ಕೋಲ್ಕತ್ತಾ (ಪಶ್ಚಿಮ ಬಂಗಾಳ): ಶುಭಮನ್ ಗಿಲ್ ಮತ್ತು ವಿಜಯ್ ಶಂಕರ್ ಆಟದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ್ದ 180 ರನ್ನ ಗುರಿಯನ್ನು ಗುಜರಾತ್ ಟೈಟಾನ್ಸ್ ಕೇವಲ ಮೂರು ವಿಕೆಟ್ ನಷ್ಟದಿಂದ 17.5 ಓವರ್ನಲ್ಲೇ ಸಾಧಿಸಿದೆ. ಈ ಮೂಲಕ 8 ಪಂದ್ಯಗಳಲ್ಲಿ 6 ಗೆದ್ದು 12 ಅಂಕದಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಗುಜರಾತ್ನ ಆರಂಭಿಕರಾದ ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಇದುವರೆಗೂ ಉತ್ತಮ ಜೊತೆಯಾಟ ನೀಡಿಲ್ಲ. ಇಂದು ಸಹ 10 ರನ್ ಗಳಿಸಿ ಸಹಾ ಆಂಡ್ರೆ ರಸೆಲ್ ವಿಕೆಟ್ ಕೊಟ್ಟರು. ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ ಮತ್ತೋರ್ವ ಆರಂಭಿಕ ಆಟಗಾರ ಶುಭಮನ್ ಗಿಲ್ ಜೊತೆ ಬಿರುಸಿನ ಇನ್ನಿಂಗ್ಸ್ ಕಟ್ಟಿದರು.
ಹಾರ್ದಿಕ್ ಪಾಂಡ್ಯ 20 ಬಾಲ್ನಲ್ಲಿ 26 ರನ್ ಗಳಿಸಿ ಔಟ್ ಆದರು. ಶುಭಮನ್ ಗಿಲ್ 35 ಎಸೆತ ಎದುರಿಸಿ 8 ಬೌಡರಿಯಿಂದ 49 ರನ್ಗೆ ಔಟ್ ಆದರು. ಈ ಮೂಲಕ ಅರ್ಧಶತಕದಿಂದ ವಂಚಿತರಾದರು. ಈ ಮೂರು ವಿಕೆಟ್ ಪತನದ ನಂತರ ವಿಜಯ್ ಶಂಕರ್ ಮತ್ತು ಡೇವಿಡ್ ಮಿಲ್ಲರ್ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯದರು.
-
He held his nerves and finished the job with the bat in some style 🔥🔥@vijayshankar260 was our 🔝 performer from the second innings of the #KKRvGT contest in the #TATAIPL 🙌🏻
— IndianPremierLeague (@IPL) April 29, 2023 " class="align-text-top noRightClick twitterSection" data="
A look at his batting summary 🔽 pic.twitter.com/xKO8v0GBnY
">He held his nerves and finished the job with the bat in some style 🔥🔥@vijayshankar260 was our 🔝 performer from the second innings of the #KKRvGT contest in the #TATAIPL 🙌🏻
— IndianPremierLeague (@IPL) April 29, 2023
A look at his batting summary 🔽 pic.twitter.com/xKO8v0GBnYHe held his nerves and finished the job with the bat in some style 🔥🔥@vijayshankar260 was our 🔝 performer from the second innings of the #KKRvGT contest in the #TATAIPL 🙌🏻
— IndianPremierLeague (@IPL) April 29, 2023
A look at his batting summary 🔽 pic.twitter.com/xKO8v0GBnY
ವಿಜಯ್ ಶಂಕರ್ 24 ಬಾಲ್ನಲ್ಲಿ 5 ಸಿಕ್ಸ್ ಮತ್ತು 2 ಬೌಂಡರಿಯಿಂದ ಅಜೇಯ 51 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ಡೇವಿಡ್ ಮಿಲ್ಲರ್ 18 ಎಸೆತ ಎದುರಿಸಿ 2 ಸಿಕ್ಸ್ ಮತ್ತು 2 ಫೋರ್ನಿಂದ ಅಜೇಯ 32 ರನ್ ಕಲೆಹಾಕಿದರು. ಇಬ್ಬರು ಬ್ಯಾಟರ್ಗಳ ಜೊತೆಯಾಟದಿಂದ ಗುಜರಾತ್ 17.5 ಓವರ್ನಲ್ಲೇ ಗೆಲುವು ದಾಖಲಿಸಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತಾ, ರಹಮಾನುಲ್ಲಾ ಗುರ್ಬಾಜ್ ಅವರ ಅರ್ಧಶತಕದ ಬ್ಯಾಟಿಂಗ್ ಬಲದಿಂದ 20 ಓವರ್ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಮೊಹಮ್ಮದ್ ಶಮಿ, ನೂರ್ ಅಹ್ಮದ್ ಮತ್ತು ಜೋಶುವಾ ಲಿಟಲ್ ಗುಜರಾತ್ ಪರ ಯಶಸ್ವಿ ವಿಕೆಟ್ ಟೇಕರ್ಗಳಾದರು. ಇದರಿಂದ ಗುಜರಾತ್ ಟೈಟಾನ್ಸ್ ಗೆಲುವಿಗೆ 180 ರನ್ನ ಅಗತ್ಯವಿದೆ.
