲಕ್ನೋ 7 ವಿಕೆಟ್​ ನಷ್ಟಕ್ಕೆ 125 ರನ್​ ಗಳಿಸಿತ್ತು.

ಚೆನ್ನೈನ ತ್ರಿವಳಿ ಸ್ಪಿನ್ನರ್​ಗಳಾದ ಮಹೇಶ್ ತೀಕ್ಷ್ಣ, ಮೊಯಿನ್ ಅಲಿ ಮತ್ತು ರವೀಂದ್ರ ಜಡೇಜಾ ಲಕ್ನೋವನ್ನು ಕಾಡಿದರು. ತೀಕ್ಷ್ಣ, ಅಲಿ ಎರಡು ವಿಕೆಟ್​ ಕಿತ್ತರೆ, ಜಡೇಜ ಒಂದು ವಿಕೆಟ್​ ಉರುಳಿಸಿದರು. ಲಂಕಾದ ಮಧ್ಯಮ ವೇಗಿ ಮಥೀಶ ಪತಿರಣ 2 ವಿಕೆಟ್​ ಪಡೆದರು.

ತಂಡಗಳು ಇಂತಿವೆ..: ಲಕ್ನೋ ಸೂಪರ್​ ಜೈಂಟ್ಸ್​: ಕೈಲ್ ಮೇಯರ್ಸ್, ಮನನ್ ವೋಹ್ರಾ, ಕರಣ್ ಶರ್ಮಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್​), ಕೃನಾಲ್ ಪಾಂಡ್ಯ(ನಾಯಕ), ಕೃಷ್ಣಪ್ಪ ಗೌತಮ್, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್

ಚೆನ್ನೈ ಸೂಪರ್​ ಕಿಂಗ್ಸ್​: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ / ವಿಕೆಟ್​ ಕೀಪರ್​), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷ್ಣ

ಇದನ್ನೂ ಓದಿ: KL Rahul-Unadkat Injury: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ತಂಡಕ್ಕೆ ಬದಲಿ ಆಟಗಾರರು ಯಾರು?​

Last Updated : May 3, 2023, 8:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.