ETV Bharat / sports

ನಿಧಾನಗತಿ ಬೌಲಿಂಗ್​: ಕೆಕೆಆರ್​ ನಾಯಕ ರಾಣಾಗೆ 24 ಲಕ್ಷ ರೂ. ದಂಡ, ಪಂದ್ಯ ನಿಷೇಧ ಭೀತಿ - IPL 2023

ನಿಧಾನಗತಿ ಬೌಲಿಂಗ್​ನಿಂದಾಗಿ ಕೆಕೆಆರ್​ ತಂಡ ದಂಡದ ಶಿಕ್ಷೆಗೆ ಒಳಗಾಗಿದೆ. ತಂಡ ಮತ್ತೊಮ್ಮೆ ತಪ್ಪು ಮಾಡಿದಲ್ಲಿ ನಾಯಕ ನಿತೀಶ್ ರಾಣಾ ಒಂದು ಪಂದ್ಯಕ್ಕೆ ನಿಷೇಧಗೊಳ್ಳುವ ಭೀತಿಯಲ್ಲಿದ್ದಾರೆ.

ನಿಧಾನಗತಿ ಬೌಲಿಂಗ್
ನಿಧಾನಗತಿ ಬೌಲಿಂಗ್
author img

By

Published : May 15, 2023, 4:27 PM IST

ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಮತ್ತು ತಂಡಕ್ಕೆ ದಂಡ ವಿಧಿಸಲಾಗಿದೆ. ಈ ಸೀಸನ್​ನಲ್ಲಿ ತಂಡ ಎರಡನೇ ಬಾರಿಗೆ ತಪ್ಪು ಎಸಗಿದ ಕಾರಣ ನಾಯಕನಿಗೆ 24 ಲಕ್ಷ ರೂಪಾಯಿ, ಇಂಪ್ಯಾಕ್ಟ್​ ಪ್ಲೇಯರ್​ ಸೇರಿದಂತೆ ಆಡಿದ ಹನ್ನೊಂದರ ಬಳಗಕ್ಕೆ 6 ಲಕ್ಷ ರೂಪಾಯಿ ದಂಡ ಬಿದ್ದಿದೆ. ಇನ್ನೊಂದು ಬಾರಿ ಇದೇ ತಪ್ಪು ಮರುಕಳಿಸಿದಲ್ಲಿ ರಾಣಾ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ.

ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ನಿತೀಶ್​ ರಾಣಾ ಮತ್ತು ರಿಂಕು ಸಿಂಗ್​ ಅವರ ಭರ್ಜರಿ ಅರ್ಧಶತಕ ಬಲದಿಂದ 6 ವಿಕೆಟ್​ಗಳ ಗೆಲುವು ಸಾಧಿಸಿತು. ಟಾಸ್​ ಗೆದ್ದ ಸಿಎಸ್​ಕೆ ಬ್ಯಾಟಿಂಗ್​ ಆಯ್ದುಕೊಂಡಿತು. ಕೆಕೆಆರ್​ ತಂಡದ ಬಿಗಿ ಬೌಲಿಂಗ್​ ದಾಳಿಗೆ ಸಿಲುಕಿ 144 ರನ್​ಗಳ ಅಲ್ಪಮೊತ್ತ ದಾಖಲಿಸಿತು.

ಸ್ಪಿನ್​ ಮಾಂತ್ರಿಕರಾದ ವರುಣ್​ ಚಕ್ರವರ್ತಿ ಮತ್ತು ಸುನೀಲ್​ ನರೈನ್​ ತಲಾ 2 ವಿಕೆಟ್​ ಪಡೆದು ತಂಡವನ್ನು ಕಟ್ಟಿ ಹಾಕಿದರು. ಇದಲ್ಲದೇ ಉಳಿದ ಬೌಲರ್​ಗಳು ಕೂಡ ರನ್​ ಬಿಟ್ಟುಕೊಡದೇ ಕಾಡಿದರು. ಇದರಿಂದ ಅಂಕಪಟ್ಟಿಯಲ್ಲಿ ಟಾಪ್ 2 ರಲ್ಲಿರುವ ಸಿಎಸ್​ಕೆ ಸವಾಲಿನ ಮೊತ್ತ ಗಳಿಸುವಲ್ಲಿ ಎಡವಿತು.

