ETV Bharat / sports

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮತ್ತೋರ್ವ ಸ್ಟಾರ್​ ಆಟಗಾರನಿಗೆ ಕೊರೊನಾ - ಚೆನ್ನೈ ತಂಡದ ಬ್ಯಾಟಿಂಗ್​ ಕೊಚ್​ ಮೈಕಲ್ ಹಸ್ಸಿ

ಕೆಕೆಆರ್​ ತಂಡದ ಮತ್ತೋರ್ವ ಸ್ಟಾರ್​ ಆಟಗಾರನಿಗೆ ಕೊರೊನಾ ವಕ್ಕರಿಸಿದೆ. ಪ್ರಸ್ತುತ ಅಹಮದಾಬಾದ್‌ನಲ್ಲಿರುವ ಸೀಫರ್ಟ್​ನನ್ನು ಚೆನ್ನೈಗೆ ಕಳಿಸಲಾಗುವುದು. ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಚೆನ್ನೈ ತಂಡದ ಬ್ಯಾಟಿಂಗ್​ ಕೋಚ್​ ಮೈಕಲ್ ಹಸ್ಸಿ ಕೂಡಾ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಮತ್ತೊಬ್ಬ ಸ್ಟಾರ್​ ಆಟಗಾರನಿಗೆ ಕೊರೊನಾ

author img

By

Published : May 8, 2021, 10:30 AM IST

ಆಕ್ಲೆಂಡ್: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮತ್ತೋರ್ವ ಆಟಗಾರನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ನ್ಯೂಜಿಲ್ಯಾಂಡ್​ ತಂಡದ ಸ್ಟಾರ್​ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್​ಗೆ ಕೊರೊನಾ ವಕ್ಕರಿಸಿದೆ. "ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ ಸೀಫರ್ಟ್​ ತವರಿಗೆ ಮರಳುವ ಮುನ್ನ ಕೋವಿಡ್​-19 ಪರೀಕ್ಷೆಗೆ ಒಳಪಟ್ಟಿದ್ದು, ಈ ವೇಳೆ ಅವರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಪ್ರಸ್ತುತ ಅಹಮದಾಬಾದ್‌ನಲ್ಲಿರುವ ಸೀಫರ್ಟ್ ನನ್ನು ಚೆನ್ನೈಗೆ ಕಳಿಸಲಾಗುವುದು. ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಚೆನ್ನೈ ತಂಡದ ಬ್ಯಾಟಿಂಗ್​ ಕೋಚ್​ ಮೈಕಲ್ ಹಸ್ಸಿ ಕೂಡಾ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

"ಟಿಮ್ ಸೀಫರ್ಟ್ ಕೋವಿಡ್​-19 ದೃಢವಾಗಿದ್ದು, ಅವರಿಗೆ ಚೆನ್ನೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನಂತರ ಅವರು ಗುಣಮುಖರಾದ ಮೇಲೆ ಮತ್ತೊಮ್ಮೆ ಪರೀಕ್ಷೆ ನಡೆಸಿ ತವರಿಗೆ ಕಳುಹಿಸಲಾಗುತ್ತದೆ. ಅಲ್ಲಿಯವರೆಗೂ ಅವರು ಭಾರತದಲ್ಲೇ ಇರಲಿದ್ದಾರೆ " ಎಂದು ನ್ಯೂಜಿಲೆಂಡ್ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗದ ಬೌಲರ್ ಸಂದೀಪ್ ವಾರಿಯರ್​ಗೆ ಕೊರೊನಾ ಸೋಂಕು ತಗುಲಿದ್ದು, ಈಗ ಟಿಮ್ ಸೀಫರ್ಟ್​ಗೂ ಕೂಡಾ ಕೋವಿಡ್​-19 ವಕ್ಕರಿಸಿದೆ.

ಓದಿ :IPLನಿಂದ ಮನೆಗೆ ಬರುತ್ತಿದ್ದಂತೆ ಆಸ್ಪತ್ರೆಯಲ್ಲಿ ಚೇತನ್​ ಸಕಾರಿಯಾ.. ಕೋವಿಡ್ ಸೋಂಕಿತ ತಂದೆಯ ಆರೈಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.