ಮುಂಬೈ : ಕರ್ನಾಟಕದ ಪ್ರತಿಭಾನ್ವಿತ ಬ್ಯಾಟರ್ ಮಯಾಂಕ್ ಅಗರ್ವಾಲ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೆಚ್ಚು ಕಡೆಗಣಿಸಲ್ಪಡುತ್ತಿರುವ ಭಾರತೀಯ ಆಟಗಾರ ಎಂದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 3 ವರ್ಷಗಳಿಂದ ಐಪಿಎಲ್ನಲ್ಲಿ ಉತ್ತಮ ರನ್ಗಳಿಸುತ್ತಿದ್ದರೂ, ಆತನಿಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಅಗರ್ವಾಲ್ 2021ರಲ್ಲಿ ಪಂಜಾಬ್ ಕಿಂಗ್ಸ್ ಪರ 12 ಪಂದ್ಯಗಳಿಂದ 40ರ ಸರಾಸರಿ ಮತ್ತು 140ರ ಸ್ಟ್ರೈಕ್ ರೇಟ್ನಲ್ಲಿ 441 ರನ್ಗಳಿಸಿದ್ದಾರೆ.
ಈ ಆವೃತ್ತಿಯಲ್ಲಿ ಗರಿಷ್ಠ ರನ್ ಗಳಿಸಿದ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಆವರ ಐಪಿಎಲ್ ದಾಖಲೆಗಳನ್ನು ಗಮನಿಸಿದರೆ ಅವರು ಐಪಿಎಲ್ನಲ್ಲಿ ಕಡೆಗಣನೆಗೆ ಒಳಗಾಗುತ್ತಿರುವ ಭಾರತೀಯರ ಬ್ಯಾಟರ್ ಎಂದು ಹೇಳುವುದರಲ್ಲಿ ಯಾವುದೇ ಹಿಂಜರಿಕೆಯಿಲ್ಲ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಮಯಾಂಕ್ ಐಪಿಎಲ್ನಲ್ಲಿ ತುಂಬಾ ಕಡೆಗಣಿಸುತ್ತಿರುವ ಆಟಗಾರ ಎಂದು ನಾನು ಭಾವಿಸುತ್ತೇನೆ. ಅವರೊಬ್ಬ ಮ್ಯಾಚ್ ವಿನ್ನರ್ ಮತ್ತು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಆಡಿರುವ 12 ಪಂದ್ಯಗಳಲ್ಲಿ ಅದ್ಭುತ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಆದರೂ ಅವರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಧವನ್, ಪೃಥ್ವಿ ಶಾ, ಕೆ ಎಲ್ ರಾಹುಲ್, ಪಡಿಕ್ಕಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಅದು ಸರಿ. ಆದರೆ, ಮಯಾಂಕ್ ಯಾರೂ ಮಾತನಾಡುವುದಿಲ್ಲವೇಕೆ? ಅವರು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇದನ್ನೂ ಓದಿರಿ: T20 World cup : ವಿಶ್ವಕಪ್ಗಾಗಿ ಟೀಂ ಇಂಡಿಯಾ ಹೊಸ ಜರ್ಸಿ ಅನಾವರಣ
ನನಗೆ ಅವರ ಕಡಗಣೆನೆಯ ಬಗ್ಗೆ ತುಂಬಾ ಬೇಸರವಿದೆ. ರಾಹುಲ್ ಜೊತೆ ಪಂಜಾಬ್ ಕಿಂಗ್ಸ್ಗೆ ಇನ್ನಿಂಗ್ಸ್ ಆರಂಭಿಸಿದರೂ, ರಾಹುಲ್ ದೊಡ್ಡ ಮಟ್ಟದ ಆಟಗಾರ ಎನಿಸಿಕೊಂಡರೆ, ಈತನ ಆಟ ಮಾತ್ರ ಬೆಳಕಿಗೆ ಬರುತ್ತಿಲ್ಲ ಎಂದು ಚೋಪ್ರಾ ಹೇಳಿದ್ದಾರೆ.
ಇಂದಿನ ಪಂದ್ಯದಲ್ಲಿ ಡೆಲ್ಲಿಗೆ ಸೋಲು ಎಂದ ಚೋಪ್ರಾ
ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಸೋಲು ಕಾಣಲಿದೆ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಡೆಲ್ಲಿ ವಿರುದ್ಧ ಗೆಲುವು ಸಾಧಿಸಿ ಈಗಾಗಲೇ ಚೆನ್ನೈ ಫೈನಲ್ ಪ್ರವೇಶ ಪಡೆದುಕೊಂಡಿದೆ. ಆರ್ಸಿಬಿ ವಿರುದ್ಧ ಗೆದ್ದಿರುವ ಕೆಕೆಆರ್ ಇಂದು ಡೆಲ್ಲಿ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.