ETV Bharat / sports

ಸಿಎಸ್​ಕೆ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ಭರ್ಜರಿ ಜಯ.. ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆರ್​ಆರ್​

ಗುರುವಾರ ನಡೆದ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಆರ್​ಆರ್​ ತಂಡ ಸೋಲಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್​ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

author img

By

Published : Apr 28, 2023, 1:51 AM IST

Updated : Apr 28, 2023, 6:50 AM IST

Jaiswal, spinners guide RR to 32-run win over CSK
ಸಿಎಸ್​ಕೆ ವಿರುದ್ಧ ರಾಜಸ್ಥಾನ ರಾಯಲ್ಸ್​ಗೆ ಭರ್ಜರಿ ಜಯ

ಜೈಪುರ: ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸುವಲ್ಲಿ ಯಶಸ್ವಿ ಆದರು. ಗುರುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್‌ಗಳು ಚೆನ್ನೈ ಸೂಪರ್ ಕಿಂಗ್ಸ್‌ಗೆ 32 ರನ್‌ಗಳ ಸೋಲುಣಿಸಿ, ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಆರ್ ಆರ್​ ತಂಡದ ಸ್ಪಿನ್ನರ್​ಗಳಾದ ಆಡಮ್ ಝಂಪಾ 3 ಓವರ್‌ಗಳಲ್ಲಿ 22ರನ್​ ನೀಡಿ ಮೂರು ವಿಕೆಟ್​ ಉರುಳಿಸಿದರು. ರವಿಚಂದ್ರನ್ ಅಶ್ವಿನ್ 35 ರನ್​ ನೀಡಿ ಪ್ರಮುಖ ಎರಡು ವಿಕೆಟ್​ ಪಡೆದರು. ಇನ್ನು ಚೆನ್ನೈ ಸೂಪರ್​ ಕಿಂಗ್ಸ್ ಪರ ರುತುರಾಜ್ ಗಾಯಕ್‌ವಾಡ್ 47 ಮತ್ತು ಶಿವಂ ದುಬೆ 52 ರನ್​ ಬಾರಿಸಿದರಾದರೂ ಸಿಎಸ್‌ಕೆ 6 ವಿಕೆಟ್‌ಗೆ 170 ರನ್​ ಗಳಿಸಲಷ್ಟೇ ಸಾಧ್ಯವಾಯಿತು. ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 32 ರನ್​ಗಳ ಸೋಲು ಅನುಭವಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿತು. ಇನ್ನು ಈ ಗೆಲುವಿನ ಮೂಲಕ ಆರ್​ಆರ್​ ತಂಡ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಇನ್ನು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 202 ರನ್​ ಬಾರಿಸುವ ಮೂಲಕ ಧೋನಿ ಪಡೆಗೆ ಗೆಲ್ಲಲು 203 ರನ್​ಗಳ ಗುರಿ ನೀಡಿತು. ಆರ್​ ಆರ್​ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗು ಜೋಸ್ ಬಟ್ಲರ್ ಪವರ್​ ಫ್ಲೇನಲ್ಲಿ ಉತ್ತಮ ಆಟವಾಡುವ ಮೂಲಕ ತಂಡದ ಮೊತ್ತ 50 ರನ್​ ಗಡಿ ದಾಟಿಸಿದರು. ಹೀಗೆ ಆರ್ಕಷಕ ಬೌಂಡರಿ ಸಿಕ್ಸರ್​ ಹೊಡೆಯುತ್ತಿದ್ದ ಈ ಜೋಡಿಯನ್ನು 9ನೇ ಓವರ್​ನಲ್ಲಿ ರವೀಂದ್ರ ಜಡೇಜಾ ಬೌಲಿಂಲಿಗ್ ಮಾಡಿ ಜೋಸ್ ಬಟ್ಲರ್​ನನ್ನು ಔಟ್​ ಮಾಡುವ ಮೂಲಕ ಬೇರ್ಪಡಿಸಿದರು. ಜೋಸ್ ಬಟ್ಲರ್ 21 ಬಾಲ್​ನಲ್ಲಿ 27 ರನ್ ಗಳಿಸಿ ಶಿವಂ ದುಬೆಗೆ ಕ್ಯಾಚ್​ ಕೊಟ್ಟು ಪೆವಿಲಿಯನ್​ಯತ್ತ ಹೆಜ್ಜೆಹಾಕಿದರು.

