ನವದೆಹಲಿ: ಇಂಡಿಯಾನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸೋತು ಆಘಾತ ಅನುಭವಿಸಿತ್ತು. ಆದರೆ, ಗುರುವಾರ ತವರು ನೆಲ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲೆ ಸವಾರಿ ಮಾಡಿದ ರೈಡರ್ಸ್ ಗೆಲುವಿನ ಕೇಕೆ ಹಾಕಿದೆ. ಇದಕ್ಕೆ ಪ್ರಮುಖ ಕಾರಣದ ತಂಡದ ಆಟಗಾರರ ಅದ್ಭುತ ಪ್ರದರ್ಶನ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಕೋಲ್ಕತ್ತಾ ಮಿಂಚುವ ಮೂಲಕ ಭರ್ಜರಿ ಜಯ ದಾಖಲಿಸಿದೆ. ಇದರಲ್ಲೂ ಶಾರ್ದೂಲ್ ಠಾಕೂರ್ ತಮ್ಮ ಮಿಂಚಿನ ಆಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
-
𝘖𝘩 𝘮𝘺 𝘓𝘰𝘳𝘥! 🙌😍@imShard #KKRvRCB | #AmiKKR | #TATAIPL 2023 pic.twitter.com/Uc3Bv2EmO6
— KolkataKnightRiders (@KKRiders) April 6, 2023 " class="align-text-top noRightClick twitterSection" data="
">𝘖𝘩 𝘮𝘺 𝘓𝘰𝘳𝘥! 🙌😍@imShard #KKRvRCB | #AmiKKR | #TATAIPL 2023 pic.twitter.com/Uc3Bv2EmO6
— KolkataKnightRiders (@KKRiders) April 6, 2023𝘖𝘩 𝘮𝘺 𝘓𝘰𝘳𝘥! 🙌😍@imShard #KKRvRCB | #AmiKKR | #TATAIPL 2023 pic.twitter.com/Uc3Bv2EmO6
— KolkataKnightRiders (@KKRiders) April 6, 2023
ಹೌದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ನಿಧಾನವಾಗಿ ಆಲ್ರೌಂಡರ್ ಆಟಗಾರರಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇದನ್ನು ಆರ್ಸಿಬಿ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ಶಾರ್ದೂಲ್ ಠಾಕೂರ್ ತೋರಿದ ಅದ್ಭುತ ಪ್ರದರ್ಶನವೇ ನಿರೂಪಿಸುತ್ತದೆ. ಟಾಸ್ ಸೋತು ಮೊದಲ ಬ್ಯಾಟಿಂಗ್ಗೆ ಇಳಿದಿದ್ದ ಕೆಕೆಆರ್ ತಂಡ 89 ರನ್ಗಳಿಗೆ ಪ್ರಮುಖ ಐದು ವಿಕೆಟ್ಗಳು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ (57) ಹೊರತು ಪಡಿಸಿ ಉಳಿದ ನಾಲ್ವರು ಆಟಗಾರರು ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದರು.
-
Without a doubt! 👑🔝@BKTtires | #KKRvRCB | #AmiKKR | #TATAIPL 2023 pic.twitter.com/TjYXtR3Xcd
— KolkataKnightRiders (@KKRiders) April 6, 2023 " class="align-text-top noRightClick twitterSection" data="
">Without a doubt! 👑🔝@BKTtires | #KKRvRCB | #AmiKKR | #TATAIPL 2023 pic.twitter.com/TjYXtR3Xcd
— KolkataKnightRiders (@KKRiders) April 6, 2023Without a doubt! 👑🔝@BKTtires | #KKRvRCB | #AmiKKR | #TATAIPL 2023 pic.twitter.com/TjYXtR3Xcd
— KolkataKnightRiders (@KKRiders) April 6, 2023
ಇದರ ನಡುವೆ ರಿಂಕು ಸಿಂಗ್ ಜೊತೆಗೂಡಿದ ಶಾರ್ದೂಲ್ ಠಾಕೂರ್ ಅಮೋಘವಾದ ಇನ್ನಿಂಗ್ಸ್ ಕಟ್ಟಿದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ವೇಗಿ ಶಾರ್ದೂಲ್ ಪರಿಣಾಮಕಾರಿ ಮತ್ತು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುವ ಮೂಲಕ ಕೆಕೆಆರ್ ತಂಡಕ್ಕೆ ಆಸರೆಯಾದರು. ಅಲ್ಲದೇ, ತಂಡವು ಬೃಹತ್ ಮೊತ್ತ ಪ್ರೇರಿಸುವಲ್ಲೂ ನೆರವಾದರು. ಈಡನ್ ಗಾರ್ಡನ್ಸ್‌ನಲ್ಲಿ 29 ಬಾಲ್ಗಳಲ್ಲಿ 68 ರನ್ಗಳನ್ನು ಬಾರಿಸಿ ಮಿಂಚು ಹರಿಸಿದರು.
