ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 24ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೈಪೋಟಿ ನಡೆಸಲಿವೆ. ವಿರಾಟ್ ಮತ್ತು ಧೋನಿ ಅಭಿಮಾನಿಗಳಿಗೆ ಈ ಪಂದ್ಯ ಹಬ್ಬವೇ ಸರಿ. ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ವಾರ್ ಕೂಡ ಜೋರಾಗಿದೆ.
ಕಳೆದ ಪಂದ್ಯದಲ್ಲಿ ಇದೇ ಪಿಚ್ನಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮಣಿಸಿತ್ತು. ಇದೇ ಭರವಸೆಯಲ್ಲಿ ಫಾಫ್ ಪಡೆ ಇದೆ. ಆದರೆ ಮೊನ್ನೆ ಹಗಲು ಪಂದ್ಯ ನಡೆದಿದ್ದು, ಇಂದಿನ ಪಂದ್ಯಕ್ಕೆ ಹೋಲಿಸಿದರೆ ಕೊಂಚ ವಿಭಿನ್ನ ವಿಕೆಟ್ ಕಾಣಬಹುದು. ಪಂದ್ಯದಲ್ಲಿ ಟಾಸ್ ತುಂಬಾ ಮುಖ್ಯವಾಗಲಿದೆ. ಬೌಂಡರಿ ಗೆರೆ ಹತ್ತಿರ ಇರುವುದರಿಂದ ಬೃಹತ್ ರನ್ ಗಳಿಗೆ ನಿರೀಕ್ಷೆ ಇದೆ. ಚೇಸಿಂಗ್ ತಂಡಕ್ಕೆ ಚಿನ್ನಸ್ವಾಮಿ ಮೈದಾನ ಸಹಕಾರಿಯಾಗಿದ್ದು ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
-
The big game excitement is in the air! 🔥
— Royal Challengers Bangalore (@RCBTweets) April 17, 2023 " class="align-text-top noRightClick twitterSection" data="
The 12th Man Army is pumped for our biggest rivalry to resume! 😍🙌
Bring on #RCBvCSK 👊#PlayBold #ನಮ್ಮRCB #IPL2023 @hombalefilms pic.twitter.com/O0BolVb41a
">The big game excitement is in the air! 🔥
— Royal Challengers Bangalore (@RCBTweets) April 17, 2023
The 12th Man Army is pumped for our biggest rivalry to resume! 😍🙌
Bring on #RCBvCSK 👊#PlayBold #ನಮ್ಮRCB #IPL2023 @hombalefilms pic.twitter.com/O0BolVb41aThe big game excitement is in the air! 🔥
— Royal Challengers Bangalore (@RCBTweets) April 17, 2023
The 12th Man Army is pumped for our biggest rivalry to resume! 😍🙌
Bring on #RCBvCSK 👊#PlayBold #ನಮ್ಮRCB #IPL2023 @hombalefilms pic.twitter.com/O0BolVb41a
ಆರ್ಸಿಬಿಗೆ 'ಬಿಗ್3' ಆಸರೆ: ರಾಯಲ್ ಚಾಲೆಂಜರ್ಸ್ ತಂಡ ಬಿಗ್ ತ್ರೀಗಳ ಮೇಲೆ ಅವಲಂಬಿತವಾಗಿದೆ. ಆರಂಭಿಕರಾದ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ ಕಳೆದ ಪಂದ್ಯಗಳಲ್ಲಿ ತಂಡಕ್ಕೆ ಬಲವಾಗಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಲಯ ಕಂಡುಕೊಂಡಿಲ್ಲ. ಫಿನಿಶರ್ ಡಿಕೆ ಬ್ಯಾಟ್ ಘರ್ಜಿಸುತ್ತಿಲ್ಲ. ಹಾಗೆಯೇ ಮಹಿಪಾಲ್ ಲೊಮ್ರೊರ್, ಶಹಬಾಜ್ ಅಹ್ಮದ್ ಸಹ ರನ್ ತರುತ್ತಿಲ್ಲ. ಈ ಸ್ಥಾನದಲ್ಲಿ ರಜತ್ ಪಾಟಿದಾರ್ ಕೊರತೆ ಎದ್ದು ಕಾಣುತ್ತಿದೆ.