ಬಳಿಕ ಬಂದ ರಾಜಸ್ಥಾನ ನಾಯಕ ಸಂಜು ಸಾಮ್ಸನ್​ ಉತ್ತಮ ಆಟ ಆಡುವ ಭರವಸೆ ಮೂಡಿಸಿದ್ದರು. ಆದ್ರೆ ಸ್ವಲ್ಪ ಸಮಯದ ಬಳಿಕ ಮತ್ತೆ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಬಿಗಿ ಬೌಲಿಂಗ್​ ದಾಳಿ ಮುಂದುವರಿಸಿದ ​ತುಷಾರ್ ದೇಶಪಾಂಡೆ 13ನೇ ಓವರ್​ನಲ್ಲಿ ಸಂಜು ಸಾಮ್ಸನ್​ರನ್ನು (17) ಹಾಗು ಅದೇ ಓವರ್​ನಲ್ಲಿ ಮತ್ತೊಬ್ಬ ಆರಂಭಿಕ ಸ್ಫೋಟಕ ಬ್ಯಾಟ್​ಮನ್​ ಯಶಸ್ವಿ ಜೈಸ್ವಾಲ್ ರನ್​ಗೆ ಕಟ್ಟಿ ಹಾಕಿದರು. ಯಶಸ್ವಿ ಜೈಸ್ವಾಲ್ 43 ಎಸೆತಗಳಲ್ಲಿ8 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನ ಬಾರಿಸುವ ಮೂಲಕ 77 ರನ್​ಗಳನ್ನ ಕಲೆ ಹಾಕಿದರು.

ಇನ್ನು ಧ್ರುವ್ ಜುರೆಲ್ 34 ರನ್​ಗಳನ್ನ ಹೊಡೆಯುವ ಮೂಲಕ ತಂಡದ ಮೊತ್ತ ಏರಲು ಕಾರಣರಾದರು. ಇನ್ನು ಪಡಿಕಲ್ ಅಜೇಯ 27 ರನ್ ಗಳನ್ನು ಬಾರಿಸುವ ಮೂಲಕ ಸಂಜು ಸ್ಯಾಮ್ಸನ್​ ಪಡೆ ಬರೋಬ್ಬರಿ 202 ರನ್​ಗಳನ್ನು ಪೇರಿಸಿತು. ಅಂತಿಮವಾಗಿ ಚೆನ್ನೈ ಸೂಪರ್​ ಕಿಂಗ್ಸ್​ಗೆ 203 ರನ್​ಗಳ ಗೆಲುವಿನ ಗುರಿ ನೀಡಿತು. ಈ ಮೊತ್ತ ಬೆನ್ನಟ್ಟಿದ ಧೋನಿ ಪಡೆ 170 ರನ್​ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಅಂತಿಮವಾಗಿ ತಂಡ 32 ರನ್​ಗಳ ಸೋಲು ಅನುಭವಿಸುವ ಮೂಲಕ ನಿರಾಶೆ ಅನುಭವಿಸಿತು.

ಓದಿ: ಐಪಿಎಲ್​ : ಆರೆಂಜ್​, ಪರ್ಪಲ್​ ಕ್ಯಾಪ್​ಗೆ ಆಟಗಾರರ ಪೈಪೋಟಿ, ಅಗ್ರಸ್ಥಾನಕ್ಕೆ ತಂಡಗಳ ಹೋರಾಟ

Last Updated : Apr 28, 2023, 6:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.