ಪ್ರಸಕ್ತ ಐಪಿಎಲ್ನಲ್ಲಿ ವೇಗದ ಅರ್ಧಶತಕ ದಾಖಲು: ಜನಪ್ರಿಯ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ ಮಾರ್ಚ್ 31ರಿಂದ ಆರಂಭವಾಗಿದೆ. ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ಮತ್ತು ಬೆಂಗಳೂರು ನಡುವೆ 9ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಶಾರ್ದೂಲ್ ಠಾಕೂರ್ ಕೇವಲ 20 ಎಸೆತಗಳಲ್ಲಿ 50 ರನ್ ಸಿಡಿಸಿದರು. ಇದರೊಂದಿಗೆ ಪ್ರಸಕ್ತ ಐಪಿಎಲ್ 2023ರಲ್ಲಿ ಅವರು ವೇಗದ ಅರ್ಧಶತಕವನ್ನು ದಾಖಲಿಸಿದರು.
-
Just 𝙇𝙤𝙧𝙙 doing 𝙇𝙤𝙧𝙙 things...👑💜@imShard | #KKRvRCB | #AmiKKR | #TATAIPL 2023 pic.twitter.com/FEhY9VR7B1
— KolkataKnightRiders (@KKRiders) April 6, 2023 " class="align-text-top noRightClick twitterSection" data="
">Just 𝙇𝙤𝙧𝙙 doing 𝙇𝙤𝙧𝙙 things...👑💜@imShard | #KKRvRCB | #AmiKKR | #TATAIPL 2023 pic.twitter.com/FEhY9VR7B1
— KolkataKnightRiders (@KKRiders) April 6, 2023Just 𝙇𝙤𝙧𝙙 doing 𝙇𝙤𝙧𝙙 things...👑💜@imShard | #KKRvRCB | #AmiKKR | #TATAIPL 2023 pic.twitter.com/FEhY9VR7B1
— KolkataKnightRiders (@KKRiders) April 6, 2023
ಅಲ್ಲದೇ, ರಾಜಸ್ಥಾನ ರಾಯಲ್ಸ್ ತಂಡ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅವರ ದಾಖಲೆಯನ್ನು ಕೆಕೆಆರ್ ವೇಗಿ ಸರಿಗಟ್ಟಿದರು. ಭಾನುವಾರ ನಡೆದಿದ್ದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಕೂಡ ಬಿರುಸಿನ ಬ್ಯಾಟಿಂಗ್ ಮೂಲಕ 20 ಎಸೆತಗಳಲ್ಲಿ 50 ರನ್ಗಳು ಕಲೆ ಹಾಕಿದ್ದರು. ಇದು ಈ ಋತುವಿನಲ್ಲಿ ಇದುವರೆಗಿನ ಮೂಡಿ ಬಂದ ವೇಗದ ಅರ್ಧಶತಕವಾಗಿತ್ತು. ಆದರೆ, ವೇಗಿ ಬೌಲರ್ ಶಾರ್ದೂಲ್ ಜೋಸ್ ದಾಖಲೆಯನ್ನು ಸರಿಗಟ್ಟಿ, ಅನೇಕ ಅನುಭವಿ ಬ್ಯಾಟರ್ಗಳನ್ನು ಹುಬ್ಬೇರಿಸುವಂತೆ ಮಾಡಿದರು. ಬೌಲಿಂಗ್ನೊಂದಿಗೆ ಬ್ಯಾಟಿಂಗ್ನಲ್ಲೂ ತಮ್ಮ ಕೌಶಲ್ಯ ಪ್ರದರ್ಶಿಸುವ ಮೂಲಕ ತಾವೊಬ್ಬ ಆಲ್ರೌಂಡರ್ ಎಂಬ ಛಾಪು ಮೂಡಿಸಿದರು. ಜೊತೆಗೆ ಅಗತ್ಯವಿದ್ದಾಗ ತಂಡಕ್ಕೆ ಉತ್ತಮವಾಗಿ ಬ್ಯಾಟ್ ಮಾಡಬಲ್ಲರು ಎಂಬುವುದನ್ನೂ ಶಾರ್ದೂಲ್ ಠಾಕೂರ್ ನಿರೂಪಿಸಿದರು. ನಂತರದಲ್ಲಿ ಎರಡು ಓವರ್ಗಳು ಬೌಲಿಂಗ್ ಮಾಡಿದ ಅವರು ಒಂದು ವಿಕೆಟ್ ಕೂಡ ಪಡೆದರು.
ಇದನ್ನೂ ಓದಿ: IPL 2023: ಕೆಕೆಆರ್ ದಾಳಿಗೆ ಆರ್ಸಿಬಿ ತತ್ತರ: 123 ರನ್ಗೆ ಸರ್ವಪತನ, ಹೀನಾಯ ಸೋಲು