ಟಾಸ್ ಆದ ಬೆನ್ನಲ್ಲೇ ಮಳೆ ಬಂದ ಕಾರಣ ಪಂದ್ಯ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದರು. ಕೆಕೆಆರ್ಗೆ ಉತ್ತಮ ಆರಂಭ ದೊರೆಯಲಿಲ್ಲ. ಗುಜರಾತ್ನ ಅನುಭವಿ ಬೌಲರ್ ಶಮಿ 19 ರನ್ ಗಳಿಸಿದ್ದ ಎನ್ ಜಗದೀಶನ್ ಅವರನ್ನು ಎಲ್ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು.
ಎನ್ ಜಗದೀಶನ್ ವಿಕೆಟ್ ನಂತರ ಬಡ್ತಿ ಪಡೆದು ಬಂದ ಶಾರ್ದೂಲ್ ಠಾಕೂರ್ ನಾಲ್ಕು ಬಾಲ್ ಎದುರಿಸಿ ಶೂನ್ಯಕ್ಕೆ ಔಟ್ ಆದರು. ಇವರ ನಂತರ ಬಂದ ಶತಕ ವೀರ ವೆಂಕಟೇಶ್ ಅಯ್ಯರ್ (14) ಜೋಶುವಾ ಲಿಟಲ್ಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಬಂದ ನಾಯಕ ನಿತೀಶ್ ರಾಣ (4) ಒಂದು ಬೌಂಡರಿ ಗಳಿಸಿ ಅದೇ ಓವರ್ನಲ್ಲಿ ಜೋಶುವಾ ಲಿಟಲ್ಗೆ ಬಲಿಯಾದರು.
ಒಂದೆಡೆ ವಿಕೆಟ್ ಪತನವಾಗುತ್ತಿದ್ದರೂ ರಹಮಾನುಲ್ಲಾ ಗುರ್ಬಾಜ್ ತಮ್ಮ ಆಟವನ್ನು ತಾಳ್ಮೆಯಿಂದ ಮುಂದುವರೆಸಿ ಅರ್ಧಶತಕ ದಾಖಲಿಸಿಕೊಂಡರು. ಪಂಚ ಸಿಕ್ಸ್ಗಳ ವೀರ ರಿಂಕು ಸಿಂಗ್ ಸಹ 19 ರನ್ಗೆ ಔಟ್ ಆದರು. 39 ಬಾಲ್ನಲ್ಲಿ 7 ಸಿಕ್ಸ್ ಮತ್ತು 5 ಬೌಂಡರಿಯಿಂದ 81 ರನ್ ಗಳಿಸಿ ಆಡುತ್ತಿದ್ದ ಗುರ್ಬಾಜ್ ನೂರ್ ಅಹ್ಮದ್ ವಿಕೆಟ್ ಒಪ್ಪಿಸಿದರು. ಕೊನೆಗೆ ಬಂದ ಬರ್ತಡೇ ಬಾಯ್ ಆಂಡ್ರೆ ರಸೆಲ್ 19 ಬಾಲ್ಗೆ 34 ರನ್ ಹೊಡೆದು ಕೊನೆಯ ಬಾಲ್ಗೆ ಔಟ್ ಆದರು. ಅವರ ಜೊತೆ ಕ್ರೀಸ್ನಲ್ಲಿದ್ದ ಡೇವಿಡ್ ವಿಶ್ ಅಜೇಯ 8 ರನ್ ಗಳಿಸಿದರು. ಗುಜರಾತ್ ಪರ ಶಮಿ 3, ನೂರ್ ಅಹ್ಮದ್ ಮತ್ತು ಜೋಶುವಾ ಲಿಟಲ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: KKR vs GT: ಕೋಲ್ಕತ್ತಾ ವಿರುದ್ಧ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ, ಮಳೆಯಿಂದ ಪಂದ್ಯ ವಿಳಂಬ