ವಿರಾಟ್, ಮ್ಯಾಕ್ಸ್ವೆಲ್ಗೆ ಜಡೇಜಾ ಅಸ್ತ್ರ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಆರ್ಸಿಬಿಗೆ ಹೆಚ್ಚು ಕಂಟಕವಾಗಲಿದ್ದಾರೆ. ಅಂಕಿ-ಅಂಶಗಳ ಪ್ರಕಾರ ವಿರಾಟ್ ಮತ್ತು ಗ್ಲೆನ್ ಹೆಚ್ಚು ಬಾರಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ದಾರೆ. ಫಾಪ್ ಸಿಎಸ್‌ಕೆ ಮಾಜಿ ಆಟಗಾರರಾಗಿದ್ದು, ಇದಕ್ಕೆ ಪ್ರತಿ ತಂತ್ರ ಹೂಡುತ್ತಾರಾ ಅನ್ನೋದನ್ನು ಕಾದುನೋಡಬೇಕು. ಮೊದಲ ಬಾರಿಗೆ ಫಾಫ್ ಸಿಎಸ್‌ಕೆ ವಿರುದ್ಧ ನಾಯಕತ್ವ ನಿಭಾಯಿಸುತ್ತಿದ್ದಾರೆ.
ಆರ್ಸಿಬಿ ವಿರುದ್ಧ ಧೋನಿ ಬೆಸ್ಟ್ ಪ್ರದರ್ಶನ: ಚೆನ್ನೈ ನಾಯಕ ಧೋನಿ ಆರ್ಸಿಬಿ ವಿರುದ್ಧ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಅವರ ಬ್ಯಾಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘರ್ಜಿಸಿದೆ. ಆದರೆ ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಪ್ರಶ್ನೆ. ಮಂಡಿ ನೋವಿನಿಂದ ಬಳಲುತ್ತಿರುವ ಅವರು ಕಳೆದ ಪಂದ್ಯದಲ್ಲಿ ಎರಡು ರನ್ ಗಳಿಸಲು ಕಷ್ಟಪಡುತ್ತಿದ್ದರು.
-
Take a closer look at the Challenge that awaits us tonight with Moeen Ali!
— Chennai Super Kings (@ChennaiIPL) April 17, 2023 " class="align-text-top noRightClick twitterSection" data="
Get. Set. #WhistlePodu 🦁#RCBvCSK #Yellove 💛 @TVSEurogrip pic.twitter.com/gPksA3rc0g
">Take a closer look at the Challenge that awaits us tonight with Moeen Ali!
— Chennai Super Kings (@ChennaiIPL) April 17, 2023
Get. Set. #WhistlePodu 🦁#RCBvCSK #Yellove 💛 @TVSEurogrip pic.twitter.com/gPksA3rc0gTake a closer look at the Challenge that awaits us tonight with Moeen Ali!
— Chennai Super Kings (@ChennaiIPL) April 17, 2023
Get. Set. #WhistlePodu 🦁#RCBvCSK #Yellove 💛 @TVSEurogrip pic.twitter.com/gPksA3rc0g
ಮುಖಾಮುಖಿ: ಹೆಡ್ ಟು ಹೆಡ್ ಪಂದ್ಯದ ಲೆಕ್ಕದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಪಾರಮ್ಯವಿದೆ. ಇಲ್ಲಿಯ ವರೆಗೆ ಎರಡೂ ತಂಡಗಳು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ 20 ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಪಂದ್ಯಗಳನ್ನು ಗೆದ್ದಿದೆ. ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಸಿಎಸ್‌ಕೆ ಗೆಲುವು ಸಾಧಿಸಿದೆ. 4 ಮೇ 2022 ರಂದು ಪುಣೆಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಆರ್ಸಿಬಿ 13 ರನ್‌ಗಳಿಂದ ಸಿಎಸ್ಕೆಯನ್ನು ಸೋಲಿಸಿತು.
ಸಂಭಾವ್ಯ ತಂಡಗಳು..: ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯ್‌ಕುಮಾರ್
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು/ಆಕಾಶ್ ಸಿಂಗ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ /ವಿಕೆಟ್ ಕೀಪರ್), ಡ್ವೈನ್ ಪ್ರಿಟೋರಿಯಸ್/ಮತೀಶ್ ಪತಿರಾನ, ಮಹೀಶ್ ತೀಕ್ಷಣ, ತುಷಾರ್ ದೇಶಪಾಂಡೆ
ಪಂದ್ಯ ಆರಂಭ: ರಾತ್ರಿ 7.30ಕ್ಕೆ. ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊಸಿನೆಮಾ ಆ್ಯಪ್
ಇದನ್ನೂ ಓದಿ: ಸ್ಯಾಮ್ಸನ್ - ಶಿಮ್ರಾನ್ ಅಬ್ಬರದ ಬ್ಯಾಟಿಂಗ್: ಟೈಟಾನ್ಸ್ ವಿರುದ್ಧ 'ರಾಯಲ್' ಆದ ರಾಜಸ್ಥಾನ