ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ವಿಚಾರವಾಗಿ ಉಳಿದ ತಂಡಗಳು ಅಸಮಾಧಾನ ಹೊರಹಾಕಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕೊರೊನಾ ವೈರಸ್ ಸೋಂಕಿಗೊಳಗಾಗಿದ್ದ ಪ್ಲೇಯರ್ ದೇವದತ್ ಪಡಿಕ್ಕಲ್ ವರದಿ ಈಗಾಗಲೇ ನೆಗೆಟಿವ್ ಬಂದಿದೆ. ಇದಾದ ಬಳಿಕ ಅವರಿಗೆ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ನೀಡುವ ಬದಲು ತಂಡದಲ್ಲಿ ಸೇರ್ಪಡೆ ಮಾಡಿಕೊಂಡಿರುವುದು ಇತರ ತಂಡಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಆರ್ಸಿಬಿ ತಂಡ ಈಗಾಗಲೇ ಬಯೋ ಬಬಲ್ಗೆ ಪ್ರವೇಶ ಪಡೆದುಕೊಂಡಿದ್ದು, ದೇವದತ್ ಪಡಿಕ್ಕಲ್ ಕೂಡ ಇದರಲ್ಲಿದ್ದಾರೆ. ಇದು ಇತರ ಪ್ರಾಂಚೈಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಾರ್ಚ್ 22ರಂದು ಕೋವಿಡ್ ಸೋಂಕಿಗೊಳಗಾಗಿದ್ದ ಈ ಪ್ಲೇಯರ್ ಕ್ವಾರಂಟೈನ್ಗೊಳಗಾಗಿದ್ದರು. ಆದಾದ ಬಳಿಕ ನೆಗೆಟಿವ್ ವರದಿ ಬಂದಿದ್ದು, ಏಪ್ರಿಲ್ 7ರಂದು ಬೆಂಗಳೂರಿನಿಂದ ನೇರವಾಗಿ ಚೆನ್ನೈಗೆ ಬಂದು ಬಯೋ ಬಬಲ್ ಸೇರಿಕೊಂಡಿದ್ದಾರೆ. ಇದೇ ವಿಚಾರ ಇತರ ಪ್ರಾಂಚೈಸಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ದೇವದತ್ ಪಡಿಕ್ಕಲ್ ಕೋವಿಡ್ ಟೆಸ್ಟ್ ಮತ್ತೆ ನೆಗೆಟಿವ್: ಆರ್ಸಿಬಿ ಸೇರಿದ ಯುವ ಓಪನರ್
ಆದರೆ, ಆರ್ಸಿಬಿ ಮ್ಯಾನೆಜ್ಮೆಂಟ್ ಹೇಳುವ ಪ್ರಕಾರ ಬಿಸಿಸಿಐ ನೀಡಿರುವ ಎಲ್ಲ ಪ್ರೊಟೋಕಾಲ್ ನಾವು ಅನುಸರಣೆ ಮಾಡಿದ್ದು, ಪಡಿಕ್ಕಲ್ ಅವರ ಮೂರು ವರದಿ ನೆಗೆಟಿವ್ ಬಂದಿವೆ. ಇದರ ಸುರಕ್ಷತೆ ಹಾಗೂ ಯೋಗಕ್ಷೇಮದ ಬಗ್ಗೆ ಖಚಿತಪಡಿಸಿಕೊಳ್ಳಲು ವೈದ್ಯಕೀಯ ತಂಡ ನಿರಂತರ ಸಂಪರ್ಕದಲ್ಲಿತ್ತು ಎಂದಿದ್ದಾರೆ.
ನಿಯಮ ಹೇಳಿದ್ದೇನು!?
ಬಿಸಿಸಿಐ ಪ್ರೊಟೋಕಾಲ್ ಪ್ರಕಾರ ತಂಡ ಸೇರಲು ಆಗಮಿಸುವ ಪ್ಲೇಯರ್ಸ್ ಬಯೋ ಬಬಲ್ ಸೇರುವ ಮೊದಲು ಏಳು ದಿನ ಹೋಟೆಲ್ನಲ್ಲಿ ಕ್ವಾರಂಟೈನ್ ಆಗುವುದು ಕಡ್ಡಾಯ. ಅಭ್ಯಾಸ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೊದಲು ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಿದೆ.
ಆದರೆ ದೇವದತ್ ಪಡಿಕ್ಕಲ್ ಕೊರೊನಾ ಕ್ವಾರಂಟೈನ್ ವೇಳೆ ಬೆಂಗಳೂರಿನಲ್ಲಿದ್ದು, ವರದಿ ನೆಗೆಟಿವ್ ಬರುತ್ತಿದ್ದಂತೆ ಚೆನ್ನೈಗೆ ಬಂದು ತಂಡ ಸೇರಿಕೊಂಡಿದ್ದಾರೆ. ಇವರು ಏಳು ದಿನ ಕ್ವಾರಂಟೈನ್ಗೊಳಗಾಗಿಲ್ಲ ಎಂಬುದು ಇತರ ಪ್ರಾಂಚೈಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಮುಂಬೈ ವಿರುದ್ಧದ ಮೊದಲ ಪಂದ್ಯದಿಂದ ದೇವದತ್ ಪಡಿಕ್ಕಲ್ ಹೊರಗೆ ಉಳಿದಿದ್ದಾರೆ.