ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿ ಶೇಕಡಾ 75 ರಷ್ಟು ಮುಗಿದಿದ್ದು, ಮುಂದಿನ ಪಂದ್ಯಗಳು ಪ್ಲೇ ಆಫ್ ಕ್ವಾಲಿಫೈರ್ಗೆ ಕೆಳಗಿರುವ ತಂಡಗಳಿಗೆ ಪ್ರಮುಖವಾಗಲಿದೆ. ಪ್ರತೀ ಪಂದ್ಯವೂ ಮೇಲಿನ ನಾಲ್ಕು ಸ್ಥಾನದಲ್ಲಿ ಅವಕಾಶಕ್ಕಾಗಿ ನಡೆಯಲಿದೆ. ಇಂದಿನ ಕೋಲ್ಕತ್ತಾ ಮತ್ತು ಪಂಜಾಬ್ ಕಿಂಗ್ಸ್‌ನ ನಡುವಿನ ಫೈಟ್ ಸಹ ಇದೇ ರೀತಿಯಾಗಿದ್ದು, ಗೆದ್ದವರಿಗೆ ಪ್ಲೇ ಆಫ್ ಕನಸು ಮುಂದುವರೆಯಲಿದೆ. ಸೋತ ತಂಡ ಮಿಕ್ಕ ತಂಡಗಳ ಫಲಿತಾಂಶದ ಲಾಭದಲ್ಲಿ ತನ್ನ ಸ್ಥಾನದ ಉಳಿವನ್ನು ಎದುರು ನೋಡಬೇಕಾಗುತ್ತದೆ.
-
Insert mixtape: The #KKRvPBKS Rematch ▶️📼#SaddaPunjab #TATAIPL #JazbaHaiPunjabi pic.twitter.com/oq90HIQPdh
— Punjab Kings (@PunjabKingsIPL) May 8, 2023 " class="align-text-top noRightClick twitterSection" data="
">Insert mixtape: The #KKRvPBKS Rematch ▶️📼#SaddaPunjab #TATAIPL #JazbaHaiPunjabi pic.twitter.com/oq90HIQPdh
— Punjab Kings (@PunjabKingsIPL) May 8, 2023Insert mixtape: The #KKRvPBKS Rematch ▶️📼#SaddaPunjab #TATAIPL #JazbaHaiPunjabi pic.twitter.com/oq90HIQPdh
— Punjab Kings (@PunjabKingsIPL) May 8, 2023
ಐಪಿಎಲ್ 2023ರ 53ನೇ ಪಂದ್ಯದಲ್ಲಿ ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಶಿಖರ್ ಧವನ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಕೋಲ್ಕತ್ತಾದ ತವರು ಮೈದಾನವಾದ ಈಡನ್ ಗಾರ್ಡನ್ಸ್ ಇಂದಿನ ಪಂದ್ಯ ನಡೆಯಲಿದ್ದು, ಸಂಜೆ 07:30ಕ್ಕೆ ಆರಂಭವಾಗಲಿದೆ. ಪಂಜಾಬ್ ಕಿಂಗ್ಸ್‌ಗೆ ಪ್ಲೇ ಆಫ್‌ಗೆ ಪ್ರವೇಶಿಸಲು ಇನ್ನೂ ಅವಕಾಶವಿದೆ. 10 ಪಂದ್ಯಗಳಲ್ಲಿ ಐದು ಗೆಲುವು ದಾಖಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಎಂಟನೇ ಸ್ಥಾನಕ್ಕೆ ತಲುಪಿದೆ. ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಶ್ರೇಯಾಂಕ ಸುಧಾರಿಸುತ್ತದೆ, ಆದರೆ ಪ್ಲೇ-ಆಫ್‌ಗೆ ಹೋಗಲು ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದು ರನ್ ರೇಟ್ ಕೂಡ ಉತ್ತಮವಾಗಿಸಿಕೊಳ್ಳಬೇಕಾಗಿದೆ.