ಸ್ಲೋ ಬೌಲಿಂಗ್​: ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಕೆಕೆಆರ್​ ನಿಧಾನಗತಿ ಬೌಲಿಂಗ್ ಮಾಡಿತು. ನಿಗದಿತ ಅವಧಿಗಿಂತಲೂ 2 ಓವರ್​ ಹಿಂದಿದ್ದ ಕಾರಣ ಶಿಕ್ಷೆಗೆ ಒಳಗಾಯಿತು. ಇದರಿಂದ ನಾಯಕ ರಾಣಾಗೆ ಶೇಕಡಾ 50 ರಷ್ಟು, ಬದಲಿ ಆಟಗಾರ ಸೇರಿ ಉಳಿದೆಲ್ಲಾ ಆಟಗಾರರಿಗೆ 6 ಲಕ್ಷ ಅಥವಾ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ.

ಇದಕ್ಕೂ ಮೊದಲು ಅಂದರೆ, ಮೇ 8 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿತೀಶ್ ರಾಣಾ ನೇತೃತ್ವದ ತಂಡ ನಿಧಾನಗತಿಯ ಓವರ್ ರೇಟ್‌ಗಾಗಿ ದಂಡನೆಗೆ ಒಳಗಾಗಿತ್ತು. ಮೊದಲ ತಪ್ಪಿಗಾಗಿ ರಾಣಾಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದೀಗ ಮತ್ತೊಮ್ಮೆ ತಂಡ ತಪ್ಪು ಮರುಕಳಿಸಿದ್ದು, ಇನ್ನೊಂದು ಬಾರಿ ನಿಧಾನಗತಿ ಬೌಲಿಂಗ್​ ಮಾಡಿದಲ್ಲಿ ನಾಯಕ ರಾಣಾ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ.

ರಿಂಕು- ರಾಣಾ ಫಿಫ್ಟಿ ಫಿಫ್ಟಿ: ಇನ್ನೂ, ಪಂದ್ಯದಲ್ಲಿ ಸುಲಭ ಗುರಿ ಇದ್ದರೂ ಒತ್ತಡಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ರಾಣಾ ಮತ್ತು ರಿಂಕು ಸಿಂಗ್​ರ ಭರ್ಜರಿ ಆಟ ಗೆಲುವು ತಂದುಕೊಟ್ಟಿತು. 33 ರನ್​ಗೆ 3 ವಿಕೆಟ್​ ಕಳೆದುಕೊಂಡಿದ್ದ ವೇಳೆ ಜೊತೆಯಾದ ಇಬ್ಬರೂ 99 ರನ್​ಗಳ ಸಹಭಾಗಿತ್ವ ನೀಡಿದರು. ಇದರಲ್ಲಿ ರಾಣಾ 44 ಎಸೆತಗಳಲ್ಲಿ ಔಟಾಗದೇ 57 ರನ್​ ಮಾಡಿದರೆ, ರಿಂಕು 43 ಬಾಲ್​ಗಳಲ್ಲಿ 54 ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಿಗದ ಫ್ಲೇಆಫ್​​ ಟಿಕೆಟ್​: ಈ ಸೋಲಿನಿಂದಾಗಿ ಮಹೇಂದ್ರ ಸಿಂಗ್​ ದೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಪ್ಲೇಆಫ್​ ಟಿಕೆಟ್​ ಖಚಿತದಿಂದ ತಪ್ಪಿಸಿಕೊಂಡಿತು. ಪಾಯಿಂಟ್​ ಪಟ್ಟಿಯಲ್ಲಿ 15 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಸಿಎಸ್​ಕೆಗೆ ಇನ್ನೊಂದು ಗೆಲುವು ಪಡೆದಲ್ಲಿ ಮೊದಲ ತಂಡವಾಗಿ ನಾಕೌಟ್​ ಪ್ರವೇಶಿಸಲಿದೆ. ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್​ ಈ ಪಂದ್ಯದ ಗೆಲುವಿನ ಮೂಲಕ 12 ಅಂಕ ಸಂಪಾದಿಸಿ 7 ನೇ ಸ್ಥಾನದಲ್ಲಿದೆ. ತಂಡ ನೌಕೌಟ್​ ಪ್ರವೇಶಿಸುವುದು ಕಠಿಣವಾಗಿದೆ.

ಓದಿ: ತನ್ನ ಶರ್ಟ್ ಮೇಲೆ ಧೋನಿ ಆಟೋಗ್ರಾಫ್​ ಪಡೆದ ಕ್ರಿಕೆಟ್‌ ದಿಗ್ಗಜ ಸುನೀಲ್ ಗವಾಸ್ಕರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.