ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಂಡದ ವಿರುದ್ಧದ (ಮೇ 1ರಂದು) ಕೊನೆಯ ಪಂದ್ಯದ ವೇಳೆ ತೊಡೆಗೆ ಗಂಭೀರ ಗಾಯವಾದ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದಲೇ ಹೊರಗುಳಿಯಲಿದ್ದಾರೆ. ಇಂದು ಲಕ್ನೋ ಸೂಪರ್ ಜೈಂಟ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುತ್ತಿದ್ದು, ಕೃನಾಲ್ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ.
-
See you back on the field soon @JDUnadkat
— IndianPremierLeague (@IPL) May 1, 2023 " class="align-text-top noRightClick twitterSection" data="
Wishing a quick recovery to the left-arm pacer 👍🏻👍🏻#TATAIPL | #LSGvRCB pic.twitter.com/w57d7DMadN
">See you back on the field soon @JDUnadkat
— IndianPremierLeague (@IPL) May 1, 2023
Wishing a quick recovery to the left-arm pacer 👍🏻👍🏻#TATAIPL | #LSGvRCB pic.twitter.com/w57d7DMadNSee you back on the field soon @JDUnadkat
— IndianPremierLeague (@IPL) May 1, 2023
Wishing a quick recovery to the left-arm pacer 👍🏻👍🏻#TATAIPL | #LSGvRCB pic.twitter.com/w57d7DMadN
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ಸ್ನಲ್ಲಿ ಅಭ್ಯಾಸದಲ್ಲಿ ತೊಡಗಿರುವಾಗ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದ ಅನುಭವ ವೇಗಿ ಜಯದೇವ್ ಉನದ್ಕತ್ ಅವರು ಸಹ ತಂಡದಿಂದ ಹೊರಗುಳಿಯಲ್ಲಿದ್ದಾರೆ. ಇನ್ನು ಅರ್ಧದಷ್ಟು ಪಂದ್ಯಗಳನ್ನು ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್‌ನಲ್ಲಿ ಆಡಬೇಕಿದೆ. ತಂಡ ಇಬ್ಬರು ಪರ್ಯಾಯ ಆಟಗಾರರನ್ನು ಹುಡಕಬೇಕಿದೆ. ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವೆಲ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರಕಟವಾದ ತಂಡದಲ್ಲಿ ಪರ್ಯಾಯ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಇದ್ದಾರೆ. ಬೌಲಿಂಗ್ನಲ್ಲಿ ಜಯದೇವ್ ಉನಾದ್ಕತ್ಗೆ ಅವಕಾಶ ಮಾಡಿಕೊಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡ್ರ್ ಗವಾಸ್ಕರ್ ಟ್ರೋಫಿಗೂ ಜಯದೇವ್ ಆಯ್ಕೆಯಾಗಿದ್ದರು. ಈ ವರ್ಷದ ರಣಜಿಯಲ್ಲಿ ಸೌರಾಷ್ಟ್ರ ಉನಾದ್ಕತ್ ನಾಯಕತ್ವ ಚಾಂಪಿಯನ್ ಆಗಿತ್ತು.
"ಕೆಎಲ್ ಪ್ರಸ್ತುತ ಲಕ್ನೋದಲ್ಲಿ ತಂಡದೊಂದಿಗೆ ಇದ್ದಾರೆ. ಆದರೆ, ಅವರು ಬುಧವಾರ ಸಿಎಸ್‌ಕೆ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ನಂತರ ಗುರುವಾರ ಶಿಬಿರದಿಂದ ನಿರ್ಗಮಿಸುತ್ತಿದ್ದಾರೆ. ಅವರ ಸ್ಕ್ಯಾನ್‌ಗಳನ್ನು ಮುಂಬೈನಲ್ಲಿ ಬಿಸಿಸಿಐ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ಮಾಡಲಾಗುತ್ತದೆ. ರಾಹುಲ್ ಅವರಿಗೆ ತಿಳಿದ ವೈದ್ಯಕೀಯ ಸಲಹೆಯನ್ನೇ ಜಯದೇವ್ ಪ್ರಕರಣದಲ್ಲೂ ನಿರ್ವಹಿಸಲಾಗುತ್ತದೆ" ಎಂದು ಬಿಸಿಸಿಐನ ಅನಾಮಧೇಯ ಮೂಲದಿಂದ ಮಾಹಿತಿ ದೊರೆತಿದೆ. ಇಲ್ಲಿಯವರೆಗೆ ಯಾವುದೇ ಸ್ಕ್ಯಾನ್ ಮಾಡಲಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.
"ಯಾರಾದರೂ ಈ ರೀತಿಯ ಗಾಯ ಅನುಭವಿಸಿದಾಗ, ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ನೋವು ಮತ್ತು ಊತ ಇರುತ್ತದೆ. ಊತವು ವಾಸಿಯಾಗಲು ಸುಮಾರು 24 ರಿಂದ 48 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಂತರ ನೀವು ಸ್ಕ್ಯಾನ್ ಮಾಡಬಹುದು. ಕೆಎಲ್ ರಾಹುಲ್ ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿದ್ದರಿಂದ, ಇನ್ನು ಮುಂದೆ ಐಪಿಎಲ್‌ನಲ್ಲಿ ಭಾಗವಹಿಸದಿರುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಸ್ಕ್ಯಾನ್‌ನ ನಂತರ ಗಾಯದ ಮಟ್ಟ ತಿಳಿಯಲಿದ್ದು ನಂತರ, ಬಿಸಿಸಿಐ ವೈದ್ಯಕೀಯ ತಂಡವು ಕ್ರಮವನ್ನು ನಿರ್ಧರಿಸುತ್ತದೆ" ಎಂದು ಅವರು ಹೇಳಿದ್ದಾರೆ.
"ಉನಾದ್ಕತ್ ಅವರ ಭುಜದ ಗಾಯ ಗಂಭಿರವಾಗಿಯೇ ಇದೆ. ಸ್ಕ್ಯಾನಿಂಗ್ ನಂತರ ಅವರ ಆರೋಗ್ಯದ ಸಂಪೂರ್ಣ ಮಾಹಿಸಿ ಸಿಗಲಿದೆ. ಈ ಆವೃತ್ತಿಯ ಐಪಿಎಲ್ನಿಂದ ಉನಾದ್ಕತ್ ಬಹುತೇಕ ಹೊರಗುಳಿಯ ಬೇಕಾಗುತ್ತದೆ. ಅವರ ಆರೋಗ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳೆ ಸುಧಾರಿಸಿಕೊಳ್ಳುತ್ತದೆ ಎಂದಾದಲ್ಲಿ ಅವರನ್ನು ತಂಡದಲ್ಲಿ ಮುಖ್ಯ ಆಟಗಾರನಾಗಿ ಮುಂದುವರೆಸಲಾಗುವುದು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: LSG vs CSK: ಲಕ್ನೋ ವಿರುದ್ಧ ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