ಮುಂಬರುವ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವುದು ಪಂಜಾಬ್ ಕಿಂಗ್ಸ್‌ನ ಗುರಿಯಾಗಿದೆ. ಇಂದಿನ ಪಂದ್ಯ ಗೆದ್ದಲ್ಲಿ ಪಂಜಾಬ್ ಅಂಕಪಟ್ಟಿಯ ನಾಲ್ಕನೇ ಸ್ಥಾನಕ್ಕೆ ಏರಲಿದೆ. ಕಳೆದ ಪಂದ್ಯದಲ್ಲಿ ಲಿವಿಂಗ್ ಸ್ಟೋನ್ ಮತ್ತು ಜಿತೇಶ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ಸಹಾಯದಿಂದ 214 ರನ್ ಕಲೆಹಾಕಿದರೂ, ಬೌಲಿಂಗ್ನಲ್ಲಿ ಎಡವಿ ಮುಂಬೈ ವಿರುದ್ಧ 6 ವಿಕೆಟ್ಗಳ ಸೋಲನ್ನು ಪಂಜಾಬ್ ಕಂಡಿದೆ. ಇಂದು ಮತ್ತದೇ ಬ್ಯಾಟಿಂಗ್ ಪ್ರದರ್ಶನ ನೀಡಿ ಬೌಲಿಂಗ್ನಲ್ಲಿ ಸುಧಾರಿಸಿಕೊಳ್ಳಬೇಕಿದೆ.
-
Lights ✅ Camera ✅ Admin’s tweets ✅
— KolkataKnightRiders (@KKRiders) May 8, 2023 " class="align-text-top noRightClick twitterSection" data="
You ready for tonight, fam? 😎#KKRvPBKS | #AmiKKR | #TATAIPL pic.twitter.com/7rVg9sG8ON
">Lights ✅ Camera ✅ Admin’s tweets ✅
— KolkataKnightRiders (@KKRiders) May 8, 2023
You ready for tonight, fam? 😎#KKRvPBKS | #AmiKKR | #TATAIPL pic.twitter.com/7rVg9sG8ONLights ✅ Camera ✅ Admin’s tweets ✅
— KolkataKnightRiders (@KKRiders) May 8, 2023
You ready for tonight, fam? 😎#KKRvPBKS | #AmiKKR | #TATAIPL pic.twitter.com/7rVg9sG8ON
ಕೋಲ್ಕತ್ತಾ ನೈಟ್ ರೈಡರ್ಸ್ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ 5 ರನ್ನ ರೋಚಕ ಗೆಲುವು ಬರೆದಿದೆ. ಇದೇ ಸ್ಥೈರ್ಯದಲ್ಲಿ ಇಂದಿನ ಪಂದ್ಯವನ್ನು ತವರು ಮೈದಾನದಲ್ಲಿ ರಾಣಾ ಪಡೆ ಮುಂದುವರೆಸಬೇಕಿದೆ. ಕೆಕೆಆರ್ ಈ ಆವೃತ್ತಿಯಲ್ಲಿ ಸಂಪೂರ್ಣ ಏರಿಳಿತದ ಆಟವನ್ನು ಪ್ರದರ್ಶಿಸಿದೆ. ಈ ಆವೃತ್ತಿಯಲ್ಲಿ ಯಾವುದೇ ಬ್ಯಾಟರ್ನಿಂದ ತಂಡದಲ್ಲಿ ಉತ್ತಮ ಫಾರ್ಮ್ ಕಂಡು ಬಂದಿಲ್ಲ. ಇದು ಕೆಕೆಆರ್ನ್ನು ಸಂಕಷ್ಟಕ್ಕೆ ದೂಡಿದೆ.
ಸಂಭಾವ್ಯ ತಂಡಗಳು ಇಂತಿವೆ..: ಕೋಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರ್ರಾನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್
ಇದನ್ನೂ ಓದಿ: ಯಜುವೇಂದ್ರ ಚಹಲ್ ಐಪಿಎಲ್ನ ಗರಿಷ್ಠ ವಿಕೆಟ್ ಸರದಾರ: ರಾಜಸ್ಥಾನ Vs ಹೈದರಾಬಾದ್ ಮ್ಯಾಚ್ ಫೋಟೋಸ್